Home ಜಿಲ್ಲೆ ಕಲಬುರಗಿ ಸ್ವಾಭಿಮಾನದ ಸಂಕೇತ ಡಾ.ಬಿ.ಆರ್.ಅಂಬೇಡ್ಕರ್ ; ಅರುಣಕುಮಾರ ಪಾಟೀಲ

ಸ್ವಾಭಿಮಾನದ ಸಂಕೇತ ಡಾ.ಬಿ.ಆರ್.ಅಂಬೇಡ್ಕರ್ ; ಅರುಣಕುಮಾರ ಪಾಟೀಲ

ಅಫಜಲಪುರ ;ಮೇ.26: ನಾವೆಲ್ಲರೂ ನಮ್ಮೆದಿ, ಸ್ವಾಭಿಮಾನದ ಜೀವನ ನಡೆಸುತ್ತಿದ್ದೇವೆ ಅಂದರೆ ಅದಕ್ಕೆ ಮೂಲ ಕಾರಣಿಕರ್ತರು ಡಾ.ಬಿ.ಆರ್.ಅಂಬೇಡ್ಕರ್ ಅವರು
ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ
ಅಧ್ಯಕ್ಷ ಅರುಣಕುಮಾರ ಪಾಟೀಲ್ ಹೇಳಿದರು.

ಮದರಾ (ಬಿ) ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್
ಅವರ 135 ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಕಲಿಯಿರಿ, ಸಂಘಟಿತರಾಗಿ,
ಹೋರಾಡಿರಿ ಎಂಬ ಬಾಬಾಸಾಹೇಬ್ ಅವರ
ಸಂದೇಶ ಸಮಾಜದಲ್ಲಿ ಜಾಗೃತಿ, ಆತ್ಮವಿಶ್ವಾಸ
ಹಾಗೂ ಸಬಲೀಕರಣದ ಹೊಸ ಚೈತನ್ಯ
ಮೂಡಿಸುತ್ತಿದೆ ಎಂದು ಪಾಟೀಲ ತಿಳಿಸಿದರು.

ಅಂಬೇಡ್ಕರ್ ಅವರು ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಸಮಸ್ತ ಮಾನವಕುಲಕ್ಕೆ ದಾರಿದೀಪವಾಗಿದ್ದಾರೆ. ನಾವೆಲ್ಲರೂ ಒಗ್ಗಟ್ಟಿನಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಬಹಳ ಅರ್ಥಪೂರ್ಣವಾಗಿ ಆಚರಣೆಯನ್ನು ಮಾಡಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯ ಎಂದು ಅರುಣಕುಮಾರ ಪಾಟೀಲ ಹೇಳಿದರು.

ಚಿನ್ಮಯಗಿರಿಯ ಶ್ರೀ ಸಿದ್ದರಾಮ
ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮಾಜಿ
ಸಚಿವ ಮಾಲೀಕಯ್ಯ ಗುತ್ತೇದಾರ್, ಜಿಪಂ ಮಾಜಿ
ಅಧ್ಯಕ್ಷ ನಿತೀನ್ ಗುತ್ತೇದಾರ್, ಪ್ರಮುಖರಾದ
ಮಲ್ಲಿಕಾರ್ಜುನ ಖರ್ಗೆ, ಯಲ್ಲಣ್ಣಗೌಡ
ಪಾಟೀಲ್, ವಿಜಯಕುಮಾರಗೌಡ ಬಿರಾದಾರ,
ವಿಶ್ವನಾಥ ಕಾರ್ನಾಡ, ಶರಣು ನೀಲೂರ,
ಸಚೀನ್ ರಾಠೋಡ್, ಸಿದ್ದರಾಮ ಮಾಲಿಪಾಟೀಲ್, ಮಹಾಂತಪ್ಪ ದೊಡ್ಡಮನಿ, ರಾಜು ಆರೇಕರ, ಚನ್ನಮಲ್ಲಪ್ಪ ಪೆÇಲೀಸ್ ಪಾಟೀಲ್, ಭೀಮಾಶಂಕರ ಬೋರುಟಿ, ಮಡಿವಾಳಪ್ಪ ಬಿರಾದಾರ, ದತ್ತುಗೌಡ ಬಿರಾದಾರ, ಶಿವಶರಣ ಅಂಗಡಿ ಸೇರಿದಂತೆ ಗ್ರಾಮದ ಅನೇಕ ಮುಖಂಡರು ಉಪಸ್ಥಿತರಿದ್ದರು.


ನಮ್ಮ ಗ್ರಾಮದಲ್ಲಿ ಯಾವುದೇ ಜಾತಿ, ಬೇಧವಿಲ್ಲದೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿದ್ದೇವೆ. ಬಾಬಾ ಸಾಹೇಬರು ನಮ್ಮೆಲ್ಲರ ಆಸ್ತಿ. ಅವರು ಜನ್ಮದಿನವನ್ನು ನಾವೆಲ್ಲರೂ ಒಂದಾಗಿ ಕಾರ್ಯಕ್ರಮ ಮಾಡುವ ಮೂಲಕ ಸಮಾಜದಲ್ಲಿ ನಾವೆಲ್ಲರೂ ಒಂದೇ ಎನ್ನುವ ಸಂದೇಶ ರವಾನೆ ಮಾಡಬೇಕಾಗಿದೆ. ಮುಂಬರುವ ದಿನಗಳಲ್ಲಿ ನಮ್ಮ ಗ್ರಾಮದಲ್ಲಿ ಇನ್ನೂ ದೊಡ್ಡ ಮಟ್ಟದ ಕಾರ್ಯಕ್ರಮ ಏರ್ಪಡಿಸಿ ವಿಚಾರ ವಂತರಿಗೆ ಕರೆಸಿ ನಮ್ಮ ಮಕ್ಕಳಿಗೆ ಮಹಾನ ಪುರುಷರ ತತ್ವಗಳನ್ನು ತಿಳಿಸುವ ಕೆಲಸ ಮಾಡುತ್ತೇವೆ.

-ಸಿದ್ಧು ಸಾಹುಕಾರ ಜವಳಿ