ವಿಜಯಪುರ : ಅ.22: ಪರಿಸರ ಸಂರಕ್ಷಣೆಗೆ ಕಡ್ಡಾಯವಾಗಿ ಪರಿಸರ ಸ್ನೇಹಿ ಗಣಪತಿ ಸ್ಥಾಪನೆ ಮಾಡಬೇಕು. ಪೂರ್ವಜರು ನಮಗೆ ಉತ್ತಮ ಪರಿಸರ ನೀಡಿದ್ದಾರೆ ನಾವು ಸಹ ಇಂದಿನ ಮತ್ತು ಮುಂದಿನ ಪೀಳಿಗೆಗೆ ಪರಿಸರ ಸಮತೋಲನ ಕಾಪಾಡುವ ನಮ್ಮೆಲ್ಲರ ಕತ9ವ್ಯವಾಗಿದೆ ಎಂದು ಮಹಾನಗರಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜ ಚ ನಿ ದತ್ತಿ. ಲಿಂ ಗುರುಬಾಯಿ ಬಸನಗೌಡ ಪಾಟೀಲ ದತ್ತಿ. ಸುಮಿತ್ರಾ ಶಂಕರಪ್ಪ ಸೋನಾರ ದತ್ತಿ ಕಾರ್ಯಕ್ರಮ ಉದ್ಘಾಟಿಸಿದ ಶಿವರುದ್ರ ಬಾಗಲಕೋಟ ಮಾತನಾಡಿ ಗಣೇಶ ಹಬ್ಬ ದೇಶದಾದ್ಯಂತ ಆಚರಿಸುತ್ತಿದ್ದೇವೆ ಆದರೆ ಪರಿಸರ ಸಂರಕ್ಷಣೆಯ ಗಣೇಶ ಮೂರ್ತಿ ಮಾಡುವ ಅತ್ಯವಶ್ಯವಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ತಿಕೋಟಾ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಮಾತನಾಡಿ ದತ್ತಿ ನಿಧಿ ಕಾರ್ಯಕ್ರಮಗಳಿಂದ ನಾಗರಿಕ ಸಮಾಜದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಾಮಾಣಿಕ ಪ್ರಯತ್ನ ಕಸಾಪ ಮಾಡುತ್ತಿದೆ. ದತ್ತಿ ನಿಧಿ ನೀಡಿದ ಮಹನೀಯರು ಸಮಾಜ ಸ್ಪಂದಿಸು ವಿಷಯಗಳ ಆಯ್ಕೆ ಮಾಡಿರುವದು ಅತ್ಯಂತ ಶ್ಲಾಘನೀಯ ಎಂದರು.
ಶ್ರೀ ಜ ಚ ನಿ ಅವರ ಸಾಹಿತ್ಯ ಜೀವನ ಕುರಿತು ವಿಶ್ರಾಂತ ಪ್ರಾಚಾರ್ಯ ಅರವಿಂದ ಶ ಕಂಚ್ಯಾಣಿ ಮಾತನಾಡಿ 300 ಕ್ಕೂ ಹೆಚ್ಚು ಪುಸ್ತಕ ಬರೆದು ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ವಿಜಯಪುರ ಶ್ರೀ ಸಿದ್ದೇಶ್ವರ ದೇವಸ್ಥಾನ ಸಮಿತಿಯ ಆವ್ಹಾನ ಮೇರೆಗೆ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳು ಪ್ರವಚನ ಮಾಡಿದ್ದಾರೆಂದರು.
ಪರಿಸರ ಸ್ನೇಹಿ ಗಣಪತಿ ಹಾಗು ಪರಿಸರ ಸಂರಕ್ಷಣೆಯ ಕ್ರಮಗಳು ಕುರಿತು ಡಾ ಆನಂದ ಕುಲಕರ್ಣಿ ಮಾತನಾಡುತ್ತ ಪರಿಸರ ಸಮತೋಲನ ಕಾಪಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಮಣ್ಣಿನ ಗಪಪತಿ ಮಾತ್ರ ಪ್ರತಿಸ್ಥಾಪಿಸಬೇಕು. ನೀರು ಶುದ್ಧೀಕರಣ ಉಳಿಸಿಕೊಳ್ಳಬೇಕು. ವಾತಾವರಣ ಪರಿಶುದ್ಧವಾಗಿರದೇಕು. ಅದಕ್ಕಾಗಿ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮಾತ್ರ ಕುಶಲಕಮಿ9ಗಳು ಸಿದ್ಧತೆ ಮಾಡಬೇಕೆಂದರು.
