ಡಾ. ಶಿವಕುಮಾರ ಶ್ರೀಗಳ ಜೀವನ ಸಂದೇಶ ಸಾರ್ವಕಾಲೀಕ

ಬೀದರ್: ಜ.೨೨:ತುಮಕೂರು ಸಿದ್ದಗಂಗೆಯ ಪೂಜ್ಯ ಶ್ರೀ ಡಾ. ಶಿವಕುಮಾರ ಶ್ರೀಗಳ ಜೀವನ ಸಂದೇಶ ಸಾರ್ವಕಾಲೀಕವಾಗಿದ್ದು ಅವರ ಕಾಯಕ ನಿಷ್ಠೆ, ದಾಸೋಹ ಜೀವನ ಹಾಗೂ ಶಿಕ್ಷಣ ಪ್ರಜ್ಞೆ ಮನುಕುಲಕ್ಕೆ ಸದಾ ಪ್ರೇರಣಾಶಕ್ತಿಯಾಗಿದೆ ಎಂದು ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಡಾ. ಬಸವರಾಜ ಬಲ್ಲುರು ಹೇಳಿದರು.
ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಲಹರಿ ಡೆವಲಪರ್ಸ ಕಚೇರಿಯಲ್ಲಿ ಬುಧವಾರ ನಡೆದ ಡಾ. ಶಿವಕುಮಾರ ಸ್ವಾಮೀಜಿ ಅವರ ಏಳನೇ ಪುಣ್ಯ ಸ್ಮರಣೋತ್ಸವ ಹಾಗೂ ದಾಸೋಹ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರ ಮಾಡದೆ ಇರುವಂಥ ಅನ್ನ, ಅಕ್ಷರ, ಜ್ಞಾನದಂಥ ತ್ರಿಕಾಲ ದಾಸೋಹಗಳು ನಡೆಸಿಕೊಟ್ಟ ಶ್ರೀಗಳು ಸಾತ್ವಿಕ ಮಿತ ಆಹಾರಿಗಳಾಗಿದ್ದರು. ಆ ಕಾರಣಕ್ಕಾಗಿ ಅವರು ಶತಾಯುಷಿಗಳಾಗಿ ಬದುಕಿದ್ದರು. ಅವರ ದಿನಚರಿ, ಆಹಾರ ಪ್ರಜ್ಞೆ ಇಲ್ಲದ ನಾವು ಅಲ್ಪಾಯುಷಿಗಳಾಗುತ್ತಿದ್ದೇವೆ. ಬರಿಗೈಲಿ ಶ್ರಿಮಠಕ್ಕೆ ಬಂದು ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಸಂಗತಿ ಗಮನಾರ್ಹವಾಗಿದೆ. ತುಮಕುರು ಶ್ರೀ ಮಠ ಸೇರಿದಂತೆ ಕರ್ನಾಟಕದ ಎಲ್ಲ ಲಿಂಗಾಯತ ಮಠಗಳು ನೀಡಿದ ಸಂಸ್ಕಾರ ಸಹಿತ ಶಿಕ್ಷಣದಿಂದಾಗಿ ಈ ನೆಲದಲ್ಲಿ ಹಿಂಸೆ, ಕೋಮು ಗಲಭೆಗಳಿಲ್ಲದೆ ಶಾಂತಿ ಸೌಹಾರ್ದತೆ ನೆಲೆಸಿದೆ ಎಂದರು
ಸಾನಿಧ್ಯ ವಹಿಸಿದ್ದ ಗೋರ್ಟಾದ ರಾಜಶೇಖರ ಶಿವಾಚಾರ್ಯ ಸ್ವಾಮಿಜೀ ಮಾತನಾಡಿ, ಡಾ. ಶಿವಕುಮಾರ ಸ್ವಾಮೀಜಿ ಅವರ ತ್ರಿವಿಧ ದಾಸೋಹ ಎಲ್ಲರಿಗೆ ಮಾದರಿಯಾಗಿದೆ. ಅವರು ಸಮಾಜದ ಉದ್ಧಾರಕ್ಕೆ ತಮ್ಮ ಬದುಕು ಸಮರ್ಪಣೆ ಮಾಡಿಕೊಂಡಿದ್ದರು ಅವರ ಕಾಲ ಘಟ್ಟದಲ್ಲಿ ನಾವು ಬುದುಕಿದ್ದು ನಮ್ಮೇಲ್ಲ ಭಾಗ್ಯ ಎಲ್ಲದೇ ಬೀದರನ ಸಿದ್ದಗಂಗಾ ಹಳೆಯ ವಿದ್ಯಾರ್ಥಿಗಳು ಒಳ್ಳೆಯ ನಿರ್ವಹಿಸುತ್ತಿದ್ದಾರೆ. ಬೀದರನಲ್ಲಿ ಸಿದ್ದಗಂಗಾ ಶ್ರೀಗಳ ಒಂದು ದೇವಸ್ಥಾನ ನಿರ್ಮಿಸಿ ಎಂದು ಹೇಳಿದರು.
.ಲಹರಿ ಡೆವಲಪರ್ಸ ಮಾಲಿಕ ಸಂತೋಷ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ನಂತರ ಅವರು ಮಾತನಾಡಿ ಸಿದ್ದಗಂಗಾಶ್ರೀಗಳ ಕೆಲಸ ಇಡೀ ದೇಶಕ್ಕೆ ಮಾದರಿ ಪೂಜ್ಯರ ನಡೆದ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ ಎಂದರು ಹೇಳಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪುರ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಖ್ಯಾತ ಮಕ್ಕಳ ವೈದ್ಯ ಸಿ ಆನಂದರಾವ, ನಿವೃತ್ತ ಮುಖ್ಯಶಿಕ್ಷಕ ಸಿದ್ಧಾರೆಡ್ಡಿ ನಾಗೋರಾ, ನಿವೃತ್ತ ಸರ್ಕಾರಿ ಅಧಿಕಾರಿ ವೈಜಿನಾಥ ನಿಡೋದಾ, ಬಕ್ಕಪ್ಪ ನಾಗೋರಾ, ಶಿವಕುಮಾರ ಮೂಲಗೆ, ಜ್ಯೋತಿಷ ಹಲ್ಬರ್ಗೆ, ಮಂಜುನಾಥ ಪಾಟೀಲ್, ಬಸವರಾಜ ಕರೆಪನೋರ, ದತ್ತಾತ್ರಿ ಹಂಪಾ, ಸುಭಾಷ ಪಾಟೀಲ್ ತೆಗಂಪುರ, ಶಿವಕುಮಾರ ಪಟ್ಟಪಳ್ಳಿ, ಬಸವರಾಜ ಕೋಳ್ಳೂರು, ಅಶೋಕ ದೀಡಗೆ, ಸಿದ್ದಾರೋಢ ಭಾಲ್ಕೆ ಇದ್ದರು
ಸಂಘದ ಉಪಾಧ್ಯಕ್ಷ ರಮೇಶ ಪಾಟೀಲ ಪಾಶಾಪುರ ಸ್ವಾಗತಿಸಿದರು. ಜಗನ್ನಾಥ ಕಮಲಾಪೂರೆ ವಂದಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಕರಂಜೆ ನಿರೂಪಿಸಿದರು