ನಶಾ ಮುಕ್ತ ಅಭಿಯಾನ

ಕಮಲನಗರ:ಅ.೧೪:ಡಾ|| ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆ ಶ್ರೀ ಗುರಪ್ಪಾ ಟೊಣ್ಣೆ ಪ್ರಾಥಮಿಕ ಶಾಲೆ ಹಾಗೂ ಗುರುಕಾರುಣ್ಯ ಪಬ್ಲಿಕ್ ಸ್ಕೂಲ್‌ನಲ್ಲಿ ಮಾದಕ ವಸ್ತು ವ್ಯಸನ ಮುಕ್ತಗೊಳಿಸಲು ಮಕ್ಕಳಿಂದ ಪ್ರತಿಜ್ಞೆ ಮಾಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿಗಳಾದ ಚನ್ನಬಸವ ಘಾಳೆ ಮಕ್ಕಳನ್ನು ಮತ್ತು ಎಲ್ಲಾ ಶಿಬ್ಬಂಧಿ ವರ್ಗದವರನ್ನು ಉದೇಶಿಸಿ ಯುವಕರು ಪ್ರತಿ ರಾಷ್ಟçದ ಶಕ್ತಿಯಾಗಿರುತ್ತಾರೆ ಮತ್ತು ಯುವ ಶಕ್ತಿಯು ಸಮಾಜ ಮತ್ತು ದೇಶದ ಅಭಿವೃಧಿಯಲ್ಲಿ ಪ್ರಮುಖ ಕೊಡುಗೆಯನ್ನು ನಿಡುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಿದೆ ಅದರಿಂದ ಅತಿಹೆಚ್ಚು ಯುವಕರು ನಶಾಮುಕ್ತ ಭಾರತ ಅಭಿಯಾನದಲ್ಲಿ ಭಾಗವಹಿಸಿ ಕೊಡುಗೆ ನಿಡುವುದು ಬಹಳ ಮುಖ್ಯ ದೇಶದ ಸವಾಲನ್ನು ಸ್ವಿಕರಿಸಿ ಇಂದು ನಾವು ನಶಾಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ಒಂದಾಗುತಿವೆ ಎಂಬ ಪ್ರತಿಜ್ಞೆಯನ್ನು ಹೇಳಿದರು