Home ಜಿಲ್ಲೆ ಕಲಬುರಗಿ ಡಾ.ಸೀಮಾ ಪಾಟೀಲಗೆ ‘ಕಲಬುರಗಿಯ ಕಣ್ಮಣಿ’ ಪ್ರಶಸ್ತಿ

ಡಾ.ಸೀಮಾ ಪಾಟೀಲಗೆ ‘ಕಲಬುರಗಿಯ ಕಣ್ಮಣಿ’ ಪ್ರಶಸ್ತಿ

ಕಲಬುರಗಿ :ಮೇ.30: ನಾಲ್ಕುಚಕ್ರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯರಾದ ಪ್ರಾಚಾರ್ಯೆ ಡಾ.ಸೀಮಾ ಪಾಟೀಲ ಅವರಿಗೆ ಕಲಬುರಗಿಯ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಮೇ 31 ರಂದು ಸಾಯಂಕಾಲ 5ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ರಾಷ್ಟ್ರಮಟ್ಟದ ಖ್ಯಾತ ಸಂಗೀತ ವಿದ್ವಾಂಸರಾಗಿದ್ದ ಡಾ.ಮಲ್ಲಿಕಾರ್ಜುನ ಮನ್ಸೂರ್ ಅವರ ಮೊಮ್ಮಗಳಾದ ಡಾ.ಸೀಮಾ ಪಾಟೀಲ ಅವರು ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಅವರ ಶಿಕ್ಷಣ ಸೇವೆಯನ್ನು ಗುರುತಿಸಿ ಕಲಬುರಗಿ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದಾಗಿ ಟ್ರಸ್ಟ್‍ನ ಅಧ್ಯಕ್ಷೆ ಮಾಲಾ ಕಣ್ಣಿ ತಿಳಿಸಿದ್ದಾರೆ.