
ಚಿತ್ತಾಪುರ: ಹಣ ಪಡೆದು ಚಾಲಕರಿಗೆ ಡ್ಯೂಟಿ ನೀಡುತ್ತಾರೆ ಹಾಗೂ ಜಾತಿ ಆಧಾರದ ಮೇಲೆ ತಾರತಮ್ಯ ಮಾಡುತ್ತಾರೆ ಎಂದು ಚಾಲಕ ಸುನೀಲ್ ಅವರು ಮಾಡಿದ ಆರೋಪಗಳು ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು ಸುಳ್ಳು ಆರೋಪ ಮಾಡಿದ ಚಾಲಕನ ಮೇಲೆ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಡಿಪೋ ವ್ಯವಸ್ಥಾಪಕ ಗೊಲ್ಲಾಳಪ್ಪ ಬಿರಾದಾರ ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್ ೨೨ರಂದು ಚಾಲಕ ಕಂ ನಿರ್ವಾಹಕ ಚಾಲಕರಿಗೆ ಕರ್ತವ್ಯ ಹಂಚಿಕೆ ಮಾಡುವ ವಿಚಾರದಲ್ಲಿ ಹಣದ ವ್ಯವಹಾರ ನಡೆಯುತ್ತಿದೆ ಎಂಬ ಆರೋಪಿಸಿದ್ದು ಇದರಲ್ಲಿ ಯಾವುದೇ ವಾಸ್ತವಾಂಶವಿಲ್ಲ. ಡ್ಯೂಟಿ ಹಂಚಿಕೆ ಇಲಾಖೆಯ ನಿಯಮದಂತೆ ಆರು ತಿಂಗಳಿಗೊಮ್ಮೆ ಬದಲಾವಣೆ ಮಾಡುತ್ತೆವೆ ಅಲ್ಲದೆ ಸಿನಿಯಾರಿಟಿ ಪ್ರಕಾರ ಕರ್ತವ್ಯ ನೀಡುತ್ತೆವೆ,ಹಾಗೂ ಲಭ್ಯವಿರುವ ಕರ್ತವ್ಯದ ಆಧಾರದ ಮೇಲೆ ನಡೆಯುತ್ತದೆ. ಯಾರಿಂದಲೂ ಹಣ ಪಡೆದು ಕರ್ತವ್ಯ ನೀಡುವ ಪ್ರಶ್ನೆಯೇ ಇಲ್ಲ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.
ಅದೇ ರೀತಿ, ಚಾಲಕರ ನಡುವೆ ಜಾತಿ ಆಧಾರದ ಮೇಲೆ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪವನ್ನೂ ಅವರು ತಳ್ಳಿಹಾಕಿದ್ದಾರೆ. ಇಲಾಖೆಯಲ್ಲಿ ಎಲ್ಲ ಸಿಬ್ಬಂದಿಗೂ ಸಮಾನವಾಗಿ ಕರ್ತವ್ಯ ನಿರ್ವಹಿಸುವ ಅವಕಾಶ ಕಲ್ಪಿಸಲಾಗಿದ್ದು, ಜಾತಿ ತಾರತಮ್ಯಕ್ಕೆ ಯಾವುದೇ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪದೇ ಪದೇ ಕರ್ತವ್ಯಕ್ಕೆ ಗೈರು ಹಾಜರಾಗುವೂದು,ತಡವಾಗಿ ಕರ್ತವ್ಯಕ್ಕೆ ಬರುವುದು,ಸಿಬ್ಬಂದಿಗಳಿಗೆ ಮತ್ತು ಅಧಿಕಾರಿಗಳಿಗೆ ಬಾಯಿಗೆ ಬಂದAತೆ ಮಾತನಾಡುವ ಪ್ರವೃತ್ತಿ ಬೆಳೆಸಿಕೊಂಡಿರುವ ಚಾಲಕ ಸುನೀಲ್ ಅವರಿಗೆ ಸಾಕಷ್ಟು ಬಾರಿ ತಿಳಿ ಹೇಳಲಾಗಿದೆ ಅಲ್ಲದೆ ಅತಿರೇಕಕ್ಕೆ ಹೋದಾಗ ಪೊಲೀಸ್ ಇಲಾಖೆಯ ೧೧೨ ಗೆ ಕರೆ ಮಾಡಲಾಗಿದ್ದು ಮಾನವಿಯತೆ ತೋರಿ ಆತನ ವಿರುದ್ದ ಯಾವುದೇ ದೂರು ದಾಖಲಿಸಿದೆ ಕ್ಷಮೀಸಿ ಮತ್ತೆ ಕರ್ತವ್ಯ ನೀಡಲಾದರು ಸಹಿತ ಸುಳ್ಳು ಆರೋಪ ಮಾಡಿದ್ದಾರೆ.
ಆಧಾರರಹಿತ ಆರೋಪಗಳಿಂದ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವುದು ಸರಿಯಲ್ಲ.
ಇನ್ನೊಬ್ಬರಿಗೆ ನೀಡಲೆಂದು ಬರೆಯಲು ತೆಗೆದುಕೊಂಡೀರುವ ಚಾರ್ಜಶೀಟನ್ನು ಸಿಬ್ಬಂದಿಯಿAದ ಕಸಿದುಕೊಂಡು ಹೋಗಿ ತನ್ನ ಹೆಸರು ಬರೆದುಕೊಂಡು ನನಗೆ ಖಾಲಿ ಚಾರ್ಜ್ ಶೀಟ್ ನೀಡಿದ್ದಾರೆ ಎಂದು ಸುಳ್ಳು ಆಪಾದನೆ ಮಾಡಿದ್ದಾರೆ.ಯಾವುದೇ ಅಕ್ರಮದ ಬಗ್ಗೆ ನಿರ್ದಿಷ್ಟ ದಾಖಲೆ ಅಥವಾ ಸಾಕ್ಷ್ಯವಿದ್ದರೆ ಸಂಬAಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಆದರೆ ಇವರು ಸಂಸ್ಥೆಯ ಮೂಲಗಳನ್ನು ಗೌಪ್ಯವಾಗಿಡದೆ ಸಾರ್ವಜನಿಕ ವಲಯದಲ್ಲಿ ತಂದು ಸಂಸ್ಥೆಗೆ ಕೆಟ್ಟ ಹೆಸರು ತರುವ ಕಾರ್ಯ ಮಾಡಿದ್ದಾರೆ.
ಸಂಸ್ಥೆಯ ಮತ್ತು ನಮ್ಮ ಹೆಸರು ಹಾಳು ಮಾಡಿದ ಇವರನ್ನು ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.























