ತಾಳಿಕೋಟೆ :ಡಿ.೧: ಸಮಿಪದ ಕೊಡಗಾನೂರ ಕ್ರಾಸ್‌ನಲ್ಲಿರುವ ಜೆ ಎಸ್ ಎಸ್ ಶಾಲೆಯಲ್ಲಿ೨೦೨೫-೨೬ನೇ ಸಾಲಿನ ನಾಲ್ಕನೇ ಬಾರಿ ಪಾಲಕರ ಸಭೆ ನಡೆಯಿತು.
ಈ ಸಮಯದಲ್ಲಿ ಶಾಲೆಯ ಕಾರ್ಯದರ್ಶಿಗಳಾದ ಸಾಹೇಬಗೌಡ ಸಿದ್ದನಗೌಡ ಗಬಸಾವಳಗಿ ಅವರು ಮಾತನಾಡಿ ಮಕ್ಕಳ ಜೀವನದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಎಷ್ಟು ಅವಶ್ಯಕ ಹಾಗೂ ಮಕ್ಕಳ ಭವಿಷ್ಯತ್ತಿನ ಜೀವನದಲ್ಲಿ ಪಾಲಕರ ಪಾತ್ರ ಎಷ್ಟು ಮಹತ್ವದ್ದು ಎಂದು ತಿಳಿ ಹೇಳಿದ ಅವರು ಇಂದಿನ ಜೀವನದಲ್ಲಿ ಕೋಟಿ ಆಸ್ತಿ ಮಾಡುವದಕ್ಕಿ ಮಕ್ಕಳನ್ನೇ ನಿಜವಾದ ಆಸ್ತಿಯನ್ನಾಗಿ ಮಾಡಬೇಕು ಈ ನಿಟ್ಟಿನಲ್ಲಿ ಪಾಲಕರು ಶಿಕ್ಷಕರೊಂದಿಗೆ ಸದಾ ನಿಕಟ ಸಂಪರ್ಕ ಸಾದಿಸುವದರೊಂದಿಗೆ ಮಕ್ಕಳ ಓದಿನ ಬಗ್ಗೆ ಲಕ್ಷ ವಹಿಸಬೇಕೆಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ವಿನಾಯಕ ಪಟಗಾರ ಗುರುಗಳು ಮಾತನಾಡಿ ಮಕ್ಕಳ ಸರ್ವೋತ್ತಮ ಬೆಳವಣಿಗೆಯಲ್ಲಿ ಶಿಕ್ಷಕರಷ್ಟೇ ಪಾಲಕರದ್ದು ಜವಾಬ್ದಾರಿ ಇದೆ ನಿತ್ಯ ಮಕ್ಕಳ ಓದು ಬರಹದ ಬಗ್ಗೆ ಪಾಲಕರು ಸಹ ಲಕ್ಷ ವಹಿಸಬೇಕು ತಮ್ಮ ಮಕ್ಕಳು ಶಿಕ್ಷಣದಲ್ಲಿ ಕುಂಠಿತ ಕಂಡಲ್ಲಿ ಶಿಕ್ಷಕರನ್ನು ಸಂಪರ್ಕಿಸಿ ತೊಂದರೆಯನ್ನು ನಿವಾರಿಸಿ ಉತ್ತಮ ಫಲಾತಾಂಶ ಬರಲು ಸಹಕರಿಸಬೇಕೆಂದರು.
ಈ ಕಾರ್ಯಕ್ರಮದಲ್ಲಿ ಗುರುಗಳು ಮತ್ತು ಗುರು ಮಾತೆಯರು ಹಾಗೂ ಪಾಲಕ ಬಂಧುಗಳು ಮತ್ತು ಕಾರ್ಯಕ್ರಮದ ಮುಖ್ಯ ಕೇಂದ್ರ ಬಿಂದುಗಳಾಗಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಹಾಗೂ ಮುಖ್ಯ ಗುರುಗಳ ನೇತೃತ್ವದಲ್ಲಿ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.


























