
ಮಧುಗಿರಿ, ಫೆ. ೯- ದೇಶವನ್ನು ಬದಲಾಯಿಸುವಂತಹ ಶಕ್ತಿ ಶಿಕ್ಷಣಕ್ಕಿದ್ದು, ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಹೆಚ್ಚು ಗಮನಹರಿಸಿ ಸಮಾಜದ ಬದಲಾವಣೆಗೆ ಮುಂದಾಗಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ಬಾಲಗುರುಮೂರ್ತಿ ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿನ ಕೆ.ಎನ್.ಆರ್. ಸಭಾಂಗಣದಲ್ಲಿ ಜ್ಞಾನಪ್ರಿಯ ಪದವಿ ಪೂರ್ವ ಕಾಲೇಜಿನ ವತಿಯಿಂದ ಏರ್ಪಡಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಜ್ಞಾನಪ್ರಿಯ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಂದ ಉತ್ತಮವಾದ ಸಮಾಜ ನಿರ್ಮಾಣ ಸಾಧ್ಯವಿದೆ. ತಮ್ಮ ತಂದೆ-ತಾಯಿ, ಪೋಷಕರಿಗೆ ಗೌರವ ತರುವಂತಹ ಕಾರ್ಯಗಳಲ್ಲಿ ಭಾಗವಹಿಸಬೇಕು ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಉನ್ನತ ಅಂಕಗಳಿದ್ದರೆ ಸಾಲದು. ಕೆಲ ದಿನಗಳ ಹಿಂದೆ ಪೊಲೀಸ್ ಪೇದೆ ಆಯ್ಕೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಪರೀಕ್ಷೆ ನಡೆದುದ್ದು ಇದ್ದಂತಹ ಹುದ್ದೆಗಳ ಸಂಖ್ಯೆ ೬೩೦ ಆದರೆ ಪರೀಕ್ಷೆ ಬರೆದವರು ೧೮ ಲಕ್ಷ ಅಭ್ಯರ್ಥಿಗಳು. ಈ ರೀತಿ ಸ್ಪರ್ಧೆ ಏರ್ಪಟ್ಟರೆ ಸರ್ಕಾರಿ ಹುದ್ದೆಗಳು ದೊರಕುವುದು ಬಹಳ ಕಷ್ಟಕರ .ಜ್ಞಾನಪ್ರಿಯ ಪಿ.ಯು ಕಾಲೇಜಿನ ರಮೇಶ್ ರವರು ಮುನ್ನಡೆಸುತ್ತಿರುವುದು ಶ್ಲಾಘನೀಯವಾಗಿದೆ. ಜಿಲ್ಲೆಯ ಕೆಲವೊಂದು ಕಾಲೇಜುಗಳಲ್ಲಿ ವಿಜ್ಞಾನ ವಿಭಾಗ ಹೊಂದಿರುವ ಕಾಲೇಜುಗಳಲ್ಲಿ ಈ ಕಾಲೇಜು ಒಂದಾಗಿದೆ. ವಿದ್ಯಾರ್ಥಿಗಳು ತಮ್ಮ ಪದವಿ ಪೂರ್ಣಗೊಳ್ಳುವವರೆವಿಗೂ ವಿವಾಹದ ಬಂಧನಕ್ಕೆ ಒಳಗಾಗದಿರಿ ಎಂದರು.
ಪಿ ಎಸ್ ಐ ಚಂದ್ರಶೇಖರ್ ಮಾತನಾಡಿ, ಪ್ರಸ್ತುತ ಸಮಾಜದಲ್ಲಿರುವ ಜನರಲ್ಲಿ ಗೌರವ, ಆತ್ಮಸಾಕ್ಷಿ, ಭಯ ಇವುಗಳು ಜನರಲ್ಲಿ ಮರೆಯಾಗುತ್ತಿವೆ. ವಿದ್ಯಾರ್ಥಿಗಳು ತಮ್ಮ ಬಳಿ ಚಾಲನಾ ಪತ್ರ, ಜೀವ ವಿಮಾಪತ್ರ, ಹೆಲ್ಮೆಟ್ ಧರಿಸಿ ವಾಹನಗಳನ್ನು ಚಲಾಯಿಸಬೇಕು ನೀವುಗಳು ಸುರಕ್ಷತಾ ಕ್ರಮಗಳನ್ನು ಮೀರಿ ಕಾನೂನುಗಳನ್ನು ಉಲ್ಲಂಘಿಸಿದಾಗ ನಿಮಗೆ ಅರಿವು ಮೂಡಿಸುವ ಕಾರ್ಯಕ್ರಮ ಹೆಚ್ಚಾಗುತ್ತಾ ಹೋಗುತ್ತವೆ ಎಂದು ಹೇಳಿದರು.
