ಬೀದರ:ಅ.24: ಸರಕಾರಿ ಇಂಜಿನೀಯರಿಂಗ್ ಕಾಲೇಜು ತಾಂತ್ರಿಕ ಮಕ್ಕಳ ಶಿಕ್ಷಣ ಹಿತದೃಷ್ಟಿಯಿಂದ ಪ್ರದೀಪ ಪೆÇೀಲಾ ಅವರಿಂದ ತಾಂತ್ರಿಕ ಪುಸ್ತಕಗಳು ದೇಣಿಗೆ ನೀಡಿದ್ದು ಇದೊಂದು ಜಿಲ್ಲೆಯಲ್ಲಿ ಎಲ್ಲರಿಗೂ ಮಾದರಿಯಾಗಿದೆ ಎಂದು ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ನುಡಿದರು.
ಬೀದರ ಸರಕಾರಿ ಇಂಜಿನಿಯರಿಂಗ್ ಕಾಲೇಜನಲ್ಲಿ ಕಂಪ್ಯೂಟರ್ ಸೈನ್ಸ್, ಸಿವಿಲ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್, ಅರ್ಟಿಫಿಸಿಯಲ್ ಇಂಟೆಲಿಜೆನ್ಸ್ ಕೋರ್ಸ್‍ಗಳ ಮಕ್ಕಳಿಗೆ ಪುಸ್ತಕ ತುಂಬಾ ಅನಿವಾರ್ಯವಾಗಿತ್ತು, ಅನೇಕ ಬಡ ಮಕ್ಕಳು ಕಲಿಯುವುದಕ್ಕೆ ಆರ್ಥಿಕ ತೊಂದರೆಯಾಗುವುದು ಕಷ್ಟ. ಇಂಜಿನಿಯರಿಂಗ್ ಕೋರ್ಸ್ ಓದಲು ಹೆಚ್ಚಿನ ಬೆಲೆಯುಳ್ಳ ಪುಸ್ತಕ ಖರೀದಿಸುವುದು ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಸಂಕಷ್ಟ ಎದುರಾಗುವುದು ಸಹಜ. ಇಂಥ ಪರಿಸ್ಥಿತಿಯನ್ನು ಅರಿತ ಪ್ರದೀಪ ಪೆÇೀಲಾ ನಿವೃತ್ತ ಐಟಿಐ ಸಿಬ್ಬಂದಿ ತನ್ನ ಮಗನಾದ ಅಕ್ಷಯ ಪೆÇೀಲಾ ಓದು ಮುಗಿಸಿ ಬಾಸ್ಕೊ ಕಂಪನಿಯಲ್ಲಿ ನೌಕರಿ ಪಡೆದಿದ್ದಾರೆ. ಅವರು ಓದಿರುವ ಎಲ್ಲಾ ಪುಸ್ತಕಗಳು ಇಂದು ಸಮರ್ಪಿಸುತ್ತಿರುವುದು ಶ್ಲಾಘನೀಯ.
ತನ್ನ ಮನೆಯಲ್ಲಿ ಅನೇಕ ವರ್ಷಗಳಿಂದ ಸಂಗ್ರಹಿಸಲ್ಪಟ್ಟ ಇಂಜಿನೀಯರಿಂಗ್ ಪುಸ್ತಕ ಇಂದು ದೇಣಿಗೆ ನೀಡುತ್ತಿರುವುದು ಅತ್ಯಂತ ಸಂತಸದ ಜೊತೆಗೆ ಇದು ಇಡೀ ಜಿಲ್ಲೆಗೆ ಮಾದರಿಯಾಗಿದ್ದು, ಎಲ್ಲ ಪಾಲಕರು ಪ್ರದೀಪ ಪೆÇೀಲಾ ರೀತಿಯಲ್ಲಿಯೇ ಚಿಂತನೆ ಮಾಡಿದರೆ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ನುಡಿದರು.
