ಗ್ರಾಪಂ ಚುನಾವಣೆ ಮುಂದೂಡಬೇಡಿ

ಚನ್ನಮ್ಮನ ಕಿತ್ತೂರು,ಡಿ9: ರಾಜ್ಯದಲ್ಲಿರುವ ಗ್ರಾಮ ಪಂಚಾಯತ ಚುನಾವಣಾ ಪ್ರತಿನಿಧಿಗಳ ಸದಸ್ಯತ್ವ ಡಿಸೆಂಬರದಲ್ಲಿ ಅಂತಿಮಗೊಳಲಿದ್ದು ಅದರ ಹಿನ್ನೆಲೆ ಸರ್ಕಾರ ರಾಜ್ಯಾಧ್ಯಂತ ಶೀಘ್ರವಾಗಿ ಚುನಾವಣೆಹಮ್ಮಿಕೊಳ್ಳಬೇಕು. ಇದಾಗದಿದ್ದರೆ ಆಡಳಿತ ಜೊತೆಗೆ ಅಭಿವೃದ್ದಿ ಕುಂಠಿತಗೊಳ್ಳುತ್ತದೆ ಎಂದು ಗ್ರಾಪಂ ಸದಸ್ಯ ಒಕ್ಕೂಟದ ರಾಜ್ಯ ಸಹ ಕಾರ್ಯದರ್ಶಿ ಮಹಾಂತೇಶ ಪಾಶ್ಚಾಪೂರ ಹೇಳಿದರು.


ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರಾಪಂ ಚುನಾವಣೆ ನಡೆಸಲು ಸಿಎಂ-ಡಿಸಿಎಂ ಗುದ್ದಾಟದಲ್ಲಿ ತಾಪಂ-ಜಿಪಂ ಮುಂದೂಡಿದಂತೆ ಗ್ರಾಪಂ ಚುನಾವಣೆ ಮುಂದೂಡಬಾರದು ಈ ಮೂರು ಚುನಾವಣೆಗಳಿಗೆ ಯಾವುದೇ ತಯಾರಿ ನಡೆದಿಲ್ಲ ಈ ಚುನಾವಣೆಗಳನ್ನು ಮೂಂದೂಡುವ ಪ್ರಯತ್ನದಲ್ಲಿದ್ದಾರೆ. ಈ ಕೂಡಲೇ ಸರ್ಕಾರ ಚುನಾವಣೆಗೆ ಕ್ರಮ ಕೈಗೊಳ್ಳಬೇಕು. ಇದೇನಾದರೂ ಆಗದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.


ಗ್ರಾಮೀಣ ಭಾಗದಲ್ಲಂತೂ ಅಭಿವೃದ್ದಿ ಹೇಳತೀರದಷ್ಟು ಕುಂಠಿತವಾಗಿ ಉದ್ಯೋಗ ಖಾತ್ರಿ ಸೇರಿದಂತೆ ವಿವಿಧ ಗುತ್ತಿದಾರರ ಬಿಲ್ಲು ಇಲ್ಲದೇ ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದಾರೆ. ಸಾರ್ವಜನಿಕರು ಈ ಕೆಲಸ ಏಕೆ ನಿಲ್ಲಿಸಿದ್ದೀರಿ ಎಂದು ಪ್ರಶ್ನಿಸಿದಾಗ ಅನುದಾನವೇ ಬಿಡುಗಡೆಯಾಗಿಲ್ಲ ನಾವೇನು ಮಾಡಬೇಕು ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ನಮ್ಮ ಬೇಡಿಕೆ ಈಡೇರಿಕೆಗಾಗಿ ಬೆಳಗಾವಿ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಡಿ. 9 ರಂದು ನಮ್ಮ ಒಕ್ಕೂಟದ ರಾಜ್ಯಾಧ್ಯಕ್ಷ ಸತೀಶ ಕಾಡಶೆಟ್ಟಿಹಳ್ಳಿ ಅವರ ಮುಂದಾಳತ್ವದಲ್ಲಿ ಸಾವಿರಾರು ಗ್ರಾಪಂ ಸದಸ್ಯರು ಸೇರಿ ಪ್ರತಿಭಟನೆಯಲ್ಲಿ ಪಾಲ್ಗೋಳಲಿದ್ದೇವೆ ಎಂದು ತಿಳಿಸಿದರು.


ಈ ವೇಳೆ ಗ್ರಾಪಂ ಅಧ್ಯಕ್ಷರುಗಳಾದ ಕಾಶೀಮ್ ಹಟ್ಟಿಹೊಳಿ, ದೇಸಾಯಿ ಗಾಳಿ, ಉಮೇಶ ಸಿದ್ರಾಮನಿ, ಚಂದ್ರಶೇಖರ ಕಡೆಮನಿ, ಉಮೇಶ ಕದಂ, ಶಿವಪುತ್ರ ತಳವಾರ, ಬಸವರಾಜ ನಾಯ್ಕರ ಸೇರಿದಂತೆ ವಿವಿಧ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ, ಸದಸ್ಯರಿದ್ದರು.