
ಬೀದರ :ಫೆ.೧೧: ನಾಟಕಗಳು ಸಾಮರಸ್ಯದ ಪ್ರತೀಕವಾಗಿವೆ ಎಂದು ಕರ್ನಾಟಕ ನಾಟಕ ಅಕ್ಯಾಡೆಮಿ ಬೆಂಗಳೂರು, ಬೀದರ ಜಿಲ್ಲಾ ಸಂಚಾಲಕರಾದ ಡಾ.ಜಗನ್ನಾಥ ಹೆಬ್ಬಾಳೆ ಪ್ರತಿಪಾದಿಸಿದರು. ಭಾಲ್ಕಿ ತಾಲುಕಿನ ಧನ್ನೂರ(ಹೆಚ್) ಗ್ರಾಮದ ವೀರಭದ್ರೇಶ್ವರ ಜಾತ್ರೆ ಮಹೋತ್ಸವ ನಿಮಿತ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಕಲ್ಯಾಣ ಕುವರ ಕಲ್ಚರಲ್ ಟ್ರಸ್ಟ, ಕರ್ನಾಟಕ ನಾಟಕ ಅಕ್ಯಾಡೆಮಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರು ಹಾಗೂ ಹುಬ್ಬಳ್ಳಿಯಿಂದ ಆಗಮಿಸಿರುವ ಖ್ಯಾತ ರಂಗ ಕಲಾವಿದರಿಂದ ಕಳ್ಳ ಗುರು ಸುಳ್ಳ ಶಿಷ್ಯ ಹಾಗೂ ಗಂಡ ನನ್ನ ಭಂಡ ಎಂಬ ನಾಟಕಗಳು ಪ್ರದರ್ಶನಗೊಂಡವು. ಕುವೆಂಪು ವಿಶ್ವವಿದ್ಯಾಲಯ ಮೈಸೂರು ವತಿಯಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಸಾಹಿತಿ ಶಿವಶಂಕರ ಟೋಕರೆ ಮಾತನಾಡಿ, ಎಲ್ಲರಲ್ಲಿಯೂ ಒಂದೆನ್ನುವ ಭಾವ ಮೂಡಿಸಲು ಇಂತಹ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಗಳು ಗ್ರಾಮೀಣ ಭಾಗದಲ್ಲಿ ಉತ್ತಮ ಶ್ನೇಹತ್ವ ಬೆಳೆಸುತ್ತಿವೆ. ಕನ್ನಡ ಕುವರ ಕಲ್ಚರಲ್ ಟ್ರಸ್ಟ ಅಧ್ಯಕ್ಷ ವಿಷ್ಣುಕಾಂತ ಬಿ. ಜೇ ಯವರು ತಮ್ಮ ಹುಟ್ಟೂರಿನಲ್ಲಿ ಇಂತಹ ಕಾರ್ಯಕ್ರಮಗಳ ಜೊತೆಗೆ ನಾಟಕ ಪ್ರದರ್ಶನ ಮತ್ತು ಚಲನ ಚಿತ್ರ ನಿರ್ಮಾಣ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.
ಕನ್ನಡ ಕುವರ ಕಲ್ಚರಲ್ ಟ್ರಸ್ಟ ಅಧ್ಯಕ್ಷ ವಿಶ್ಣುಕಾಂತ ಬಿ.ಜೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ನಿರ್ದೇಶಕ ಬಾಬು ದಾನಿ ಪ್ರಾಸ್ತಾವಿಕ ಮಾತನಾಡಿದರು. ಇದೇವೇಳೆ ಜಗನ್ಮಾತೆ ಅಕ್ಕಮಹಾದೇವಿ ಚಲನ ಚಿತ್ರ ನಟಿ ಸುಲಕ್ಷ ಕೈರಾ ರವರಿಗೆ ಕಲ್ಯಾಣ ಕುವರ ಕಲ್ಚರಲ್ ಟ್ರಸ್ಟ ವತಿಯಿಂದ ಉತ್ತಮ ನಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತ ಡಾ. ಶಿವಶಂಕರ್ ಟೋಕರೇ ರವರಿಗೆ ಗೌರವ ಪ್ರಶಸ್ತಿ ನೀಡಲಾಯಿತು. ನೃತ್ಯ ಕಲಾವಿದೆ ಸ್ನೇಹಾ ಜಗದೀಶ್ ರವರಿಗೆ ನಾಟ್ಯ ಮಯೂರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ವಿಷ್ಣುಕಾಂತ ಬಿ.ಜೆ. ನಿರ್ದೇಶನದ ಪ್ರೊಡಕ್ಷನ್ ೬ ಚಲನ ಚಿತ್ರಕ್ಕೆ ನೂತನ ನಟಿ ರಷ್ಮೀ ದೊಡ್ಡಿ ಚಾಲನೆ ನೀಡಿದರು. ಹುಬ್ಬಳ್ಳಿ/ಬೆಂಗಳೂರಿನಿAದ ಆಗಮಿಸಿದ ರಂಗ ಕಲಾವಿದರು ಸಾದರಪಡಿಸಿರುವ ಕಳ್ಳಗುರು ಸುಳ್ಳ ಶಿಷ್ಯ ನಾಟಕ ಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಂ ಪಂ ಮಾಜಿ ಅಧ್ಯಕ್ಷ ಪರಮೇಶ್ವರ ಪಾಟೀಲ್, ಡಾ.ಪ್ರಭುಶೆಟ್ಟಿ ಮೂಲಗೆ, ಶಾಂತಕುಮಾರ ಪಾಟೀಲ, ವೈಜಿನಾಥ ಬಿರಾದಾರ ಜಾಂತಿ, ಶ್ರೀಕಾಂತ್ ದಾನಿ, ನಟಿ ಗೌರಿ ವಿಶ್ಣುಕಾಂತ, ಹಿರಿಯ ಪತ್ರಕರ್ತ ಗಣಪತಿ ಬೋಚರೆ, ಜಯರಾಜ್ ಧಾಬಶೆಟ್ಟಿ, ಶರಣಬಸವ ಪಾಟೀಲ್, ಉಪಸ್ತಿತರಿದ್ದರು. ಬಸವರಾಜ್ ಹಾಳೆ ಸ್ವಾಗತಿಸಿದರು. ನಟ ವೈಜಿನಾಥ ಬಿರಾದಾರ ನಿರೂಪಿಸಿದರು. ಅಮಿತ ದಾನಿ ವಂದಿಸಿದರು.



























