ಡಾ. ವೆಂಕಟಪ್ಪ , ಇಂದಿರಾ ಸೇರಿ ೧೧ ಮಂದಿಗೆ ’ವಿಶ್ವರತ್ನ’ ಪ್ರಶಸ್ತಿ

ಬೆಂಗಳೂರು, ನ.೨೬- ಸಾಮಾಜಿಕ ಮತ್ತು ಶೈಕ್ಷಣಿಕ ಸೇವಾ ಸಂಸ್ಥೆಯಾದ ವಿಶ್ವಚೇತನ ಟ್ರಸ್ಟ್ (ರಿ) ತನ್ನ ೧೨ನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳ ೧೧ ಮಂದಿ ಸಾಧಕರಿಗೆ ’ವಿಶ್ವರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಲಿದೆ.


ನವೆಂಬರ್ ೩೦ರ ಭಾನುವಾರ ಸಂಜೆ ೬ಗಂಟೆಗೆ ಬೆಂಗಳೂರು ಬಸವೇಶ್ವರನಗರದ ನೊಳಂಬ ಲಿಂಗಾಯತ ಸಂಘದ ಕಂಬಿ ಸಿದ್ದರಾಮಣ್ಣ ಸಭಾಂಗಣದಲ್ಲಿ ಆಚರಿಸುತ್ತಿರುವ ೭೦ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕಣ್ವ ಡಯಾಗ್ನೋಸ್ಟಿಕ್ ಕೇಂದ್ರದ ಡಾ. ವೆಂಕಟಪ್ಪ ಹೆಚ್.ಎಂ, ವೀಣಾ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಇಂದಿರಾ ಗುರುಸ್ವಾಮಿ, ಕನ್ನಡಪರ ಹೋರಾಟಗಾರ ಪಾಲನೇತ್ರ, ಜನಧ್ವನಿ ಸೇವಾ ಸಂಸ್ಥೆಯ ಮಹೇಶ್, ಚಿತ್ರ ನಿರ್ದೇಶಕ ಟಿ.ಎನ್. ನಾಗೇಶ್, ಚಿಲುಮೆ ಫೌಂಡೇಷನ್‌ನ ರವಿಕುಮಾರ್ ಚಿಲುಮೆ, ವಿನಯ್ ಮಾದಯ್ಯ ಸೇರಿದಂತೆ ೧೧ ಸಾಧಕರಿಗೆ ’ವಿಶ್ವರತ್ನ’ ಪ್ರಶಸ್ತಿ ನೀಡಲಾಗುತ್ತಿದೆ.


ಈ ಕಾರ್ಯಕ್ರಮವನ್ನು ಚಿತ್ರಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಉದ್ಘಾಟಿಸುತ್ತಿದ್ದು, ಶಿಕ್ಷಣ ರತ್ನ ಪುರಸ್ಕೃತರಾದ ಶ್ರೀ ಸಿ.ಎಸ್.ಬನಶಂಕರಯ್ಯ ರವರಿಂದ ’ಕನ್ನಡ ಭಾಷಾ ಪ್ರೌಢಿಮೆ’ ಕುರಿತು ಉಪನ್ಯಾಸ ಏರ್ಪಡಿಸಲಾಗಿದೆ.


ಟ್ರಸ್ಟ್‌ನ ಅಧ್ಯಕ್ಷರಾದ ಲಿಂಗರಾಜು ಡಿ. ನೊಣವಿನಕೆರೆ ರವರು ಅಧ್ಯಕ್ಷತೆ ವಹಿಸುವರು. ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಎಸ್.ಹೆಚ್. ಪದ್ಮರಾಜ್, ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಘುವೀರ್ ಎಸ್. ಗೌಡ, ಆಂತರಿಕ ಭದ್ರತೆ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಿನೇಂದ್ರ ಖನಗಾವಿ, ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಭಾಗವಹಿಸಲಿದ್ದಾರೆ.