Home ಜಿಲ್ಲೆ ಬೆಂಗಳೂರು ೧೮ ಕೋಟಿ ರೂ. ಚರಂಡಿ, ರಸ್ತೆ ಕಾಮಗಾರಿಗೆ ಚಾಲನೆ

೧೮ ಕೋಟಿ ರೂ. ಚರಂಡಿ, ರಸ್ತೆ ಕಾಮಗಾರಿಗೆ ಚಾಲನೆ

ಆನೇಕಲ್, ಅ. ೩೧: ಅತ್ತಿಬೆಲೆ ಕೈಗಾರಿಕಾ ಪ್ರದೇಶದಲ್ಲಿ ಸುಮಾರು ೧೮ ಕೋಟಿ ರೂಪಾಯಿ ಮೌಲ್ಯದ ಚರಂಡಿ ಮತ್ತು ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿದರು ಶಾಸಕರಾದ ಬಿ.ಶಿವಣ್ಣ.
ಈ ವೇಳೆ ಶಾಸಕರಾದ ಬಿ.ಶಿವಣ್ಣರು ಮಾತನಾಡಿ, “ಅತ್ತಿಬೆಲೆ ಕೈಗಾರಿಕಾ ಪ್ರದೇಶದಲ್ಲಿರುವ ರಸ್ತೆಗಳಲ್ಲಿ ತೀವ್ರ ಸಮಸ್ಯೆ ಉಂಟಾಗಿತ್ತು.

ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕೆಂದು ಅತ್ತಿಬೆಲೆ ಇಂಡಸ್ಟ್ರೀಸ್ ಅಸೋಸಿಯೇಷನ್ ಪದಾಧಿಕಾರಿಗಳು ಮತ್ತು ಸ್ಥಳೀಯ ಮುಖಂಡರು ನಮ್ಮ ಬಳಿ ಬೇಡಿಕೆ ಇಟ್ಟಿದ್ದರು. ಅದಕ್ಕಾಗಿ ಸುಮಾರು ೧೮ ಕೋಟಿ ರೂಪಾಯಿ ಅನುದಾನದಲ್ಲಿ ಅತ್ತಿಬೆಲೆ ಕೈಗಾರಿಕಾ ಪ್ರದೇಶದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ,” ಎಂದು ಹೇಳಿದರು. “ಇನ್ನು ರಾಜ್ಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡಿ ಜನ ಮೆಚ್ಚುಗೆಯನ್ನು ಗಳಿಸುತ್ತಿದ್ದು, ೨೦೨೮ರಲ್ಲಿಯೂ ಸಹ ಕಾಂಗ್ರೆಸ್ ಸರ್ಕಾರ ಮರು ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ,” ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಗುಡ್ಡಹಟ್ಟಿ ರಘುಪತಿರೆಡ್ಡಿ, ಬೊಮ್ಮಸಂದ್ರ ಲಿಂಗಣ್ಣ, ಗುಡ್ಡಹಟ್ಟಿ ನವೀನ್ ಗೌಡ, ಅತ್ತಿಬೆಲೆ ಇಂಡಸ್ಟ್ರೀಸ್ ಅಸೋಸಿಯೇಷನ್ ಶಿವರಾಮ್ ರೆಡ್ಡಿ, ರಮೇಶ್ ಕೊರಡ್ಡಿ, ರುದ್ರಪ್ಪ, ಪ್ರದೀಪ್ ಸಾವಂತ್, ಜಯೇಂದ್ರ ಕುಮ??ಶನ್, ರಾಮ್ ಪ್ರಸಾದ್, ಗುಡ್ಡಹಟ್ಟಿ ಶಂಭಪ್ಪ, ಸುಶೀಲಮ್ಮ, ಯಡವನಹಳ್ಳಿ ವೆಂಕಟೇಶ್, ಬಳಗಾರನಹಳ್ಳಿ ಮಂಜು ಭಾಗವಹಿಸಿದ್ದಾರೆ.