ನೀಲಕಂಠೇಶ್ವರ ಶಾಲೆಯಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ೬೯ನೇ ಮಹಾಪರಿನಿರ್ವಾಣ ದಿನಾಚರಣೆ

ಕಲಬುರಗಿ : ಡಿ.೬:ನಗರದ ಡಬರಾಬಾದ್ ಕ್ರಾಸ್ ಸಮೀಪವಿರುವ ನೀಲಕಂಠೇಶ್ವರ ಶಾಲೆಯಲ್ಲಿ ಶಾಲೆ ಮತ್ತು ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ೬೯ನೇ ಮಹಾಪರಿನಿರ್ವಾಣ ದಿನಾಚರಣೆಯನ್ನು ಭಕ್ತಪೂರ್ವಕವಾಗಿ ಆಚರಿಸಲಾಯಿತು. ಉಪನ್ಯಾಸಕ ಎಚ್.ಬಿ. ಪಾಟೀಲ್ ಮತ್ತು ಸಂಸ್ಥೆಯ ಅಧ್ಯಕ್ಷ ಷಣ್ಮುಖಯ್ಯ ಹಿರೇಮಠ ಅವರು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ-ಸಾಧನೆ-ಕೊಡೆಗೆಯನ್ನು ವಿವರಿಸಿದರು. ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಾಲೆಯ ಶಿಕ್ಷಕಿಯರಾದ ರಾಜೇಶ್ವರಿ ಕಟ್ಟಿಮನಿ, ನಿರ್ಮಲಾ ಮಾಲಿಪಾಟೀಲ್,ಅಂಬಿಕಾ ಪ್ಯಾಟಿ, ಐಶ್ವರ್ಯ ಬಿರಾದಾರ, ನಿಂಗಮ್ಮ ದೊರೆ, ಮಂಗಲಾ ಸಾಳುಂಕೆ, ರೇಣುಕಾ ಅಧ್ವಾನಿ, ಸವಿತಾ ಬಿಸ್ಕೊಂಡ, ಅರ್ಚನಾ ಕಲಶೆಟ್ಟಿ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.