
ಜಮಖಂಡಿ:ಡಿ.6:ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಇಡೀ ಜೀವನ ಸಮಾನತೆ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಮತ್ತು ಶೋಷಿತ ವರ್ಗಕ್ಕೆ ಮೇಲೆತ್ತುವ ನಿಟ್ಟಿನಲ್ಲಿ ಹೋರಾಟ ಮಾಡಿ ಶೋಷಿತ ಸಮುದಾಯದ ಬಾಳಿನ ಬೆಳಕಾಗಿ ವಿಶ್ವದ ಉತ್ಕøಷ್ಟ ಸಂವಿಧಾನ ರಚಿಸುವ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಸಮಾನತೆ ಒದಗಿಸಿಕೊಟ್ಟಿದ್ದಾರೆ. ಇಂತಹ ಮಹಾನ್ ನಾಯಕರು ಸದಾ ಸ್ಮರಣೀಯರು’ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ತಾಲೂಕಾಡಳಿತ,ತಾಲೂಕು ಪಂಚಾಯತ, ಸಮಾಜ ಕಲ್ಯಾಣ ಇಲಾಖೆ,ಶಿಕ್ಷಣ ಇಲಾಖೆ,ನಗರಸಭೆ ಇವರ ಸಹಯೋಗದದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಶಿಕ್ಷಣದ ಮಹತ್ವ,ಅದರ ಶಕ್ತಿ ಹಾಗೂ ಅದರಿಂದ ಸಾಧನೆ ಮಾಡ ಬೇಕಾದರೆ ಅದು ಡಾ.ಬಾಬಾ ಸಾಹೇಬ್ ಅಂಬೇಡ್ಕರ ಅವರಿಂದ ಎಂದು ನಾವು ಅರೀತು ಕೊಳ್ಳಬೇಕು ಎಂದರು.
ಅಂಬೇಡ್ಕರ್ ಅವರು ಹಾಕಿ ಕೊಟ್ಟಿರುವ ಭದ್ರ ಬುನಾದಿಯ ಪರಿಣಾಮ ಶೋಷಿತ ಸಮಾಜದವರು ಅಂಬೇಡ್ಕರ್ ರವರನ್ನು ಕೇವಲ ಅವರ ಜನ್ಮ ದಿನದಂದು ಮಾತ್ರ ನೆನೆಯದೇ ಅವರ ಪುಣ್ಯ ತಿಥಿ ದಿನವು ಸಹ ನೆನೆದು, ಅವರನ್ನು ಸ್ಮರಿಸಲಾಗುತ್ತದೆ. ಭಾರತದ ಕಾನೂನು ಸುವ್ಯವಸ್ಥೆ, ಅಸ್ಪೃಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ, ಇತರೆ ಹಲವು ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆಯಿಂದ ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ. ಇಡೀ ವಿಶ್ವವೇ ಗುರುತಿಸುವಂತಹ ವ್ಯಕ್ತಿಯಾಗಿ ಸಮಗ್ರ ಅಭಿವೃದ್ಧಿಗೆ ಅವರು ಶ್ರಮಿಸಿದ್ದಾರೆ’ ಎಂದರು.
ಶಸಾಕ ಜಗದೀಶ್ ಗುಡಗುಂಟಿ, ತಹಶಿಲ್ದಾರರ ಅನೀಲ ಬಡಗೇರ,ನಗರಸಭೆ ಸದಸ್ಯ ದಾನೇಶ ಘಾಟಗೆ,ಮಹಾದೇವ ಕಡಕೋಳ,ಮುತ್ತಣ್ಣ ಮೇತ್ರಿ,ಯಮನೂರ ಮೂಲಂಗಿ,ಪುಟ್ಟು ಪಾಣಿ,ಪರಶುರಾಮ ಕಾಂಬಳೆ,ಸಂಗಮೇಶ ಕಾಂಬಳೆ,ಪ್ರೇಮ ಬಳೋಲಗಿಡದ,ನ್ಯಾಯವಾದಿಗಳಾದ ಶಶಿಕಾಂತ ದೊಡಮನಿ,ನಿಂಗಪ್ಪ ಗಸ್ತಿ,ಸಂತೋಷ ತಳಕೇರಿ,ಸಂಜು ಮೀಶಿ,ರಾಜು ಲೋಖಂಡೆ,ಬಸವರಾಜ ಮಠಪತಿ,ತಾಲೂಕಾ ವೈದ್ಯಾಕಾರಿ ಗೈಬುಸಾಬ ಗಲಗಲಿ,ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಜಗದೇವ ಪಾಸೋಡೆ ಸೇರಿದಂತೆ ಇನ್ನಿತರು ಇದ್ದರು























