
ಹುಮನಾಬಾದ್:ಜೂ.೨೯: ದುಬಲಗುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನರೇಗಾ ಯೋಜನೆ ಹಾಗೂ ೧೫ನೇ ಹಣಕಾಸು ಯೋಜನೆ ಅಡಿಯಲ್ಲಿ ಕೈಗೊಂಡ ಕಾಮಗಾರಿಗಳು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿರುವ ಕಾರಣಕ್ಕಾಗಿ ಇದರ ವಿರುದ್ಧ ತನಿಖೆ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು. ಆದರೆ ಇಲ್ಲಿ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ತನಿಖೆ ನಡೆಸದೇ ಕೇವಲ ಪಿಡಿಒಗಳಿಗೆ ಬಲಿಪಸು ಮಾಡುತ್ತಿದ್ದಾರೆ ಎಂದು ದೂರುದಾರ ವಿಜಯಕುಮಾರ ನಾಥೆ ಆರೋಪಿಸಿದರು.
ಪಟ್ಟಣದ ರಾಷ್ಟ್ರೀಯ ಕ್ಲಬ್ ಕಚೇರಿಯಲ್ಲಿ ಶನಿವಾರ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ದುಬಲಗುಂಡಿ ಗ್ರಾಮ ಪಂಚಾಯಿತಿಯ ಅವ್ಯವಾರ ಕುರಿತು ಈ ಹಿಂದೆ ನಾನು ಒಟ್ಟು ೧೨ ನೂರು ಕಾಮಗಾರಿಗಳ ವಿರುದ್ಧ ತನಿಖೆ ಕೈಗೊಳ್ಳುವಂತೆ ಒಟ್ಟು ೫೦೦೦ ಪುಟಗಳ ವರದಿ ಸಲ್ಲಿಸಿದ್ದೆ. ಆದರೆ ಇದಕ್ಕೆ ಸಂಬAಧಪಟ್ಟ ತನಿಖಾ ಅಧಿಕಾರಿಗಳ ತಂಡ ಕೇವಲ ಐವತ್ತು ಕಾಮಗಾರಿಗಳು ಮಾತ್ರ ತನಿಖೆ ಕೈಗೊಂಡು ಕೇವಲ ನಾಲ್ಕು ಪಿಡಿಒಗಳು ಅವ್ಯವರ ನಡೆಸಿದ್ದಾರೆ ಎಂದು ತನಿಖಾ ಅಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ತನಿಖೆ ನಡೆಸಿರುವುದು ಅನೇಕ ಅನುಮಾನಕ್ಕೆ ಕಾರಣ ಮಾಡಿಕೊಟ್ಟಿವೆ ಎಂದು ದೂರಿದರು.
ಈ ಪಂಚಾಯತಿಯಲ್ಲಿ ನಡೆದ ಬಹುತೇಕ ದೊಡ್ಡ ದೊಡ್ಡ ಕಾಮಗಾರಿಗಳ ವಿರುದ್ಧ ತನಿಖೆ ಕೈಗೊಳ್ಳದೆ ಕೇವಲ ಸಣ್ಣಪುಟ್ಟ ಕಾಮಗಾರಿಗಳ ವಿರುದ್ಧ ತನಿಖೆ ಕೈಗೊಂಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವರದಿ ಸಲ್ಲಿಸಿರುವ ತನಿಖಾ ಅಧಿಕಾರಿಗಳ ನಡೆಗೆ ತೀವ್ರವಾಗಿ ಖಂಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