ಡಾ ದೇವೇಂದ್ರ ಹಂಚೆ ಪ್ರಾಚಾರ್ಯರು ಎಲ್ಲ ಪುಸ್ತಕಗಳು ಅವಲೋಕಿಸಿ ಅದರಲ್ಲಿ ಅಚಾನಕ್ಕಾಗಿ ಒಂದು ಪುಸ್ತಕ ಎತ್ತಿಕೊಂಡು ನೋಡಿ ಅದರ ಬೆಲೆ ರೂ. 21000/ ಗಮನಿಸಿ, ಇದು ದೊಡ್ಡ ಉಪಕಾರ, ಅಕ್ಷಯ ಪ್ರದೀಪ ಪೆÇೀಲಾ ಕೊಡುಗೆಯಾಗಿದೆ. ನಮ್ಮಲ್ಲಿ ಎಲ್ಲ ಸೆಮಿಸ್ಟರ್ ಒಳಗೊಂಡಂತೆ ಒಟ್ಟು 709 ವಿದ್ಯಾರ್ಥಿ/ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಸುಮಾರು ದಿವಸಗಳಿಂದ ಇಂಥ ಪುಸ್ತಕ ಖರೀದಿಸಲು ಪ್ರಸ್ತಾವನೆ ಸಲ್ಲಿಸುವ ತವಕದಲ್ಲಿದ್ದೆ, ಜೊತೆಗೆ ಸರಕಾರದ ನಿಯಮಗಳನ್ನು ಗಮನಿಸಿದರೆ ಒಂದು ಲಕ್ಷ ಮೊತ್ತದ ಪುಸ್ತಕಬೇಕಾದರೆ ತಕ್ಷಣ ಸಿಗುವುದು ಬಲು ಕಷ್ಟ ಜೊತೆಗೆ ನೂರಾರು ಕಾನೂನಿನ ತೊಡಕುಂಟಾಗುವುದು ಸಹಜ. ಆದರೆ ಕನಸು ಮನಸ್ಸಿನಲ್ಲೂ ನಾವೆಂದು ವಿಚಾರ ಸಹ ಮಾಡಿಲ್ಲ ಇಷ್ಟು ಪುಸ್ತಕ ನಮಗೆ ಸಿಗಬಹುದೆಂಬ ಕಲ್ಪನೆ ಇರಲಿಲ್ಲ. ಆದರೂ ಟೋಕರೆ ಸರ್ ನಿವೃತ್ತಿ ಆದ ಮೇಲೂ ಅನೇಕ ಸಂಘ ಸಂಸ್ಥೆಗಳ ಸಂಪರ್ಕ ಇಟ್ಟು ಕೊಂಡು ಜಿಲ್ಲೆಯ ತಾಂತ್ರಿಕ ವರ್ಗದ ಮಕ್ಕಳಿಗೆ ಸಹಕರಿಸುವ ಮನಸ್ಸುಳ್ಳ ಶಿವಶಂಕರ ನಮಗೆಲ್ಲ ಹಿರಿಯರು. ಇವರು ಇದೇ ಪುಸ್ತಕ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಕೊಡಬಹುದಾಗಿತ್ತು, ಆದರೆ ಸರಕಾರಿ ಇಂಜಿನಿಯರಿಂಗ್ ಕಾಲೇಜ್ ಮಕ್ಕಳಿಗೆ ಸಹಕಾರ ಮಾಡುವ ಮನೋಭಾವ ಒಂದು ಅಪರೂಪ ಸನ್ನಿವೇಶ ಇದಾಗಿದೆ. ಇಂಥ ಅನೇಕ ಹಿರಿಯರು, ಶೈಕ್ಷಣಿಕ ಪ್ರಗತಿಪರ ಚಿಂತಕರು, ಕನ್ನಡ ಸಾಹಿತ್ಯ ಪರಿಷತ್ತು ನವರು ಸಹಕರಿಸಿದರೆ ಇದೊಂದು ಮಾದರಿ ಕಾಲೇಜು ಮಾಡಲು ಶ್ರಮಿಸಲು ಕಟಿಬದ್ದನಾಗಿರುವೆನು ಎಂದು ಹೇಳಿ ದೇಣಿಗೆ ನೀಡಿದ ಪ್ರದೀಪ ಪೆÇೀಲಾ ಹಾಗೂ ಅಕ್ಷಯ ಪೆÇೀಲಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಮೊದಲಿಗೆ ಡಾ ರಿಕ್ಕೆ ವಿಜಯಕುಮಾರ ಸ್ವಾಗತಿಸಿ, ಡಾ ಬಾಬುರಾವ ವಂದಿಸಿದರು. ಪುಸ್ತಕ ದೇಣಿಗೆಯಲ್ಲಿ ಶಿವಶಂಕರ ಟೋಕರೆ ಸಹ ಪಾಲ್ಗೊಂಡಿದ್ದರು.

























