Home ಜಿಲ್ಲೆ ಶಿಕ್ಷಕರ ತಾಳ್ಮೆ ಪರೀಕ್ಷಿಸದಿರಿ

ಶಿಕ್ಷಕರ ತಾಳ್ಮೆ ಪರೀಕ್ಷಿಸದಿರಿ


ಹುಬ್ಬಳ್ಳಿ,ಫೆ.೮: ದೇಶದ ಶಿಕ್ಷಕರ ತಾಳ್ಮೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪರೀಕ್ಷೆ ಮಾಡಬಾರದು. ತಕ್ಷಣ ಸರಕಾರಗಳು ಶಿಕ್ಷಕರ ಜ್ವಲಂತ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ದೇಶಾದ್ಯಂತ ಬೋದನಾ ಸ್ಥಗಿತ ಅಸಹಕಾರ ಚಳವಳಿ ಆರಂಭಿಸಬೇಕಾಗುತ್ತದೆ ಎಂದು ಅಖಿಲ ಭಾರತ ಶಿಕ್ಷಕರ ಫೇಡರೇಷನ ಅಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.


ದೆಹಲಿ ಚಲೋ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳ ಸೇವಾ ನಿಯಮಗಳ ಪ್ರಕಾರ ನೇಮಕವಾದ ನೌಕರರುಗಳಿಗೆ ಸೇವೆಯಲ್ಲಿರುವಾಗ ಪರೀಕ್ಷೆ ಬರೆಯಬೇಕು ಎಂಬ ನಿಯಮ ಇರುವದಿಲ್ಲಾ .ಸೇವೆಯಲ್ಲಿರುವ ಶಿಕ್ಷಕರು ಅರ್ಹತಾಪರೀಕ್ಷೆ ಬರೆಯಬೇಕೆಂಬ ಆದೇಶ ಸೇವಾ ನಿಯಮಗಳಿಗೆ ವಿರುದ್ಧವಾಗಿದೆ ಎಂದರು. ಸರಕಾರಿ ನೌಕರರಿಗೂ ಹಳೇಪಿಂಚಣಿ ಯೋಜನೆ ಮರು ಸ್ಥಾಪಿಸಲು ಒತ್ತಾಯಿಸಿದರು.


ಹೋರಾಟದ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಲೋಕಸಭಾ ಸದಸ್ಯ ಕುಮಾರನಾಯ್ಕ ದೇಶದ ಭವಿಷ್ಯ ನಿರ್ಧರಿಸುವ ಶಿಕ್ಷಕರ ಎಲ್ಲ ಬೇಡಿಕೆಗಳನ್ನು ಸರಕಾರ ತಕ್ಷಣ ಈಡೇರಿಸಬೇಕೆಂದು ಒತ್ತಾಯಿಸಿ ಶಿಕ್ಷಕರ ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆಯುತ್ತೇನೆ ಎಂದರು.


ಸಿ.ಎನ್. ಭಾರತಿ, ಚಾವಾ ರವಿ, ನರಸಿಂಹರಡ್ಡಿ, ಸದಾನಂದ ಗೌಡ, ಕಮಲಕಾಂತ ತ್ರಿಪಾಠಿ, ಹರಿಗೋವಿಂದನ, ದಿಗ್ಗವಿಜಯ ಸಿಂಗ ಜಡೇಜಾ, ವಿನೋದ ತ್ಯಾಕಾರಾನ , ರಂಗ್ ರಾಜನ್, ಶ್ರೀಮತಿ ಸೀಮಾ ಮಾತುರ, ಸಂಜಯ ಮಿಶ್ರಾ, ಅರ್ಜುನ ಸಿಂಗ್ ಹಾಗೂ ವಿವಿಧ ಶಿಕ್ಷಕರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.