ಆಧ್ಯಾತ್ಮಿಕ ಪ್ರವಚನಗಳ ಕುರಿತು ಉಪನ್ಯಾಸ ನೀಡಿದ ಸಿಕ್ಯಾಬ ಪ ಪೂ ಮಹಿಳಾ ಕಾಲೇಜಿನ ಉಪನ್ಯಾಸಕ ಯು ಎನ್ ಕುಂಟೋಜಿ ಮಾತನಾಡಿಮುಕ್ತಿಗೆ ಸಾಧನೆ ಅಧ್ಯಾತ್ಮ. ಸೂಫಿಗಳು.ಸಂತರು. ಶರಣರು ಮಹಾಪುರುಷರು ಆಧ್ಯಾತ್ಮಿಕ ಜೀವನಕ್ಕೆ ಪ್ರಾಧ್ಯಾನತೆ ನೀಡಿ ಶ್ರೇಷ್ಠರೆಸಿಕೊಂಡರು. ನಾವೇನು ಬಹು ದಿನ ಈ ಮಣ್ಣಿನ ಮೇಲೆ ಇರುವದಿಲ್ಲ. ಒಂದು ದಿನ ಎಲ್ಲರೂ ಮಣ್ಣಿನ ಕೆಳಗೆ ಹೋಗಲೆಬೇಕು ಎಂಬ ಕಟು ಸತ್ಯ ನುಡಿ ಅರಿತು ಸಾಗಬೇಕು ಎಂದರು
ಕಸಾಪ ಪದಾಧಿಕಾರಿಗಳಾದಮಹಮ್ಮದಗೌಸ ಹವಾಲ್ದಾರ ಸ್ವಾಗತಿಸಿ ಗೌರವಿಸಿದರು. ಅಭಿμÉೀಕ ಚಕ್ರವರ್ತಿ ಪ್ರಾಸ್ತಾವಿಕ ಮಾತನಾಡಿದರುಶಿಲ್ಪಾ ಭಸ್ಮೆ ನಿರೂಪಿಸಿದರು. ಮಮತಾ ಮುಳಸಾವಳಗಿ ವಂದಿಸಿದರು. ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ. ಭಾಗೀರಥಿ ಸಿಂಧೆ. ಶೋಭಾ ಬಡಿಗೇರ .ಹುಸೇನ ಬಾಗಾಯತ ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ವಾತಾ9 ಮತ್ತು ಪ್ರಚಾರ ಇಲಾಖೆ ವಿಶ್ರಾಂತ ನಿರ್ದೇಶಕ ಮಲ್ಲಿಕಾರ್ಜುನ ಕೆಳಗಡೆ ಯವರನ್ನು ಕಸಾಪ ದಿಂದ ಗೌರವಿಸಿ ಸನ್ಮಾನಿಸಿದರು. ರವಿ ಕಿತ್ತೂರ. ಪೆÇ್ರ ಬಿ ಎಮ್ ಅಜೂರ. ಕೆ ಎಸ್ ಹಣಮಾಣಿ ಪೆÇ್ರ ಸಿದ್ದಣ್ಣ ಸಾತಲಗಾಂವ ಗಂಗಮ್ಮ ರೆಡ್ಡಿ ಎನ್ ಆರ್ ಕುಲಕರ್ಣಿ. ವ್ಹಿ ಎಸ್ ಖಾಡೆ ಪಕ್ರುದ್ದೀನ ವಾಲಿಕಾರ.ಲಕ್ಷ್ಮಿ ಬಿರಾದಾರ ಅಹಮ್ಮದ ವಾಲಿಕಾರ. ಸಿದ್ದಪ್ಪ ಮಾನೆ ಜಿ ಎಸ್ ಬಳ್ಳೂರ. ಎ ಡಿ ಮುಲ್ಲಾ .ಮಹಾದೇವಿ ತೇಲಗಿ ಶಹಾಪುರ ಬಿರಾದಾರ. ಎ ಎಂ ಹಳ್ಳೂರ. ಸಂಗನಗೌಡ ಗೆಜ್ಜಿ. ಮುಂತಾದವರು ಉಪಸ್ಥಿತರಿದ್ದರು.

























