ಬೆಂಬಲ ಬೆಲೆ ನಿಗದಿಯಾಗುವವರಿಗೆ ಸಕ್ಕರೆ ಕಾರ್ಖಾನೆಗೆ ಕಬ್ಬು ನೀಡದಿರಿ:ಶರಣು ಬಿಲ್ಲಾಡ್

ಜೇವರ್ಗಿ:ನ.೫: ತಾಲ್ಲೂಕಿನ ಸಮಸ್ತ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಯಿಂದ ಪ್ರತಿ ಟನ್ನಗೆ ೩೫೦೦ ರೂ.ಬೆಂಬಲ ಬೆಲೆ ನಿಗದಿಯಾಗುವವರೆಗೂ ಯಾವುದೇ ಒಬ್ಬ ರೈತರು ಸಕ್ಕರೆ ಕಾರ್ಖಾನೆಗೆ ಕಬ್ಬನ್ನು ನುರಿಸಲು ನೀಡಬಾರದು.ಎಂದು ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅದ್ಯಕ್ಷ ಶರಣು ಬಿಲ್ಲಾಡ್ ಅವರು ಸಮಸ್ತ ಕಬ್ಬು ಬೆಳೆಗಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.ನAತರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿನ್ನೆ ನಡೆದ ಜಿಲ್ಲಾ ಅಧಿಕಾರಿಗಳ ನೇತೃತವದ ಕಾರ್ಖಾನೆಯ ಮಾಲೀಕರ ಮತ್ತು ಕಬ್ಬು ಬೆಳೆಗಾರರ ಸಭೆಯಲ್ಲಿ ಡಿಸಿ ಪೌಜಿಯ ತರುನುಮ್ ,ಅವರು ಸಕ್ಕರೆ ಕಾರ್ಖಾನೆಯ ಮಾಲೀಕರಿಗೆ ಬೆಂಬಲ ಬೆಲೆ ನಿಗದಿಗೊಳಿಸುವಂತೆ ಎರಡು ದಿನಗಳ ಗಡುವು ನೀಡಿದ್ದಾರೆ.ಆದ್ದರಿಂದ ತಾಲ್ಲೂಕಿನ ಯಾವುದೇ ರೈತರು ಕಬ್ಬು ನುರಿಸಲು ನೀಡಬಾರದು ಎಂದು ತಿಳಿಸಿದ್ದಾರೆ. ತದನಂತರವಾಗಿ ಮಾತನಾಡಿದ ಅವರು ಉದ್ದೇಶಪೂರ್ವಕವಾಗಿ ಮಾಲೀಕರು ರೈತರ ಮಧ್ಯ ಜಗಳ ಹಚ್ಚಲು ಯಾದಗಿರಿ ಜಿಲ್ಲೆಯಿಂದ ಕಬ್ಬು ತರಿಸುತ್ತಿದ್ದಾರೆ ಎಂದು ಆರೋಪಿಸಿದರು.ಇದೆ ಚಾಳಿಯನ್ನು ಮುಂದುವರೆದರೆ ಬೇರೆ ಜಿಲ್ಲೆಯ ಕಬ್ಬಿನ ಲಾರಿಗಳಿಗೆ ಬೆಂಕಿ ಹಚ್ಚಲಾಗುವುದು ಎಚ್ಚರಿಕೆಯನ್ನು ನೀಡಿದರು.
ಅದೇ ರೀತಿಯಾಗಿ ಹಿಂದಿನ ಯಡಿಯೂರಪ್ಪ ಸರ್ಕಾರವಿದ್ದಾಗ ಹೆಚ್ಚುವರಿಯಾಗಿ ಪ್ರತಿ ಟನ್ನಗೆ ೧೫೦ ರೂ ಸಹಾಯ ಧನವನ್ನು ಮುಂದುವರಿಸಬೇಕು.ಇ ವರ್ಷ ವಿಪರೀತವಾದ ಮಳೆಯಿಂದಾಗಿ ರೈತರು ತೀವ್ರವಾದ ಸಂಕಷ್ಟದಲ್ಲಿದ್ದಾರೆ ಆದ್ದರಿಂದ ಕೊಡಲೇ ಪ್ರತಿ ಟನ್ನಗೆ ೨೦೦ ಹೆಚ್ಚಿಸಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.