ನರೋಣಾದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಭಾವಪೂರ್ಣ ಗೌರವ

ಆಳಂದ: ಡಿ.೮:ನರೋಣಾ ಗ್ರಾಮದ ಜೈ ಭೀಂ ನಗರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ೬೯ನೇ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಯಿತು.
ಈ ವೇಳೆ ಗ್ರಾಮದ ಹಿರಿಯರು ಡಾ. ಬಾಬಾಸಾಹೇಬ್‌ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ನರೋಣಾ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀದೇವಿ ಬಿ. ಕೋರೆ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಶಿವಪುತ್ರ ಬಿ. ರಾಗಿ ಅವರು ಧ್ವಜಾರೋಹಣ ನೆರವೇರಿಸಿದರು.
ನಂತರ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಿದ್ಧಾರ್ಥ ನಗರದಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಕೈಲಾಸ್ ಬಿ. ರಾಗಿ ಅವರು ಪೂಜೆ ಸಲ್ಲಿಸಿದರು. ನರೋಣಾ ಪೊಲೀಸ್ ಠಾಣೆಯ ಶಿವಾನಂದ ಸೂಗೂರ ಅವರು ಪಂಚಶೀಲ ಧ್ವಜಾರೋಹಣ ನೆರವೇರಿಸಿದರು.
ಪ್ರಮುಖ ಚಂದ್ರಕಾAತ್ ಕೋರೆ, ವಿಜಯ್ ಕುಮಾರ್ ಮೇಲಿಕೇರಿ, ಮಂಜುನಾಥ್ ಕೋರೆ, ಶ್ರೀಶೈಲ್ ಮದಲಿ, ಚಂದ್ರಕಾAತ್ ಹಾದಿಮನಿ, ಶಿವ ಭಾಚನಹಳ್ಳಿ, ಶ್ರೀಕಾಂತ್ ಕೋರೆ, ಮಲ್ಲಿಕಾರ್ಜುನ ಮದಲಿ, ಮಲ್ಲಿಕಾರ್ಜುನ ಕರುಕುನ ಸೇರಿದಂತೆ ಜೈ ಭೀಂ ನಗರದ ದಲಿತ ಹಿರಿಯ ಮುಖಂಡರು, ಯುವಕರು ಗ್ರಾಮ ಪಂಚಾಯತಿ ಸರ್ವ ಸದಸ್ಯರು ಉಪಸ್ಥಿತರಿದ್ದರು.