ಶಿವಲಿಂಗೇಶ್ವರ ಮಠಕ್ಕೆ 5 ಲಕ್ಷ ರೂ ದೇಣಿಗೆ

ಕಲಬುರಗಿ,ಆ.28: ಶ್ರಾವಣ ಮಾಸದ ಸಮಾರೋಪ ಸಮಾರಂಭದ ಪ್ರಯುಕ್ತ ಕಲಬುರಗಿ ತಾಲ್ಲೂಕಿನ ಕೊಳ್ಳುರದಲ್ಲಿ
ಶಿವಲಿಂಗೇಶ್ವರರ ಪಲ್ಲಕ್ಕಿ ಮಹೋತ್ಸವ ವಿಜೃಂಭಣೆಯಿಂದ ನೇರವೇರಿತು.
ಹಿರೇ ಸಾವಳಿಗಿಯ ಗುರುನಾಥ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತಾನಾಡಿ, ಜಗದ್ಗುರು ಶಿವಲಿಂಗೇಶ್ವರರ ಜನ್ಮ ಸ್ಥಳವಾದ ಈ ಮಠವು ಅಭಿವೃದ್ಧಿ ಅಗಬೇಕೆಂದರೆ ಎಲ್ಲಾ ಭಕ್ತರು ತನು ಮನದಿಂದ ಸೇವೆಯನ್ನು ಮಾಡಿದಾರೆ. ನಿಮ್ಮನ್ನು ಈ ಭಗವಂತ ಯಾವತ್ತೂ ಕೈ ಬಿಡುವದಿಲ್ಲ ಎಂದು ಶ್ರೀಗಳು ಹೇಳಿದರು. ಶಿವಲಿಂಗೇಶ್ವರ ಮಠಕ್ಕೆ ಗ್ರಾಮಸ್ಥರ ಸಮ್ಮುಖದಲ್ಲಿ ಗುರುನಾಥ ಮಹಾಸ್ವಾಮಿಗಳು 5 ಲಕ್ಷ ರೂ ದೇಣಿಗೆ
ನೀಡಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಭಕ್ತರು ಮಹಾಪ್ರಸಾದ ಸ್ವೀಕರಿಸಿದರು.ಭಕ್ತರಿಗೆ ಶ್ರೀಗಳು ಆಶೀರ್ವಚನ ನೀಡಿದರು