ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ

ಕಲಬುರಗಿ:ಅ.30:ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ, ಶನಿವಾರ, ನವೆಂಬರ್ 01 ರಂದು ರಾಮ ಮಂದಿರ ಸಮೀಪ ಇರುವ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ, ನಗರದ ಇತರ ಶಾಲೆಗಳ 5 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ “ನಮ್ಮ ಕರ್ನಾಟಕ – ನಮ್ಮ ಹೆಮ್ಮೆ” ಎಂಬ ವಿಷಯದ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿಲಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಎಸ್. ಎಂ. ನೀಲಾ ಆಗಮಿಸಲಿದ್ದಾರೆ.

ವಿಜೇತರಿಗೆ ಪ್ರಥಮ ಬಹುಮಾನವಾಗಿ ನಗದು 1000, ದ್ವಿತೀಯ 750, ತೃತೀಯ 500 ರೂಪಾಯಿ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಭಾಗವಹಿಸಿದ ಎಲ್ಲ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಗುವುದು.ಚಿತ್ರಕಲೆ ಸಾಮಗ್ರಿಗಳನ್ನು ವಿದ್ಯಾರ್ಥಿಗಳೇ ತರಬೇಕು, ಕೇವಲ ಡ್ರಾಯಿಂಗ್ ಶೀಟ್‍ನ್ನು ಮಾತ್ರ ಶಾಲೆಯಲ್ಲಿ ಒದಗಿಸಲಾಗುತ್ತದೆ.

ಆಸಕ್ತ ಮಕ್ಕಳು ತಮ್ಮ ಹೆಸರು, ತಂದೆಯ ಹೆಸರು, ತರಗತಿ ಹಾಗೂ ತಾವು ಓದುತ್ತಿರುವ ಶಾಲೆಯ ಹೆಸರನ್ನು 9972855535/ 7975229941 ಮೊಬೈಲ್ ಸಂಖ್ಯೆಗೆ ಅಕ್ಟೋಬರ್ 30 ರೊಳಗೆ ವಾಟ್ಸ ಅಪ್ ಮೂಲಕ ನೋಂದಾಯಿಸಿಕೊಳ್ಳಬೇಕೆಂದು ಶಾಲೆಯ ಪ್ರಿನ್ಸಿಪಾಲ್ ಸಿದ್ದಪ್ಪ ಭಗವತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.