ಬರಿದಾಪೂರ್ ಆಶ್ರಮದಲ್ಲಿ ದತ್ತ ಜಯಂತಿ ವೈಭವ : ಡಿ. ೪ರಂದು ವಿಶೇಷ ಕಾರ್ಯಕ್ರಮ

ಬೀದರ:ನ.೨೯:ತೆಲಂಗಾಣದ ಜಹೀರಾಬಾದ್ ಸಮೀಪದ ಬರಿದಾಪೂರ್ ಶ್ರೀ ದತ್ತಗಿರಿ ಮಹಾರಾಜ ಆಶ್ರಮದಲ್ಲಿ ದತ್ತ ಜಯಂತಿ ಪ್ರಯುಕ್ತ ನವೆಂಬರ್ ೨೭ರಿಂದ ಸಿಖರ ಪೂಜೆ, ಧ್ವಜಾರೋಹಣ, ದೀಪಾರಾಧನೆ, ಭಜನೆ-ಕೀರ್ತನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿವೆ.
ಡಿಸೆಂಬರ್ ೪ರಂದು ಸಂಜೆ ೫ಕ್ಕೆ ನಡೆಯುವ ಪ್ರಮುಖ ದತ್ತ ಜಯಂತಿ ಸಮಾರಂಭದಲ್ಲಿ ರಾಜಕೀಯ ಮುಖಂಡರು ಹಾಗೂ ಆಶ್ರಮದ ಹಿರಿಯರು ಭಾಗವಹಿಸಲಿದ್ದು, ಶ್ರೀ ಶ್ರೀ ಶ್ರೀ ಅವಧೂತ ಗಿರಿ ಮಹಾರಾಜರು ಸಾನಿಧ್ಯ ವಹಿಸಲಿದ್ದಾರೆ.
ಬೀದರ್ ದತ್ತಗಿರಿ ಮಹಾರಾಜ್ ಶಿಕ್ಷಣ ಸಂಸ್ಥೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಬೇಕೆಂದು ಆಶ್ರಮದ ಪ್ರಮುಖರು ಕೋರಿದ್ದಾರೆ