Home ಜಿಲ್ಲೆ ಕಲಬುರಗಿ ಶಿಕ್ಷಣ, ದಾಸೋಹ, ಸಮಾಜದ ಶ್ರೇಯಸ್ಸಿಗೆ ಒತ್ತು ನೀಡಿದ ಡಾ.ಅಪ್ಪ

ಶಿಕ್ಷಣ, ದಾಸೋಹ, ಸಮಾಜದ ಶ್ರೇಯಸ್ಸಿಗೆ ಒತ್ತು ನೀಡಿದ ಡಾ.ಅಪ್ಪ

ಕಲಬುರಗಿ : ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ಜೀವನ ಶಿಕ್ಷಣ, ದಾಸೋಹ ಸೇವೆ, ಮಾನವೀಯತೆ ಮತ್ತು ಸಮಾಜದ ಶೇಯಸ್ಸಿನ ಮಹತ್ವವಾಗಿದೆ ಎಂದು ಶರಣಬಸವೇಶ್ವರ ಕಲಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸುರೇಶಕುಮಾರ ನಂದಗಾವ ಹೇಳಿದರು.
ನಗರದ ಶರಣಬಸವೇಶ್ವರ ಕಲಾ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ ಜೀವನದರ್ಶನ ಮತ್ತು ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿ, ಪೂಜ್ಯ ಡಾ.ಅಪ್ಪಾಜೀಯವ ಶಿಕ್ಷಣದ ಉದ್ದೇಶ ಕೇವಲ ಉದ್ಯೋಗ ಪಡೆಯಲು ಮತ್ರವಲ್ಲ ವಿದ್ಯಾರ್ಥಿಗಳಲ್ಲಿ ಬರವಣಿಗೆ, ಆಲಿಸುವುದು ಮತ್ತು ವಿಮರ್ಶಾತ್ಮಕ ಚಿಂತನೆಗಳು ಹಾಗೂ ಉತ್ತಮ ವ್ಯಕ್ತಿತ್ವವನ್ನು ನಿರ್ಮಿಸಿ ಸಮಾಜಕ್ಕೆ ಕೊಡುಗೆ ನೀಡಲು ಸಹಾಯಕವಾಗಬೇಕೆಂಬುದು ಅವರÀ ಉದ್ದೇಶವಾಗಿತ್ತು. ಶರಣಬಸವೇಶ್ವರ ದೇವಾಲಯದ ವಾಸ್ತು ವೈಭವನ್ನು ಹೊಂದಿದ್ದು, ಅದರ ವಿಶಾಲ ಸಭಾಮಂಟಪ, ಸುಂದರ ಕಮಾನುಗಳು ಮತ್ತು ಕಲಾತ್ಮಕ ಕೆತ್ತೆನೆಗಳು ವಿಶೇಷ ಆಕರ್ಷಣಿಯಾಗಿವೆ ದೇವಾಲಯದ ವಾಸ್ತುಶಿಲ್ಪದಲ್ಲಿ ಸ್ಥಳೀಯ ಪರಂಪರೆಯ ಜೊತೆಗೆ ವಿವಿದ ವಾಸ್ತು ಅಂಶಗಳ ಸುಂದರ ಸಮನ್ವಯವನ್ನು ಕಾಣಲು ಪೂಜ್ಯ ಅಪ್ಪ ಅವರ ಕೊಡುಗೆ ಇದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯ ಪ್ರಾಚಾರ್ಯೆ ಶ್ರೀಮತಿ ಬಸಮ್ಮ ಎಸ್.ಚಿಂಚೋಳಿ ಮಾತನಾಡಿ, ಪೂಜ್ಯ ಡಾ.ಅಪ್ಪ ಅವರ ಶಿಕ್ಷಣದ ಆಶಯದಂತೆ ಬೋಧನೆ ನಂತರ ಬರೆಸುವುದು, ಚರ್ಚಿಸುವುದು, ಕಲಿಕೆಯ ಜೊತೆಗೆ ಅವರ ಬರವಣಿUಯÉ ಕೌಶಲ್ಯವನ್ನು ಬೆಳೆಸಲು ಪ್ರೋತ್ಸಾಹ ನೀಡುತ್ತಿದ್ದೇವೆ ಎಂದು ಹೇಳಿದರು.
ಸುಧಾ ಮಾಲಿ ಪಾಟೀಲ ನಿರೂಪಿಸಿದರು, ಸಂಗೀತ ಪಾಟಿಲ ಸ್ವಾಗತಿಸಿದರು, ದೌಲಪ್ಪ ಎಸ್.ಕಣ್ಣಿ ವಂದಿಸಿದರು. ಮಹಾವಿದ್ಯಾಲಯದ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.