Home ಜಿಲ್ಲೆ ಕಲಬುರಗಿ ಡಾ.ಬಾಬೂಜಿಯವರ ಬದುಕು ಯುವಜನತೆಗೆ ದಾರಿದೀಪ: ಪ್ರಭುರೆಡ್ಡಿ

ಡಾ.ಬಾಬೂಜಿಯವರ ಬದುಕು ಯುವಜನತೆಗೆ ದಾರಿದೀಪ: ಪ್ರಭುರೆಡ್ಡಿ

ಸೇಡಂ,ಏ,06: ಭಾರತದ ಮಾಜಿ ಉಪಪ್ರಧಾನಿ ಹಸಿರು ಕ್ರಾಂತಿಯ ಹರಿಕಾರ ಸ್ವಾತಂತ್ರ ಹೋರಾಟಗಾರರಾದ ಡಾ.ಬಾಬು ಜಗಜೀವನರಾಂ ರವರು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಶಿಕ್ಷಣ ಪಡೆದು,ದೇಶದ ಉನ್ನತ ಸ್ಥಾನಕ್ಕೇರಿದರು. ಅವರಲ್ಲಿದ್ದ ಕಲಿಯುವ ಹಸಿವು ಮತ್ತು ಸಾಧಿಸುವ ಛಲ ಅವರನ್ನು ಜಗತ್ತು ಗುರುತಿಸುವಂತೆ ಮಾಡಿಕೊಂಡಿದ್ದರು,ಶೋಷಿತ ವರ್ಗಗಳ ಧ್ವನಿಯಾಗಿದ್ದರು, ಅವರ ಜೀವನವು ಕೇವಲ ವ್ಯಕ್ತಿಯೊಬ್ಬರ ಸಾಧನೆಯಲ್ಲ, ಅದು ಅಸಂಖ್ಯಾತ ಜನರಿಗೆ ಆತ್ಮವಿಶ್ವಾಸ ತುಂಬುವ ಶಕ್ತಿಯಾಗಿದೆ. ಅವರ ಆದರ್ಶಗಳು ಪ್ರತಿಯೊಬ್ಬರಿಗೂ ಪ್ರೇರಣೆಯಾಗಲಿ ಎಂದು ಸಹಾಯಕ ಉಪ ವಿಭಾಗಾಧಿಕಾರಿ ಪ್ರಭುರೆಡ್ಡಿ ಕೆಎಎಸ್ ಅವರು ಹೇಳಿದರು.ಪಟ್ಟಣದಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ತಾಲೂಕಾ ಆಡಳಿತ ವತಿಯಿಂದ ಡಾ. ಬಾಬು ಜಗಜೀವನ್ ರಾಮ್ ರವರ 119ನೇ ಜಯಂತೋತ್ಸವ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕೃಷಿ ಸಚಿವರಾಗಿ ಹಸಿರು ಕ್ರಾಂತಿಗೆ ಮುನ್ನುಡಿ ಬರೆದರು ಹಾಗೂ ರಕ್ಷಣಾ ಸಚಿವರಾಗಿ ದೇಶದ ಗಡಿ ಕಾಯುವಲ್ಲಿ ಅವರು ತೋರಿದ ದಕ್ಷತೆಯನ್ನು ಎಲ್ಲರಿಗೂ ಮಾದರಿ ಹಾಗೂ ಒಬ್ಬ ಅಧಿಕಾರಿ ಅಥವಾ ಜನಪ್ರತಿನಿಧಿ ಜನಪರವಾಗಿ ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಜಗಜೀವನರಾಂ ಅವರು ಸಾಕ್ಷಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು. ತಹಸಿಲ್ದಾರರು ಹಾಗೂ ಡಾ.ಬಾಬು ಜಗಜೀವನ್ ರಾಮ್ ಜಯಂತೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಶ್ರೀಯಾಂಕಾ ಎ ಧನಶ್ರೀ,ಸಿಪಿಐ ಮಾಹದೇವ ದಿಡ್ಡಿಮನಿ ಮಾತನಾಡಿದರು.ಈ ವೇಳೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿಜಯಕುಮಾರ್ ಪುಲಾರಿ,ನಗರಸಭೆ ಆಯುಕ್ತರಾದ ಶರಣಯ್ಯ ಸ್ವಾಮಿ, ತಾಪಂ ಇಓ ಚನ್ನಪ್ಪ ರಾಯಣ್ಣನವರ, ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜುರಾತಿ,ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಅನುರಾಧ ಪಾಟೀಲ್,ಅನಂತಪ್ಪ ಮೋತಕಪಲ್ಲಿ, ಹಣಮಂತ ಬೆನಕನಹಳ್ಳಿ, ಅರುಣಕುಮಾರ,ಸಿದ್ದು ಊಡಗಿ,ವೇದಿಕೆ ಮೇಲಿದ್ದರೂ.ಶಿವಶರಣ ಮುಗನೂರ ಅವರು 34 ನಿಮಿಷಗಳು ಡಾ.ಬಾಬುಜಿ ರವರ ಜೀವನ ಚರಿತ್ರೆ ಕುರಿತು ಸವಿಸ್ತಾರವಾಗಿ ಹೇಳಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಉಮಾಪತಿ ರಾಜು,ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಇಮ್ರಾನ್ ಮನಿಯಾರ, ತಾಲೂಕಾ ಆರೋಗ್ಯ ಅಧಿಕಾರಿ ಡಾ.ಸಂಜೀವಕುಮಾರ್, ಹಸನ ಚಾವುಸ್, ಎಇಇ ಶಿವಶರಣ ಜೇವರ್ಗಿ,ರಾಜಶೇಖರ್ ರುದ್ನೂರ್, ನರಸಪ್ಪ, ಹಾಗೂ ಮಾದಿಗ ಸಮಾಜದ ಮುಖಂಡರಾದ ಜಗನ್ನಾಥ ಚಿಂತಪಳ್ಳಿ ಶಿವಪುತ್ರಪ್ಪ ಮೊಘ ರಾಮು ಕಾಣೇಕಲ್ ಹಣಮಂತ ಭರತನೂರ ಬಸವರಾಜ್ ಕಾಳಗಿ, ಅಶೋಕ್ ಫಿರಂಗಿ ಮೂಧೋಳ, ಭಗವಾನ್ ದೊಡ್ಡಮನಿ, ಭೀಮರಾವ್ ಕಟ್ಟಿಮನಿ, ಜಗನ್ನಾಥ ಬಿಜನಳ್ಳಿಕರ ಹಾಗೂ ತಾಲೂಕ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.ಸ್ವಾಗತ ಗೀತೆ: ಭಾವನಿ ನಿರೂಪಣೆ: ಶ್ರೀನಿವಾಸ ಕುಲಕರ್ಣಿ,ವಂದನಾರ್ಪಣೆ ಸಂತೋಷ್ ಕುಲಕರ್ಣಿ ಮಾಡಿದರು.

