ಅಪ್ಪನ ಸಂದೇಶವನ್ನು ಹಂಚಿಕೊಂಡ ಡಾ.ಸಿಮ್ರನ್ ಪಾರಥನಳ್ಳಿ

ಜಮಖಂಡಿ:ಜ.18:ಎಲ್ಲಿದ್ದರೂ ಮಕ್ಕಳ ಕಾಳಜಿ ವಹಿಸುವ ಅಪ್ಪ : ವೈದ್ಯರು ಹಂಚಿಕೊಂಡ ಮಾತುಗಳು ಹೃದಯಸ್ಪರ್ಶಿ ಸಂದೇಶ

ತಂದೆ ತಾಯಿ ಪ್ರತ್ಯಕ್ಷ ದೇವರು. ಅಪ್ಪ ಮಕ್ಕಳಿಗೆ ಯಾವತ್ತೂ ಒಳ್ಳೆಯದ್ದನ್ನೇ ಬಯಸುತ್ತಾನೆ, ಸದಾ ಮಕ್ಕಳಿಗೆ ಉತ್ತಮವಾಗಬೇಕು ಎಂದೇ ಹಾರೈಸುತ್ತಾನೆ. ಮಕ್ಕಳ ಬಗೆಗೆ ಅಪ್ಪ ಅದೆಷ್ಟು ಕಾಳಜಿ ವಹಿಸುತ್ತಾರೆ ಎಂದರೆ ಸ್ವತಃ ತನ್ನ ಬಗ್ಗೆಯೂ ಅವರು ಅಷ್ಟು ಯೋಚಿಸುವುದಿಲ್ಲ. ಸಣ್ಣ ಸಣ್ಣ ವಿಷಯಗಳನ್ನೂ ನೆನಪಿನಲ್ಲಿಟ್ಟುಕೊಂಡು, ಸದಾ ಮಕ್ಕಳಿಗಾಗಿ ದುಡಿಯುವ ಜೀವ ಅಪ್ಪ. ಯಾವತ್ತೂ ಕರುಳಬಳ್ಳಿಗಳೊಂದಿಗೇ ಇರಲು ಇಷ್ಟಪಡುವವರು ಅಪ್ಪ. ಮಕ್ಕಳು ಬೆಳೆದು ಎಷ್ಟೇ ದೊಡ್ಡವರಾಗಲಿ ಅಪ್ಪನಿಗೆ ಯಾವತ್ತೂ ಅವರು ಪುಟ್ಟ ಮಕ್ಕಳೇ. ಹೀಗಾಗಿ, ಸದಾ ಮಕ್ಕಳ ಜೊತೆಗಿದ್ದು, ಅವರ ಕಾಳಜಿ ವಹಿಸುತ್ತಾರೆ ಅಪ್ಪ. ಒಂದೊಮ್ಮೆ ಮಕ್ಕಳಿಂದ ದೂರ ಇದ್ದರೂ ಅವರು ತನ್ನ ಮಕ್ಕಳ ಬಗೆಗೆ ಯೋಚಿಸುವುದನ್ನು ನಿಲ್ಲಿಸುವುದಿಲ್ಲ.

ಅಪ್ಪನ ಪ್ರೀತಿಗೆ ಸಾಕ್ಷಿ ಬೇಕಾಗಿಲ್ಲ. ಆದರೂ ಕೆಲವೊಂದು ಸಲ ಅಪ್ಪನ ಪ್ರೀತಿ, ಕಾಳಜಿ, ವಾತ್ಸಲ್ಯದ ಬಗೆಗಿನ ಸಂಗತಿಗಳು ಕಣ್ಣಿಗೆ ಬಿದ್ದಾಗ ಮನಸ್ಸು ಖುಷಿಯಿಂದ ಅರಳುತ್ತದೆ. ಸದ್ಯ ಅಂತಹದ್ದೇ ಖುಷಿಯ ಸಂಗತಿಯೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಚಿಕ್ಕ ವೈದ್ಯ ಸಿಮ್ರನ ಪಾರಥನಳ್ಳಿ ತಾನು ಹಾಗೂ ತನ್ನ ತಂದೆ ಮಾಮೂಮನ್ ರಸಿಧ ಪಾರಥನಳ್ಳಿ ಮಾತನಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗಿದೆ ಹೌದು ಬಡವರಿಗೆ ಉಚಿತ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ತಂದೆ ತಾಯಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಉದಾಹರಣೆಗಳು ನಮ್ಮ ಸಮಾಜದಲ್ಲಿ ಕಾಣಸಿಗುತ್ತವೆ. ಇಂಥದ್ದೇ ಒಂದು ಉದಾಹರಣೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಡಾ.ಸಿಮ್ರನ ಮಾಮೂನರಸಿಧ ಪಾರಥನಳ್ಳಿ ಅವರದು. ಅವರ ತಂದೆ ಮಾಮೂನರಸಿಧ ಅವರು ಬಡವರಿಗೆ ಉಚಿತ ಸೇವೆ ನೀಡುವ ನಿಟ್ಟಿನಲ್ಲಿ ಮಗಳನ್ನು ಡಾಕ್ಟರ್ ಮಾಡಿಸಿರುವದ್ದಾಗಿ ಕವಟಗಿ ಗ್ರಾಮದ ಪರಮಾಂದ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾವುಕರಾಗಿ ಮಾತನಾಡಿದರು ಇದೆ ಸಂಧರ್ಭದಲ್ಲಿ ಡಾ.ಸಿಮ್ರನ್ ಪಾರಥನಳ್ಳಿ ಅವರು ಕೂಡ ಮಾತನಾಡಿ ನಮ್ಮ ತಂದೆ ಆಶೆಯಂತೆ ನಾನು ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವೆ ಹಾಗೇ ನಮ್ಮ ತಂದೆಯ ಆಶೆಯನ್ನು ಈಡೇರಿಸುವೆ ಎಂದು ಅವರು ಹೇಳಿದರು