Home ಜಿಲ್ಲೆ ಬೆಂಗಳೂರು ಡಾ.ಮೊಹಮ್ಮದ್ ಷರೀಫ್‌ಗೆ ಸನ್ಮಾನ

ಡಾ.ಮೊಹಮ್ಮದ್ ಷರೀಫ್‌ಗೆ ಸನ್ಮಾನ

ಕೋಲಾರ,ಜು.೧೯- ಕರ್ನಾಟಕ ಟಿಪ್ಪು ಸೆಕ್ಯೂಲರ್ ಸೇನೆಯು ಜಾತ್ಯಾತೀತ ಸಂಘಟನೆಯ ವತಿಯಿಂದ ನಗರದ ನರಸಿಂಹರಾಜ ಜಿಲ್ಲಾ ಆಸ್ಪತ್ರೆ ಜಿಲ್ಲಾ ಶಸ್ತ್ರ ಚಿಕಿತ್ಸಕ ವೈಧ್ಯಾಧಿಕಾರಿಗಳು (ಡಿ.ಎಸ್) ಡಾ| ಮೊಹಮ್ಮದ್ ಷರೀಫ್‌ಗೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಸೈಯದ್ ಆಸೀಫ್‌ವುಲ್ಲಾ, ಪದಾಧಿಕಾರಿಗಳಾದ ಆದಿಲ್, ಇಲಿಯಜ್‌ಪಾಷ @ ಚೋಟು, ಸಲ್ಮಾನ್, ಕು||ಮುಸ್ಕಾನ್, ಗೋವಿಂದ,ನಯಾಜ್ ಅವರಿಂದ ಆತ್ಮೀಯ ಸನ್ಮಾನ ಮಾಡಲಾಯಿತು.


ಈ ಸಂದರ್ಭದಲ್ಲಿ ಡಾ. ಮೊಹಮ್ಮದ್ ಷರೀಫ್ ಮಹಿಳೆಯರಿಗೆ, ಪುರುಷರಿಗೆ, ಮಕ್ಕಳಿಗೆ ಮತ್ತು ಅನಾಥರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಎಲ್ಲಾ ರೀತಿಯ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗುವುದೆಂದು ಇದರ ಲಾಭ ಪಡೆದುಕೊಳ್ಳಬೇಕೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


ಕರ್ನಾಟಕ ಟಿಪ್ಪು ಸೆಕ್ಯೂಲರ್ ಸೇನೆಯು ಜಾತ್ಯಾತೀತ ಸಂಘಟನೆ ಆಗಿರುತ್ತದೆ. ಈ ಸಂಘಟನೆಯಲ್ಲಿ ಶೋಷಿತರಿಗೆ, ಬಡವರಿಗೆ ಮಹಿಳೆಯರಿಗೆ ಮತ್ತು ದೀನ ದಲಿತರಿಗೆ ದಿನದ ೨೪ ತಾಸುಗಳು ಸಮಾಜ ಸೇವೆ ಮಾಡುತ್ತಾ ಬಂದಿರುತ್ತದೆ.


ಈ ಸಂಘಟನೆಯಲ್ಲಿ ಮುಳಬಾಗಿಲು ತಾಲ್ಲೂಕು ಕರ್ನಾಟಕ ಟಿಪ್ಪು ಸೆಕ್ಯೂಲರ್ ಸೇನೆಯ ಪದಾಧಿಕಾರಿಗಳಾಗಿ ಸ್ವಯಂ ಪ್ರೇರಿತರಾಗಿ ಸೇರ್ಪಡೆಗೊಂಡಿರುವವರಿಗೆ ರಾಜ್ಯ ಸಂಪಾದಕ ರಾಜ್ಯಾಧ್ಯಕ್ಷ ಸೈಯದ್ ಆಸೀಫ್‌ವುಲ್ಲಾ ರವರು ಮುಳಬಾಗಿಲು ನಗರದ ಹೊರವಲಯದ ವೆಲ್‌ಕಮ್ ಹೋಟೆಲ್‌ನ ಸಂಭಾಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೇಮಕಾತಿ ಆದೇಶವನ್ನು ವಿತರಿಸಿದರು.