ಶಾಲೆಗಳಲ್ಲಿ ದಂಡನೆ ಕಡಿಮೆಯಾಗಿರುವುದರಿಂದ ಠಾಣೆಗಳಲ್ಲಿ ಪ್ರಕರಣಗಳು ಹೆಚ್ಚು ದಾಖಲಾಗುತ್ತಿವೆ. ಜಪಾನ್ ದೇಶದಲ್ಲಿನ ವಿದ್ಯಾರ್ಥಿಗಳು ತಮ್ಮ ಕೆಲಸ ಕಾರ್ಯಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಆದರೆ ನಮ್ಮ ದೇಶದಲ್ಲಿನ ಶಾಲೆಗಳಲ್ಲಿನ ಮಕ್ಕಳು ಏನಾದರೂ ಕಸ ಹಾಗೂ ಮತ್ತಿತರ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಅಂತಹ ಸಣ್ಣ ಪುಟ್ಟ ತುಣುಕುಗಳನ್ನು ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚುವಂತಹ ಮನಸ್ಥಿತಿ ಜನರಲ್ಲಿ ಎದುರಾಗಿದೆ. ನಾನು ವಿದ್ಯಾರ್ಥಿಯಾಗಿದ್ದ ಗುರುಗಳು ಹೇಳಿದ ಮಾರ್ಗದರ್ಶನದ ಫಲದಿಂದಾಗಿ ಪೋಲಿಸ್ ಅಧಿಕಾರಿಯಾಗಿದ್ದು ತಾವುಗಳು ಸಹ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗ ಬೇಕು. ವಿದ್ಯಾರ್ಥಿಗಳು ಸ್ವಾವಲಂಭಿಗಳಾಗಿ ಉತ್ತಮ ಜೀವನ ನಡೆಸುವಂತಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಳೆದ ವರ್ಷ ಪದವಿ ಪೂರ್ವ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಹರ್ಷಿಯಾ ಕೌಸರ್, ಸೂರ್ಯ, ಸಂದೀಪ್, ವಿದ್ಯಾ, ಶ್ರೀನಿವಾಸ್, ರಕ್ಷಿತಾ ರವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ ಎಂ ಐ ಡಿ ಎಫ್ ಸಂಸ್ಥೆಯ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲ ಜಿ.ಆರ್ ರಮೇಶ್, ಜಿಲ್ಲಾ ನೌಕರರ ಸಂಘದ ಅಧ್ತಕ್ಷ ರಂಗಪ್ಪ, ಆಡಳಿತಾಧಿಕಾರಿ ರಂಗಾಧಾಮಯ್ಯ, ಕೆಪಿಸಿಸಿ ಸದಸ್ಯ ಡಾ.ರಂಗಶ್ಯಾಮಣ್ಣ, ತಾಲ್ಲೂಕು ಅನುದಾನ ರಹಿತ/ಸಹಿತ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಶಂಕರನಾರಾಯಣ, ಮೌಂಟ್ ವ್ಯೂ ಶಾಲೆಯ ಕಾರ್ಯದರ್ಶಿ ಜಿ.ಎಸ್.ಜಗದೀಶ್‌ಕುಮಾರ್, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎನ್ ಮಹಾಲಿಂಗೇಶ್, ಪ್ರಾಚಾರ್ಯರಾದ ವೇದಮೂರ್ತಿ,ಈಶ್ವರಯ್ಯ, ಪತ್ರಕರ್ತ ಸಂಘದ ಅಧ್ಯಕ್ಷ ರಾಜೇಂದ್ರ ಎಂ.ಎನ್. ಮತ್ತಿತರರು ಭಾಗವಹಿಸಿದ್ದರು.






























