ದ್ರೌಪದಿ ದೇವಿ ಜಯಂತಿ ಧ್ವಜಾರೋಹಣಕ್ಕೆ ಚಾಲನೆ

ಕೋಲಾರ,ಆ.೧೩-ನಗರದ ಕಾರಂಜಿಕಟ್ಟೆಯ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಆದಿಶಕ್ತಿ ದ್ರೌಪದಿ ದೇವಿಯ ಜಯಂತಿಂಗೆ ದ್ವಜಾರೋಹಣ ಮಾಡುವ ಮೂಲಕ ಜಯಂತಿಗೆ ಎಲ್.ಎ.ಮಂಜುನಾಥ್ ಚಾಲನೆ ನೀಡಿದರು.


ಆ,೧೨ರಂದು ಜನಾಂಗದ ಕಾರ್ಯಕಾರಿ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲಾದ್ಯಂತ ಅತಿ ಪುರಾತನ ಕಾಲದಿಂದಲೂ ವಹ್ನಿಕುಲ ಕ್ಷತ್ರಿಯ ಜನಾಂಗದವರು ತಮ್ಮ ಕುಲದೇವತೆಯಾದ ಶ್ರೀ ಆದಿಶಕ್ತಿ ದ್ರೌಪದಿ ದೇವಿಯ ಆರಾಧಕರು ನಾವು, ಈ ದ್ರೌಪದಿ ದೇವಿಯ ಜಯಂತಿಯನ್ನು ಈ ವರ್ಷ ಹೆಚ್ಚು ಸಡಗರ ಸಂಭ್ರಮ ಹಾಗೂ ಎಲ್ಲಾ ಕರಗದ ದೇವಾಲಯಗಳಲ್ಲಿ ಶ್ರದ್ದಾಭಕ್ತಿಗಳಿಂದ ಜಯಂತಿಯನ್ನು ಆಚರಣೆ ಮಾಡಬೇಕು, ಊರುಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಜಯಂತಿಯನ್ನು ಸಂಭ್ರಮದಿಂದ ಅದ್ದೂರಿಯಾಗಿ ಆಚರಣೆ ಮಾಡಬೇಕು ಎಂದರು.


ದೇವಾಲಯಗಳಲ್ಲಿ ಬೆಳಗ್ಗೆ ಅಭಿಷೇಕ, ವಿಶೇಷ ಪೂಜೆ, ಹೂವಿನ ಅಲಂಕಾರ ಮಾಡಿ ದೀಪಾರಾಧನೆ, ಸಂಜೆ ಪಲ್ಲಕಿ ಮೆರವಣಿಗೆ ಮಾಡಿ, ದೇವಾಲಯಕ್ಕೆ ಬಂದ ಭಕ್ತಾಧಿಗಳಿಗೆ ಪ್ರಸಾದ ಮುತೈದೆಯರಿಗೆ ಹೂ, ತಾಂಬೂಲ ನೀಡಿ ವಿಶಿಚ್ಟ ರೀತಿಯಲ್ಲಿ ಕಾರ್ಯಕ್ರಮಗಳನ್ನು ನಡೆಸುವಂತೆ ಅಧ್ಯಕ್ಷ ಎಂ.ವೆಂಕಟೇಶ್ ಕರೆನೀಡಿದರು.


ಸಭೆಯಲ್ಲಿ ಸರ್ಕಾರ ನಡೆಸುವ ಜಾತಿವಾರು ಜಣಗಣತಿಗೆ ಸಹಕರಿಸಿ, ಎಲ್ಲರೂ ವಹ್ನಿಕುಲ ಕ್ಷತ್ರಿಯ ಬ್ರಾಕೇಟ್‌ನಲ್ಲಿ ತಿಗಳ ಎಂದು ನಮೂದಿಸುವಂತೆ ತಿಳಿಸಿದರು, ಜನಾಂಗದ ಅಭಿವೃದ್ಧಿಗೆ ಕ್ರೆಡಿಟ್ ಸೊಸೈಟಿಯನ್ನು ಮಾಡುವಂತೆ ತೀರ್ಮಾನಿದರು, ಪ್ರತಿಭಾವಂತ ವಿದ್ಯರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ತೀರ್ಮಾನಿಸಲಾಯಿತು. ೨೦೨೪-೨೫ನೇ ಸಾಲಿನ ಕರಗ ಉತ್ಸವಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುವಂತೆ ಮನವಿಯನ್ನು ಸಲ್ಲಿಸಲು ತೀರ್ಮಾನಿಸಲಾಯಿತು.