
ಕಲಬುರಗಿ,ಡಿ.31: ನಾವು ಕಷ್ಟಪಡುತ್ತೇವೆ, ಮಕ್ಕಳಿಗೆ ಕಷ್ಟ ಬೇಡ ಎಂದು ಪಾಲಕರು ಹೇಳುತ್ತಿರುತ್ತಾರೆ. ಆದರೆ ಮಕ್ಕಳನ್ನು ಕಷ್ಟದಿಂದ ದೂರ ಇಡಬಾರದು. ಏಕೆಂದರೆ ಮಕ್ಕಳಿಗೂ ಕಷ್ಟ ಏನೆಂಬುದು ಒಮ್ಮೆಲೆ ಅರಿವು ಆಗುವುದರ ಬದಲು ಸ್ವಲ್ಪಸ್ವಲ್ಪವಾದರೂ ತಿಳಿಸುವ ಪ್ರಯತ್ನ ತಂದೆತಾಯಿ ಮಾಡಬೇಕೆಂದು ಅಫಜಲಪುರ ತಾಲೂಕಿನ ಚಿಣಮಗೇರಿ ಮಹಾಂತೇಶ್ವರ ಮಠದ ಪೂಜ್ಯರಾದ ವೀರ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರು ಹೇಳಿದರು.ನಗರದ ಡಾ. ಎಸ್. ಎಂ ಪಂಡಿತ ರಂಗಮಂದಿರದಲ್ಲಿ ಜರುಗಿದ ಶಂಕರ ಮೆಮೋರಿಯಲ್ ಶಿಕ್ಷಣ ಸಂಸ್ಥೆಯ ಪೂರ್ಣಜ್ಞಾನ ಆಂಗ್ಲ ಮಾಧ್ಯಮ ಹಾಗೂ ನವೋದಯ ವಿದ್ಯಾಮಂದಿರ ಶಾಲಾ ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನಾವು ಪಡಬಾರದ ಕಷ್ಟ ಮಕ್ಕಳು ಪಡಬಾರದು ಎಂದು ತಂದೆತಾಯಿ ಹೇಳುವುದು ಮಕ್ಕಳ ಮೇಲೆ ಹೊಂದಿರುವ ಪ್ರೀತಿ ಹಾಗೂ ಪ್ರೇಮವಾಗುತ್ತದೆ. ಆದರೆ ಕಷ್ಟಗಳು ಪಾಠಗಳು ಕಲಿಸುತ್ತವೆ ಎನ್ನುವಂತೆ ಕೆಲವೊಂದು ಕಷ್ಟಗಳನ್ನು ಮಕ್ಕಳಿಗೆ ತಿಳಿ ಹೇಳಬೇಕು. ಕೆಲವೊಂದು ಕಷ್ಟಗಳನ್ನು ಮಕ್ಕಳು ಅರಿತ್ತಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಎಂದರು.
ಕಾರ್ಯಕ್ರಮದಲ್ಲಿ ಒಂದನೇ ತರಗತಿಯಿಂದ 10 ತರಗತಿವರೆಗಿನ ಪ್ರತಿ ತರಗತಿಗೆ ಟಾಪರ್ ಬಂದ ವಿದ್ಯಾರ್ಥಿಗಳನ್ನು ಹಾಗೂ ಎಸ್ ಎಸ್ ಎಲ್ ಸಿಯಲ್ಲಿ ಟಾಪರ್ ಪಡೆದ ಹಾಗೂ ವಿವಿಧ ಆಟೋಟಗಳು ಮತ್ತು ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕಾರ ನೀಡಿ ಪೆÇ್ರೀತ್ಸಾಹಿಸಲಾಯಿತು.
ಶಂಕರ ಮೆಮೋರಿಯಲ್ ಏಜುಕೇಷನ್ ಟ್ರಸ್ಟ್ ನ ಅಧ್ಯಕ್ಷ ಶರಣಬಸಪ್ಪ ಎಸ್. ಕೋಗನೂರ, ಪದಾಧಿಕಾರಿಗಳಾದ ಶಿವಕುಮಾರ ಧರ್ಮಗೊಂಡ, ಮಲ್ಲಿಕಾರ್ಜುನ ಕಲ್ಯಾಣಿ, ಭೀಮರಾವ ಎಸ್ ಕೋಗನೂರ, ಮಲ್ಲಿಕಾರ್ಜುನ ಕೋಗನೂರ, ಪ್ರಮುಖರಾದ ಸಂಗಣ್ಣಗೌಡ ಎಸ್. ಪಾಟೀಲ್, ನಾಗರಾಜ ಸಜ್ಜನ್, ನವೀನ ಮುಗಳಿ, ಹಿರಿಯ ಪತ್ರಕರ್ತರಾದ ಬಾಬುರಾವ ಯಡ್ರಾಮಿ, ಹಣಮಂತರಾವ ಭೈರಾಮಡಗಿ, ಶರಣಯ್ಯ ಹಿರೇಮಠ, ಡಾ. ಬಸವರಾಜ ನರಸಣಗಿ, ಡಾ.ದೇವಾನಂದ ಬಿರಾದಾರ, ಸಂತೋಷ ನಂದಗಾವಿ ಮಠ, ಜಯಶ್ರೀ ಕೋಗನೂರ ಸೇರಿದಂತೆ ಹಲವರಿದ್ದರು. ಶಾಲಾ ಮುಖ್ಯ ಗುರುಗಳಾದ ಪಾರ್ವತಿ ಸಂತೋಷ ನಂದಗಾವಿಮಠ ಹಾಗೂ ರೇಣುಕಾ ಪಾಟೀಲ್ ಶಾಲಾ ವಾರ್ಷಿಕ ವರದಿ ಓದಿದರು. ರಾಮದಾಸ್ ಚವ್ಹಾಣ, ಗಂಗಾದೇವಿ ಶಿವಕುಮಾರ ವಗ್ಗೆ ನಿರೂಪಿಸಿದರು.

























