
ಇAಡಿ:ಮೇ.೨೯: ಮಕ್ಕಳು ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ತಳಪಾಯದಲ್ಲಿಯೇ ಉತ್ತಮ ಶಿಕ್ಷಣ ಕೊಡಿಸಬೇಕು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ನೀಡಿದಾಗ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಬುಧವಾರದಂದು ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಜಟ್ಟಿಂಗೇಶ್ವರ ಕೋಚಿಂಗ್ ಕ್ಲಾಸಿನ ಸಮಾರೋಪ ಸಮಾರಂಭವನ್ನು ಉದ್ಧೇಶಿಸಿ ಅವರು ಮಾತನಾಡಿದರು.
ವಿದ್ಯೆಯೇ ನಮ್ಮ ಬಾಳಿನ ಬೆಳಕು, ವಿದ್ಯೆಯಿಂದ ಬದುಕು ಬೆಳಗಲು ಸಾಧ್ಯ. ಪ್ರತಿಯೊಬ್ಬರೂ ವಿದ್ಯಾಭ್ಯಾಸವನ್ನು ಚೆನ್ನಾಗಿ ಪಡೆದು, ಮುಂದಿನ ಜೀವನ ಸುಂದರಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರೌಢ ಶಾಲಾ ಶಿಕ್ಷಕ ರವಿ ಗಿಣ್ಣಿ ಮಾತನಾಡಿ, ಅಡುಗೆ ಹಾಳಾದರೆ ಒಂದು ದಿನ ನಷ್ಟ, ಬೆಳೆ ಹಾಳಾದರೆ ಒಂದು ವರ್ಷ ನಷ್ಟ. ಆದರೆ ವಿದ್ಯಾಭ್ಯಾಸ ಹಾಳಾದರೆ ಇಡೀ ಬದುಕೇ ನಷ್ಟವಾಗುತ್ತದೆ. ವಿದ್ಯಾರ್ಥಿ ಜೀವನ ಬಂಗಾರದAತ ಜೀವನ.
ಹಾಗಾಗಿ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ, ಪರಿಶ್ರಮದಿಂದ ಚೆನ್ನಾಗಿ ಓದಿ, ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಟ್ಟಪ್ಪ ಸಾಲೋಟಗಿ ಮಾತನಾಡಿ, ಮಕ್ಕಳನ್ನು ಸುಸಂಸ್ಕೃತ ಮತ್ತು ಸಚ್ಛಾರಿತ್ರ್ಯವುಳ್ಳ ಪ್ರಜೆಗಳನ್ನಾಗಿಸುವ ಮೂಲಕ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಎಲ್ಲ ಪೂರಕ ಕಾರ್ಯಗಳನ್ನು ಪಾಲಕ ಪೆuಟಿಜeಜಿiಟಿeಜ?ಷಕರು ಮಾಡಬೇಕಿದೆ ಎಂದರು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೋಭಾ ಗಿಣ್ಣಿ-ಪ್ರಥಮ, ಸವಿತಾ ಮರಬಾದ-ದ್ವಿತೀಯ, ಕೀರ್ತಿ ಪರಗೊಂಡ-ತೃತೀಯ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಲಕ್ಷ್ಮೀ ಜೇವೂರ-ಪ್ರಥಮ, ಐಶ್ವರ್ಯ ಪೂಜಾರಿ-ದ್ವಿತೀಯ, ಸ್ನೇಹಾ ಶಿರಕನಹಳ್ಳಿ- ತೃತೀಯ ಸ್ಥಾನ ಪಡೆದು ಗ್ರಾಮದ ಕೀರ್ತಿ ಹೆಚ್ಚಿಸಿದ ಮಕ್ಕಳನ್ನು ಸನ್ಮಾನಿಸಲಾಯಿತು.
ಮಲ್ಲಪ್ಪ ಪೂಜಾರಿ ಹಾಗೂ ಬೀರಣ್ಣ ಪೂಜಾರಿ ಜ್ಯೋತಿ ಬೆಳಗಿಸಿದರು. ಮಾಳ್ಳಪ್ಪ ಪೂಜಾರಿ ನೇತೃತ್ವ ವಹಿಸಿದ್ದರು. ಜಟ್ಟೆಪ್ಪ ಮಾವಿನಹಳ್ಳಿ, ಲಕ್ಷ್ಮಣ ಪೂಜಾರಿ, ಜಟ್ಟೆಪ್ಪ ಪೂಜಾರಿ, ನಿಂಗಪ್ಪ ಪೂಜಾರಿ, ಶ್ರೀಶೈಲ ಗುನ್ನಾಪುರ, ಶರಣಪ್ಪ ಪೂಜಾರಿ, ಜಟ್ಟಪ್ಪ ಝಳಕಿ, ಶರಣಪ್ಪ ದಳವಾಯಿ,
ಸುದರ್ಶನ ಬೇನೂರ, ಜಟಿಂಗರಾಯ ಮರಡಿ, ಗಜೇಶ್ವರ ಗಿಣ್ಣಿ, ಭೀರಪ್ಪ ಹೊನ್ನಳ್ಳಿ, ಸಿಂಧೂರ ಪೂಜಾರಿ, ಮಾಳಪ್ಪ ನಿಂಬಾಳ ಹಾಗೂ ಶಿಕ್ಷಕರಾದ ಡಿ ಎಸ್ ಹಿರೇಕುರಬರ, ಎ ಎಂ ಝಳಕಿ, ವ್ಹಿ ಡಿ ಗಿಣ್ಣಿ, ಆರ್ ಬಿ ಝಳಕಿ, ಪ್ರಜ್ವಲ ಕುಲಕರ್ಣಿ ಸೇರಿದಂತೆ ಮಕ್ಕಳು, ಪಾಲಕರು, ತಾಯಂದಿರು ಭಾಗವಹಿಸಿದ್ದರು.