Home ಜಿಲ್ಲೆ ಕಲಬುರಗಿ ವಿದ್ಯೆಗೆ ಜಾತಿಯಿಲ್ಲ; ಮನುಷ್ಯನಿಗೇಕೆ ಜಾತಿ : ಆಲೂರು ಶ್ರೀ

ವಿದ್ಯೆಗೆ ಜಾತಿಯಿಲ್ಲ; ಮನುಷ್ಯನಿಗೇಕೆ ಜಾತಿ : ಆಲೂರು ಶ್ರೀ

ಜೇವರಗಿ,ಮಾ.11: ತಾಲೂಕಿನ ದತ್ತನಗರದಲ್ಲಿರುವ ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಹಾಗೂ ಅರುಣೋದಯ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಶಾಲಾ ಆವರಣದಲ್ಲಿ 19ನೇ ವಾರ್ಷಿಕೋತ್ಸವ ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಆಲೂರು ಕೆಂಚವೃಷಬೇಂದ್ರ ಶಿವಾಚಾರ್ಯರು, ವಿದ್ಯೆ ಇರುವವನ ಹತ್ತಿರ ದೇವರು ಇರುತ್ತಾನೆ; ವಿದ್ಯೆಗೆ ಜಾತಿಯಿಲ್ಲ. ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರವೂ ಅಗತ್ಯ. ಸಂಸ್ಕಾರವಿಲ್ಲದ ವಿದ್ಯೆ ಸಂಪೂರ್ಣವಾಗುವುದಿಲ್ಲ ಎಂದು ಹೇಳಿದರು. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಶಿಸ್ತು ಹಾಗೂ ಸಂಸ್ಕಾರ ಮುಖ್ಯವೆಂದು ಅವರು ತಿಳಿಸಿದರು.ಕಾರ್ಯಕ್ರಮವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಎಸ್. ಪಾಟೀಲ ನರಿಬೋಳ ಉದ್ಘಾಟಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯ ಕಾರ್ಯದರ್ಶಿ ರಾಜಶೇಖರ ಸಾಹುಸಿರಿ ಮಾತನಾಡಿ, ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದು ಶಿಕ್ಷಕರು ಮತ್ತು ಪಾಲಕರ ಪ್ರಮುಖ ಕರ್ತವ್ಯ ಎಂದು ಅವರು ತಿಳಿಸಿದರು.ಜೇವರ್ಗಿ ವೃತ್ತದ ಸಿಪಿಐ ರಾಜೇಸಾಬ್ ನದಾಫ್ ಜ್ಯೋತಿ ಬೆಳಗಿಸಿದರು. ಇದೇ ಸಂದರ್ಭದಲ್ಲಿ ಬಸವರಾಜ ಎಸ್ ಪಾಟೀಲ್ ನರಿಬೋಳ ಹಾಗೂ ಮದರಿ ಗ್ರಾಪಂ ಅಧ್ಯಕ್ಷ ವಿಜಯಕುಮಾರ ಬೆಲ್ಲದ ಅವರಿಗೆ ಸನ್ಮಾನ ನೆರವೇರಿಸಲಾಯಿತು.ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.
ಸಂಸ್ಥೆಯ ಅಧ್ಯಕ್ಷರಾದ ಹಣಮಂತ್ರಾಯಗೌಡ ಎಸ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಆಡಳಿತಾಧಿಕಾರಿ ಮಹಾಲಕ್ಷ್ಮೀ ಎಚ್. ಪಾಟೀಲ ಅವರ ನೇತೃತ್ವದಲ್ಲಿ ಶಿಕ್ಷಕರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಸಿಪಿಐ ರಾಜೇಸಾಬ್ ನದಾಫ್, ವಿಜಯಕುಮಾರ ಕೆ ಹಿರೇಮಠ,ಶರಣಗೌಡ ಪಾಟೀಲ್ ಯಲಗೋಡ್, ಎಸ್.ಕೆ. ಬಿರಾದಾರ್, ಸಾತಪ್ಪ ಮೇತ್ರಿ, ಗೊಲ್ಲಾಳಪ್ಪ ಯಡ್ರಾಮಿ, ಸಂಗಮೇಶ ಸಂಕಾಲಿ, ಪ್ರಭು ಜಾದವ್, ಸುರೇಶ ಪಾಟೀಲ್ ನೇದಲಗಿ, ಮರೆಪ್ಪ ಬೇಗಾರ್, ಅನೀಲ್ ಪಾಟೀಲ್, ರಾಜಶೇಖರಯ್ಯ ಹಿರೇಮಠ, ಸುರೇಶ ಹಿರೇಮಠ, ಸಿದಲಿಂಗ್ ಚೌದ್ರಿ, ಗುರು ರಾವೂರ್, ವಿಜಯಕುಮಾರ ಬೆಲ್ಲದ್, ಶ್ರೀಕಾಂತ ಬೂದಿಹಾಳ, ರಮೇಶ ಕೊಂಡಗೂಳಿ, ಭಗವಂತ್ರಾಯ ಮದರಿ, ಶಿವು ಚೌಕಾನೂರ ಅರಳಗುಂಡಗಿ, ಭಗವಂತ್ರಾಯ ಗೌನಳ್ಳಿ, ಕೊಣ್ಣೂರ್, ಉಮೇಶ ಪಾಟೀಲ್ ಸೇರಿದಂತೆ ಅನೇಕ ಗಣ್ಯರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.