ಭಾವೈಕ್ಯತೆ ಸಾರುವ ಜನತಾ ಕಾಲೊನಿಯ ದುರ್ಗಾ ಪ್ರತಿಷ್ಠಾಪನೆ

ಔರಾದ್ : ಅ.೨:ಪಟ್ಟಣದ ಜನತಾ ಕಾಲೊನಿಯಲ್ಲಿ ಹಿಂದೂ ಮುಸ್ಲಿಂ ಸಮುದಾಯದ ಜನರು ಸೇರಿ ಜಯ ಭವಾನಿ ಮಿತ್ರ ಮಂಡಳಿಯ ಪ್ರತಿಷ್ಠಾಪಿಸಿದ ದುರ್ಗಾ ಪ್ರತಿಷ್ಠಾಪನೆ ಭಾವೈಕ್ಯತೆಯ ಸಂದೇಶ ಸಾರುತ್ತದೆ.
ಪ್ರತಿ ವರ್ಷ ದಸರಾ ಹಬ್ಬದ ನವರಾತ್ರಿ ಸಂಧರ್ಭದಲ್ಲಿ ಒಂಬತ್ತು ದಿನಗಳ ಕಾಲ ಪ್ರತಿಷ್ಠಾಪನೆ, ಮಾಡಿ ದಿನನಿತ್ಯ ದೇವಿಯ ಪೂಜೆ ಮಾಡುತ್ತಾರೆ, ಕೋಮು ಸೌಹಾರ್ದ ಹೆಚ್ಚಾಗುತ್ತಿರುವ ದಿನಗಳಲ್ಲಿ ಹಿಂದೂ ಮುಸ್ಲಿಂ ಬಾಂಧವರು ಸೇರಿ ನವರಾತ್ರಿ ಉತ್ಸವ ಆಚರಣೆ ಮಾಡುತ್ತಿರುವುದು ಸಹೋದರ ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಪ್ರತಿ ನಿತ್ಯ ಧಾರ್ಮಿಕ ಕಾರ್ಯಕ್ರಮಗಳಾದ ಭಜನೆ, ಕಿರ್ತನೆ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಿತ್ಯ ಅನ್ನ ದಾಸೋಹ, ದಾಂಡಿಯ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮ ಮಾಡುವ ಮೂಲಕ ನಾವೆಲ್ಲರೂ ಒಂದೇ ದೇವನೊಬ್ಬನೆ ಆಚರಣೆ ಪದ್ಧತಿಗಳು ಬೇರೆ ಇರಬಹುದು, ಹಿಂದೂಗಳು ಮಂಗಳಾರತಿ ಮಾಡುವ ಮೂಲಕ, ಮುಸ್ಲಿಂ ಬಾಂಧವರು ನಮಾಜ್ ಮಾಡುವ ಮೂಲಕ ಪರಮಾತ್ಮನನ್ನು ಧ್ಯಾನಿಸುತ್ತಾರೆ.
ಸರ್ವ ಸಮುದಾಯದ ಜನರು ಪಾಲ್ಗೊಂಡು ದಿನನಿತ್ಯ ಅನ್ನ ಪ್ರಸಾದ ಹಾಗೂ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ, ಪ್ರತಿಯೊಬ್ಬರು ಒಂದೊAದು ಜವಾಬ್ದಾರಿಯನ್ನು ಹೊತ್ತುಕೊಂಡು ಭಕ್ತಿ ಭಾವ ಮೆರೆಯುತ್ತಿದ್ದಾರೆ. ಪ್ರತಿಷ್ಠಾಪನೆಯ ಮುಂಚೆ ಓಣಿಯ ಹಿಂದೂ ಮುಸ್ಲಿಂ ಯುವಕರ ತಂಡ ನೆರೆಯ ಮಹಾರಾಷ್ಟ್ರದಲ್ಲಿನ ಶಕ್ತಿ ಪೀಠವಾದ ತುಳಜಾಪೂರ ಅಂಬಾ ಭವಾನಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಿ ನವರಾತ್ರಿಗೆ ಘಟ ಸ್ಥಾಪನೆ ಮಾಡಿ ಒಂಬತ್ತು ದಿನಗಳ ಕಾಲ ತಾಯಿಯ ಪೂಜೆ ಕೈಂಕರ್ಯ ನೆರವೇರಿಸುತ್ತಾರೆ.


ಕರ್ನಾಟಕದಲ್ಲಿ ನಾಡ ಹಬ್ಬ ದಸರಾ ಉತ್ಸವ ವಿಶೇಷವಾಗಿದ್ದು ಶಕ್ತಿ ಮಾತೇ ದುರ್ಗಿಯ ತಾಯಿ ಚಾಮುಂಡೇಶ್ವರಿ ಮಾತೆಯ ಉತ್ಸವ ನೆರವೇರಿಸುತ್ತಾರೆ, ಹಿಂದೂ ಮುಸ್ಲಿಂ ಸಮುದಾಯದ ನಡುವೆ ಸಾಮರಸ್ಯ ಸಾರುವಲ್ಲಿ ನಮ್ಮ ಓಣಿಯ ಚಿರ ಯುವಕರ ತಂಡ ಸೇರಿ ಪ್ರತಿವರ್ಷ ನವರಾತ್ರಿ ಉತ್ಸವ ನಡೆಸಿಕೊಂಡು ಬರುತ್ತಿದ್ದೇವೆ, ಹಿಂದೂ ಮುಸ್ಲಿಂ ಬಾಂಧವರು ಸೇರಿ ದಿನನಿತ್ಯ ದೇವಿ ಪೂಜೆಯಲ್ಲಿ ಪಾಲ್ಗೊಂಡು ದಿನ ನಿತ್ಯ ಸೇವಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ.

ರವಿ ಎಸ್ ಎರನಳ್ಳೆ
ಅಧ್ಯಕ್ಷರು, ಜಯ ಭವಾನಿ ಮಿತ್ರ ಮಂಡಳಿ


ನಮ್ಮ ಓಣಿಯಲ್ಲಿ ಪ್ರತಿ ವರ್ಷ ಸರ್ವರೂ ಸೇರಿ ಗಣೇಶ ಪ್ರತಿಷ್ಠಾಪನೆ, ನವರಾತ್ರಿ ಉತ್ಸವ ಆಚರಣೆ ಮಾಡುತ್ತಾ ನಾವೆಲ್ಲರೂ ಒಂದೇ ಎನ್ನುವ ಸಾಮರಸ್ಯ ಮೂಡಿಸಲು ನಮ್ಮ ಯುವಕರ ತಂಡ ಸನ್ನಧರಾಗಿ ಜಯ ಭವಾನಿ ಮಿತ್ರ ಮಂಡಳಿ ರಚಿಸಿ ಸೇವಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದೇವೆ

ಎಂ.ಡಿ ಶರಿಫ್
ಸದಸ್ಯರು ಜಯ ಭವಾನಿ ಮಿತ್ರ ಮಂಡಳಿ