
ಕಲಬುರಗಿ,ನ.27: ನವದೆಹಲಿಯ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮತ್ತು ಕಾರ್ಯಾಚರಣೆ ಸಮಿತಿಯ ದಕ್ಷಿಣ ಭಾರತ ಅಧ್ಯಕ್ಷ ಡಾ ಎ ಎಸ್ ಭದ್ರಶೆಟ್ಟಿ ಅವರ ಸಾಮಾಜಿಕ ಸೇವೆ ಗಮನಿಸಿ ಕಲಬುರಗಿಯ ಚಿನ್ನದ ನಾಡು ಕರುನಾಡು ಜನಪರ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಿಂಗಣ್ಣ ಉದನೂರು ಮತ್ತು ಅತಿಥಿಗಳು ಇತ್ತೀಚೆಗೆ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿನ್ನದ ನಾಡು ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಸಮಾರಂಭದಲ್ಲಿ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಪಡೆಯ ಪದಾಧಿಕಾರಿಗಳಾದ ಸುರೇಶ್ ಕಲಶೆಟ್ಟಿ, ವಿಜಯಕುಮಾರ್ ಬಿರಾದಾರ, ಬಿ ಆರ್ ಚವ್ಹಾಣ, ಶರಣಬಸಪ್ಪ ರಾಂಪುರೆ, ನಾಡಗೌಡ ಬಿರಾದಾರ, ಶ್ರೀಶೈಲ ಕುಮಾರ, ಶಾಮರಾವ್ ಪಾಟೀಲ್ ಮತ್ತು ವಿನೋದ ಪಾಟೀಲ್ ಅವರು ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

























