Home ಜಿಲ್ಲೆ ಕಲಬುರಗಿ ನಾಡು-ನುಡಿಗೆ ಡಾ.ಎಂ.ಎಂ.ಕಲಬುರ್ಗಿಯವರ ಕೊಡುಗೆ ಅನನ್ಯ

ನಾಡು-ನುಡಿಗೆ ಡಾ.ಎಂ.ಎಂ.ಕಲಬುರ್ಗಿಯವರ ಕೊಡುಗೆ ಅನನ್ಯ

ಕಲಬುರಗಿ: ಡಾ.ಎಂ.ಎಂ.ಕಲಬುರ್ಗಿ ಅವರು ಈ ನಾಡು ಕಂಡ ಶ್ರೇಷ್ಟ ಚಿಂತಕರಲ್ಲಿ ಪ್ರಮುಖರಾಗಿದ್ದಾರೆ. ಅವರು ತಮಗೆ ಹೇಳಬೇಕೆನಿಸಿದ ವಿಷಯವನ್ನು ಯಾವುದೇ ಮುಲಾಜಿಲ್ಲದೇ ಹೇಳುವ ಎದೆಗಾರಿಕೆ ಹೊಂದಿದ್ದರು. ತಮ್ಮ ಇಡೀ ಜೀವನದುದ್ದಕ್ಕೂ ಸತ್ಯಕ್ಕಾಗಿ, ಮೌಢ್ಯತೆ, ಅಂಧಶೃದ್ಧೆ, ಕಂದಾಚಾರದಂತಹ ಅನಿಷ್ಟಗಳ ವಿರುದ್ದ ಹೋರಾಡುವ ಮೂಲಕ, ವೈಚಾರಿಕತೆಯ ಪ್ರಖರ ಜ್ಯೋತಿಯಾಗಿ, ನಾಡು, ನುಡಿ, ಸಂಸ್ಕøತಿ, ಶರಣ ಸಾಹಿತ್ಯಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ್ ಅಭಿಪ್ರಾಯಪಟ್ಟರು.
ನಗರದ ಪ್ರಭುದೇವ ನಗರದಲ್ಲಿನ ‘ಶ್ರೀ ನೀಲಕಂಠೇಶ್ವರ ಶಾಲೆ’ಯ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ಡಾ.ಎಂ.ಎಂ.ಕಲಬುರ್ಗಿಯವರ 11ನೇ ಲಿಂಗೈಕ್ಯ ಸಂಸ್ಮರಣೋತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಡಾ. ಕಲಬುರ್ಗಿ ಅವರು ಅಧ್ಯಾಪಕರಾಗಿ, ಕುಲಪತಿಗಳಾಗಿ, ಸಂಶೋಧಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದಾರೆ. 20ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ವೈಜ್ಞಾನಿಕ ಸಂಶೋಧನೆ, ಸಂಪಾದನೆಗೆ ಹೆಸರಾದವರು. ಸದಾ ಕ್ರೀಯಾಶೀಲ ವ್ಯಕ್ತಿತ್ವವನ್ನು ಹೊಂದಿದ್ದರು. ಎಲ್ಲರಿಗೂ ಒಗ್ಗದ ಸಂಶೋಧನೆಯನ್ನು ಕಲಬುರ್ಗಿಯವರು ಒಗ್ಗಿಸಿಕೊಂಡಿರುವದೇ ಅವರ ವಿಶೇಷತೆಯಾಗಿದೆ ಎಂದರು.
ಶರಣ ಚಿಂತಕ ಷಣ್ಮುಖಯ್ಯ ಹಿರೇಮಠ ಮಾತನಾಡಿ, ಕಲಬುರ್ಗಿ ಅವರು ಕೇವಲ ಸಂಶೋಧಕರಾಗಿರದೆ, ಸತ್ಯಶೋಧಕರಾಗಿದ್ದರು. ಅಂತಹ ಮಹಾನ ವ್ಯಕ್ತಿಯನ್ನು ಹತ್ಯೆ ಮಾಡಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಕಲಬುರ್ಗಿಯವರ ಜನ್ಮದಿನವನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಬೇಕು. ಅವರ ತತ್ವ ಮತ್ತು ಕೊಡುಗೆಗಳನ್ನು ಪರಿಚಯಿಸುವ ಕಾರ್ಯವಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಪಂಡಿತರಾವ ಪಾಟೀಲ್, ಪ್ರಮುಖರಾದ ದತ್ತು ಹಡಲಗಿ, ರಾಜಕುಮಾರ ಕೆರಮಗಿ, ಅಕುಲ್ ಕೊರಳ್ಳಿ ಸೇರಿದಂತೆ ಬಡಾವಣೆಯ ಇನ್ನಿತರರಿದ್ದರು.