ಕೇಂದ್ರ ಬಜೆಟ್ ನಲ್ಲಿ ಐಐಟಿ, ತೊಗರಿ ಪಾರ್ಕ್ ಉಡಾನ್ ಯೋಜನೆ ಜಾರಿಗೆ ಡಾ.ಸಿರಗಾಪೂರ ಆಗ್ರಹ

ಕಲಬುರಗಿ: ಜ.28:ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ ಮುಂದಿನ ತಿಂಗಳು ಮಂಡಲಿಸುವ ಕೇಂದ್ರ ಬಜೆಟ್ ನಲ್ಲಿ ಕಲಬುರಗಿ ಹೊರ ವಲಯದಲ್ಲಿ ಎರಡನೆ ವರ್ತುಲ ರಸ್ತೆ ಕಾಮಗಾರಿಗೆ ಹಣ ನೀಡಬೇಕು.ಕಲಬುರಗಿಯಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ,ಐಐಟಿ ಪಾರ್ಕ್,ತೊಗರಿ ಪಾರ್ಕ್ ಹಾಗೂ ನ್ಯಾಷನಲ್ ಹೈವೆ ರಸ್ತೆಗಳಿಗೆ ಬಜೆಟ್ ನಲ್ಲಿ ಹಣ ಮೀಸಲಿಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿಯ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ಆಗ್ರಹಿಸಿದ್ದಾರೆ

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇದರ ಜೊತೆಗೆ ಬಹುದಿನಗಳ ಬೇಡಿಕೆಯಾದ ಕಲ್ಲಾಣ ಕರ್ನಾಟಕ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ರೈಲ್ವೇ ವಿಭಾಗೀಯ ಕಚೇರಿ ಸ್ಥಾಪನೆ.ಮುಚ್ಚುವ ಹಂತದಲ್ಲಿರುವ ಕಲಬುರಗಿ ವಿಮಾನ ನಿಲ್ದಾಣದ ಸಂಪರ್ಕ ಸುಧಾರಣೆಗೆ ಉಡಾನ್ ಯೋಜನೆ ಜಾರಿ ಮಾಡಬೇಕು.ಉದ್ಯೋಗ ಸೃಷ್ಟಿಗೆ ಕೈಗಾರಿಕೆಗಳನ್ನು ಸ್ಥಾಪಿಸಬೇಕು.ತೊಗರಿ ಮಂಡಳಿಗೆ ಕೇಂದ್ರದಿಂದ 500 ಕೋಟಿ ಹಣ ನೀಡಬೇಕು.ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಗಳಾದ ಕೃಷ್ಣಾ ಮತ್ತು ಭೀಮಾ ನದಿಗಳಿಗೆ ರಾಷ್ಟ್ರೀಯ ನದಿಗಳ ಜೋಡಣೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.