ಎನ್ ಎಸ್ ಎಸ್ ಸಂಯೋಜನಾಧಿಕಾರಿಯಾಗಿ ಡಾ. ಎಚ್ ಎಸ್ ಜಂಗೆ ನೇಮಕ

ಕಲಬುರಗಿ :ಜು.೨: ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎಚ್ ಎಸ್ ಜಂಗೆ ಅವರು ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಆಗಿ ನೇಮಕ ಆಗಿದ್ದಾರೆ. ಡಾ. ಎನ್. ಜಿ ಕಣ್ಣೂರ ಅವರು ಎನ್ ಎಸ್ ಎಸ್ ಸಂಯೋಜನಾಧಿಕಾರಿ ಆಗಿದ್ದರು. ಅವರು ಮೌಲ್ಯಮಾಪನ ಕುಲಸಚಿವರಾಗಿ ನೇಮಕ ಹೊಂದಿರುವದರಿAದ ಈಗ ಡಾ. ಎಚ್ ಎಸ್ ಜಂಗೆ ಅವರಿಗೆ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಎಂದು ಕುಲಸಚಿವರು ಆದೇಶ ನೀಡಿದ್ದಾರೆ. ಈ ಸಂದರ್ಭದಲ್ಲಿ
ದೈಹಿಕ ಶಿಕ್ಷಣ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಸನ್ಮಾನಿಸಿದರು. ಡಾ. ವಿಶಾಲ ಸಜ್ಜನ, ಡಾ. ಗಿರೀಶ ಜಂಗೆ, ಡಾ. ಮಿಲಿಂದ್ ಸುಳ್ಳದ, ಡಾ. ಮೋಸಿನ್ ಅಹ್ಮದ್, ಡಾ. ಸುರೇಶ ಹೊಸಮನಿ, ನಾಗೇಂದ್ರ ಕಾಂಬಳೆ, ಬಸವರಾಜ ಸಿಂಗೆ ಮುಂತಾದವರು ಇದ್ದರು.