ಡಾ.ರೇಣುಕಾ ಸಿದ್ದಣ್ಣಗೆ ಪರಿಸರ ವಿಜ್ಞಾನದಲ್ಲಿ ಪಿಎಚ್‍ಡಿ ಪದವಿ

ಕಲಬುರಗಿ:ಡಿ.14: ಗುಲ್ಬರ್ಗ ವಿಶ್ವವಿದ್ಯಾಲಯವು ಪರಿಸರ ವಿಜ್ಞಾನ ವಿಷಯದಲ್ಲಿ ರೇಣುಕಾ ಸಿದ್ದಣ್ಣ ಅವರಿಗೆ ಡಾಕ್ಟರೇಟ್ ಆಫ್ ಫಿಲಾಸಫಿ (ಪಿಎಚ್‍ಡಿ) ಪದವಿ ಪ್ರದಾನಕ್ಕೆ ಅರ್ಹತೆ ಪಡೆದಿದ್ದಾರೆಂದು ಘೋಷಿಸಿದೆ. ಕುಲಪತಿಗಳ ಅನುಮೋದನೆ ದಿನಾಂಕ 14.11.2025ರಂತೆ, ಕುಲಪತಿಗಳ ನಿರ್ದೇಶನದ ಮೇರೆಗೆ ವಿಶ್ವವಿದ್ಯಾಲಯವು ಅವರ ಪ್ರಬಂಧ ಮಂಡಿಸಿದ್ದು ಸ್ವೀಕರಿಸಲಾಗಿದೆ.

ರೇಣುಕಾ ಸಿದ್ದಣ್ಣ ಅವರು ಇಓSಅ02 ನೋಂದಣಿ ಸಂಖ್ಯೆಯಲ್ಲಿ 04.10.2018ರಂದು ಪಿಎಚ್‍ಡಿ ಅಧ್ಯಯನಕ್ಕೆ ದಾಖಲಾಗಿದ್ದು, ಡಾ. ದಯಾನಂದ್ ಅಗ್ಸರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದಾರೆ. ಅವರ ಪ್ರಬಂಧದ ಶೀರ್ಷಿಕೆ “ಕೃಷಿ ಕ್ಷೇತ್ರಗಳಲ್ಲಿನ ಮಣ್ಣಿನಲ್ಲಿ ಸಾರಜನಕ ಸ್ಥಿರೀಕರಣ ಬ್ಯಾಕ್ಟೀರಿಯಾದ ವೈವಿಧ್ಯತೆ ಮತ್ತು ಕಾರ್ಯಕ್ಷಮತೆಯ ಮೇಲೆ ಸಿಮೆಂಟ್ ಕೈಗಾರಿಕೆಗಳ ಧೂಳಿನ ಪರಿಣಾಮ” ಎಂಬುದಾಗಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಅಧ್ಯಾಪಕರಿಂದ ಮೌಲ್ಯಮಾಪನಗೊಂಡ ಈ ಸಂಶೋಧನೆಗೆ ಗ್ರೇಡ್ ಬಿ+ (ಗ್ರೇಡ್ ಪಾಯಿಂಟ್ 08) ಲಭಿಸಿದೆ ಈ ಸಂಶೋಧನೆ ಗುಲ್ಬರ್ಗ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಪೂರ್ಣಗೊಂಡಿದೆ.