ಡಾ.ಬಾಬು ಜಗಜೀವನರಾಂ ಜೀವನ ಆದರ್ಶ ಪ್ರತಿಯೊಬ್ಬರು ಅಳವಡಿಸಿಕೊಂಡಾಗ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬೆಳೆಯಲು ಸಾಧ್ಯವಿದೆ.

ಶ್ರೀಮತಿ ಶ್ರೀಯಾಂಕಾ ಎ ಧನಶ್ರೀ,ತಹಸಿಲ್ದಾರರು ಹಾಗೂ ಡಾ.ಬಾಬು ಜಗಜೀವನ್ ರಾಮ್ ಜಯಂತೋತ್ಸವ ಸಮಿತಿ ಅಧ್ಯಕ್ಷರು ಸೇಡಂ

ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಹಸಿರು ಕ್ರಾಂತಿಯ ಹರಿಕಾರ ಭಾರತದ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ರವರು ದಲಿತ ಸಮಾಜದ ಎರಡು ಕಣ್ಣುಗಳು ಇದ್ದಂತೆ, ಅವರ ಆದರ್ಶದ ಜೀವನ ಪ್ರತಿಯೊಬ್ಬರಿಗೂ ಪ್ರೇರಣೆ.
ಮಾಹದೇವ ದಿಡ್ಡಿಮನಿ ಸಿಪಿಐ ಸೇಡಂ
2026 ನೇ ಸಾಲಿನ ಮುಖ್ಯಮಂತ್ರಿ ಪದಕ ಪಡೆದವರು