ಮನೆ ಮನೆಗೆ ಭೇಟಿ

ಲಕ್ಷ್ಮೇಶ್ವರ,ಡಿ15: ಪಟ್ಟಣದ ಎಸ್‍ಎಂ ಜೆವಿ ಸ್ವತಂತ್ರ ಪದವಿ ಪೂರ್ವ ಮಹಿಳಾ ಕಾಲೇಜಿನ ಲ್ಲಿ ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಚಾರ್ಯರು ಉಪನ್ಯಾಸಕರೊಂದಿಗೆ ವಿದ್ಯಾರ್ಥಿನಿಯರ ಶೈಕ್ಷಣಿಕ ಸಾಧನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರಾಚಾರ್ಯ ಸರಸ್ವತಿ ಹುಲ್ಲನ್ನವರ ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ.


ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರ ಪಾಲಕರೊಂದಿಗೆ ಸಂವಾದ ನಡೆಸಿ ವಿದ್ಯಾರ್ಥಿನಿಯರ ಶೈಕ್ಷಣಿಕ ಗುಣಮಟ್ಟ ಮತ್ತು ವಿದ್ಯಾಭ್ಯಾಸಕ್ಕೆ ಶೈಕ್ಷಣಿಕ ವಾತಾವರಣ ನಿರ್ಮಾಣ ಮತ್ತು ಅವರ ಅಧ್ಯಯನಕ್ಕೆ ಅನುಕೂಲಕರ ಪರಿಸರ ನಿರ್ಮಿಸುವುದು ಸೇರಿದಂತೆ ಪಾಲಕರೊಂದಿಗೆ ಮಹತ್ವದ ಚರ್ಚೆ ನಡೆಸಿದರು.


ಪ್ರತಿಯಾಗಿ ಪಾಲಕರು ಮಕ್ಕಳ ವಿದ್ಯಾಭ್ಯಾಸ ಮತ್ತು ಅವರ ಭವಿಷ್ಯ ರೂಪಿಸಲು ವಿದ್ಯಾರ್ಥಿನಿಯರ ವೈಯಕ್ತಿಕ ಕಾಳಜಿ ವಹಿಸಿ ಮನೆಮನೆಗೆ ಭೇಟಿ ನೀಡಿ ಪೆÇ್ರೀತ್ಸಾಹ ನೀಡುತ್ತಿರುವುದು ಶೈಕ್ಷಣಿಕ ಸುಧಾರಣೆಗೆ ಮತ್ತು ಪ್ರಗತಿಗೆ ಪೂರಕವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.


ಈ ಸಂದರ್ಭದಲ್ಲಿ ಉಪನ್ಯಾಸಕರಾದ ಎಸ್‍ಎಂ ವಿರಕ್ತಿ ಮಠ ಎಸ್ ಬಿ ಅಣ್ಣಿಗೇರಿ ನಾಗರಾಜ್ ಬಸಾಪುರ ಜಗದೀಶ್ ದ್ಯಾಮಣ್ಣವರ ಎಬಿ ಮೂಲಿಮನಿ ಡಿಜಿ ಕಟಗಿ ಇದ್ದರು.