ರಾಜ್ಯ ಸಮಾಜಶಾಸ್ತ್ರ ಸಂಘಕ್ಕೆ ಡಾ. ಶಾಂತಾ ಅಸ್ಟಿಗೆ ಆಯ್ಕೆ: ಸನ್ಮಾನ

ಜೇವರ್ಗಿ : ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ, ಮಹಿಳಾ ಚಿಂತಕಿ, ಕಲಬುರಗಿಯ ಜಿಲ್ಲೆಯ ಕದಳಿ ವೇದಿಕೆಯ ಅಧ್ಯಕ್ಷೆ ಡಾ. ಶಾಂತಾ ಬಿ ಅಸ್ಟಿಗೆ, ರಾಜ್ಯ ಸಮಾಜಶಾಸ್ತ್ರ ಅಧ್ಯಾಪಕರ ಸಂಘದ ರಾಜ್ಯ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾಲೇಜಿನ ಸಿಬ್ಬಂದಿ ವರ್ಗದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಶಾಂತಾ ಅಸ್ಟಿಗೆ ಅವರನ್ನು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿ ಅವರನ್ನು ಸತ್ಕರಿಸಿದರು.
ಈ ಸಂದರ್ಭದಲ್ಲಿ ಅತಿಥಿಯಾಗಿದ್ದ ಡಾ.ಟಿ. ಆರ್. ಗುರುಬಸಪ್ಪ, ಬಾಬು ಚಿತಾಪೂರಕರ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ರಾಬಿಯಾ ಬೇಗಂ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶರಣಪ್ಪ ಸೆ?ದಾಪೂರ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಖಾಜಾವಲಿ ಈಚನಾಳ, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ. ಖುತೇಜಾ ನಸ್ರಿನ್, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎನ್ ಜಿ ಶ್ರೀಧರ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶರಣಪ್ಪ ಗುಂಡಗುರ್ತಿ, ರಸಾಯನಶಾಸ್ತ್ರವಿಭಾಗದ ಮುಖ್ಯಸ್ಥೆ ಡಾ. ರೂಪಾ ಕುಲ್ಕರಣಿ, ಹಿಂದಿ ವಿಭಾಗದ ಮುಖ್ಯಸ್ಥ ಕುಪೇಂದ್ರ, ಅಧ್ಯಾಪಕರಾದ ಭೀಮಣ್ಣ, ಭಾಗ್ಯಶ್ರೀ, ಗ್ರಂಥಪಾಲಕ ತಿಪ್ಪಣ್ಣ ವಗ್ದಾಳ, ವಿಕಾಶ್ ಹಾಗೂ ಇನ್ನಿತರ ವಿಭಾಗಗಳ ಅಧ್ಯಾಪಕರು, ಅತಿಥಿ ಉಪನ್ಯಾಸಕರು,ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.