೨೦೨೩-೨೪ನೇ ಸಾಲಿನಲ್ಲಿ ೧೪-೧೫ನೇ ಹಣಕಾಸು ಆಯೋಗದ ಅನುದಾನದಲ್ಲಿ ಕಡತಗಳನ್ನು ತನಿಖಾ ತಂಡಕ್ಕೆ ಒಟ್ಟು ೩೧ ಕಡತಗಳ ರೂ.೧೨,೯೬,೭೧೯ ಒದಗಿಸಿದಿಲ್ಲ ಮತ್ತು ೨೦೨೪-೨೫ನೇ ಸಾಲಿನ ಕಡತಗಳು ಪರಿಶೀಲಿಸಿದಾಗ ಒಟ್ಟು ೧೩ ಕಾಮಗಾರಿಗಳ ೩,೯೮,೫೭೪ ನಿಯಮಬಾಹಿರವಾಗಿ ಪಾವತಿ ಮಾಡಲಾಗಿದೆ ಹಾಗೂ ೨೦೨೪-೨೫ನೇ ಸಾಲಿನ ಸದರಿ ಅನುದಾನದಲ್ಲಿ೬ ಕಡತಗಳ ರೂ.೨,೪೩,೦೭೦ ಒಗದಿಸಿರುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಅಲ್ಲದೆ ನಿಧಿ-೨ರ ಖರ್ಚುಗಳಲ್ಲಿ ೨೦೨೨-೨೩, ೨೦೨೩-೨೪ ಮತ್ತು ೨೦೨೪-೨೫ನೇ ಸಾಲಿನಲ್ಲಿ ಯಾವುದೇ ಕ್ರಿಯಾಯೋಜನೆ ತಯಾರಿಸಿರುವುದಿಲ್ಲ ಹಾಗೂ ಸಕ್ಷಮ ಪ್ರಾಧಿ ಕಾರದಿಂದ ಅನುಮೋದನೆ ಪಡೆದಿರುವುದಿಲ್ಲ, ಯಾವುದೇ ಹಂತದ ಬಿಲ್‌ಗಳಿಗೆ ಸಮರ್ಪಕ ದಾಖೆಲೆಗಳನ್ನು ನಿರ್ವಹಿಸಿಲ್ಲವೆಂದು ನಾಲ್ಕು ಪಿಡಿಒ ಸುಗಂಧಾ ಸಂತೋಷಕುಮಾರ, ಭೀಮಣ್ಣ, ಸಿದ್ದಾರ್ಥ ಮತ್ತು ಪ್ರಸ್ತುತ ಪಿಡಿಒ ರಘುನಾಥ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕಾಗಿದೆ ಎಂದು ಹೇಳಿದ್ದಾರೆ. ೨೦೨೩-೨೪ನೇ ಮತ್ತು ೨೦೨೪-೨೫ನೇ ಸಾಲಿನಲ್ಲಿ ೧೪-೧೫ನೇ ಹಣಕಾಸು ಆಯೋಗದ ಅನುದಾನದಲ್ಲಿ ತನಿಖಾ ತಂಡಕ್ಕೆ ಒಟ್ಟು ೩೭ ಕಾಮಗಾರಿಗಳಿಗೆ ಕಡತ ತನಿಖಾ ತಂಡಕ್ಕೆ ಒಟ್ಟು ೩೭ ಕಾಮಗಾರಿಗಳಿಗೆ ಕಡತ ತನಿಖೆ `ಒಳಪಡಿಸಲಾಗಿದ್ದು, ಸದರಿ ಕಡಿತಗಳಲ್ಲಿ ದಾಖಲೆ ಸಲ್ಲಿಸಲು ಪ್ರಸ್ತುತ ಪಿಡಿಒಗೆ ಕಾಲಾವಕಾಶ ನೀಡಲಾಗಿದೆ. ಒಟ್ಟಾರೆ ಗ್ರಾಪಂ ಸದಸ್ಯ ನಾತೆ ಇವರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ತಂಡವು ದಣ ದುಬಲಗುಂಡಿ ಗ್ರಾಮ ಪಂಚಾಯಿತಿಯಲ್ಲಿನ ಲೋಪದೋಷಗಳ ಮತ್ತು ಅನುದಾನ ದುರ್ಬಳಕೆ ಮಾಡಿರುವುನ್ನು ಗಂಭೀರವಾಗಿ ಪರಿಗಣಿಸಿ ಸದರಿ ನಾಲ್ಕು ಪಿಡಿಒ ವಿರುದ್ಧ ಶಿಸ್ತು ಕ್ರಮಕ್ಕೆ ಜಿಪಂ ಸಿಇಒ ಆದೇಶಿಸಿದ್ದಾರೆ.