ಡಾ.ಅಜಯಸಿಂಗ್ ಜನ್ಮದಿನ: ಸಸಿ, ಬ್ಯಾಗ್ ವಿತರಣೆ

ಕಲಬುರಗಿ,ಜ.30-ನಗರದ ಕೋಟನೂರ (ಡಿ) ಗ್ರಾಮದಲ್ಲಿರುವ ಯಲ್ಲಾಲಿಂಗ ಹಿರಿಯ ಪ್ರಾಥಮಿಕ ಶಾಲೆ ನಿರ್ಗತಿಕ ಮಕ್ಕಳ ಶಾಲೆಯ ಆವರಣದಲ್ಲಿ ಗುರುವಾರ ಅಖಿಲ ಕರ್ನಾಟಕ ಡಾ.ಅಜಯಸಿಂಗ್ ಸಾಬ್ ಅಭಿಮಾನಿಗಳ ಸಂಘ ವತಿಯಿಂದ ಕೆಕೆಆರ್‍ಡಿಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಅವರು ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಡಾ.ಅಜಯಸಿಂಗ್ ಸಾಬ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಉದಯ್ ಬಿ. ಪಾಟೀಲ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಟನೂರ ಡಿ ಗ್ರಾಮದ 108 ಮಹಿಳೆಯರಿಗೆ ಸಸಿಗಳನ್ನು ವಿತರಿಸಲಾಯಿತು.
ಇದೇ ವೇಳೆ ಮಕ್ಕಳಿಗೆ ಪುಸ್ತಕ ಬ್ಯಾಗುಗಳನ್ನು ನೀಡುವ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಜಯಸಿಂಗ್ ಸಾಬ್ ಅಭಿಮಾನಿ ಸಂಘದ ಅಧ್ಯಕ್ಷ ಉದಯ್ ಬಿ. ಪಾಟೀಲ ಜನರ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವ ಡಾಕ್ಟರ್ ಅಜಯ್ ಸಿಂಗ್ ಅವರ ಹುಟ್ಟುಹಬ್ಬವನ್ನು ಆಚರಿಸುವುದು ನಮಗೆ ಬಹಳ ಹೆಮ್ಮೆಯ ಸಂಗತಿ ಎಂದು ಹೇಳಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಗಾಗಿ ತಮ್ಮ ಸ್ವಂತ ಹೊಲವನ್ನು ಉಚಿತವಾಗಿ ನೀಡಿರುವುದು, ಮತ್ತು ಮಕ್ಕಳ ಸಮಸ್ಯೆಗಳನ್ನು ಆಲಿಸುವ ನಾಯಕತ್ವ ಡಾಕ್ಟರ್ ಅಜಯ್ ಸಿಂಗ್ ಅವರ ಜನಪರ ಕಾರ್ಯಗಳಿಗೆ ಸಾಕ್ಷಿಯಾಗಿದೆ ಎಂದರು ತಿಳಿಸಿದರು. ಮುಂದಿನ ದಿನಗಳಲ್ಲಿ ಅವರು ಮಂತ್ರಿಯಾಗಲಿ, ಮುಖ್ಯಮಂತ್ರಿ ಆಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಡಾ. ಅಜಯಸಿಂಗ್ ಸಾಬ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರಾದ ರಾಜು ಭವಾನಿ, ಶಿವಾನಂದ ತೋರವಿ, ಅಶ್ಫಾಕ್ ಹುಸೇನ್, ಜಾವೀದ್ ಪಟೇಲ್,
ಸೋಮು ನೆಲೋಗಿ, ದೇವಿದಾಸ್ ಪಾಟೀಲ್, ಆನಂದ್ ಹುಲಿ, ಸಚಿನ್ ನಾಯಕ್,ಜಗದೀಶ್ ಹೊಸಮನಿ, ಮಲ್ಲಿಕಾರ್ಜುನ ಪಾಟೀಲ್, ಶ್ರೀಧರ ನಾಗನಳ್ಳಿ, ಪ್ರಶಾಂತ್ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.