ರಕ್ತದಾನ ಮಾಡಿ ಜನರಪ್ರಾಣ ಉಳಿಸಿ

ಮುಳಬಾಗಿಲು,ಡಿ.೨-ಸಮಾಜದಲ್ಲಿ ರಕ್ತದ ಕೊರತೆಯಿಂದ ಬಳಲುತ್ತಿರುವವರಿಗೆ ರಕ್ತದಾನ ಮಾಡುವುದರಿಂದ ಸಂಜೀವಿನಿ ಯಂತೆ ಜೀವ ಉಳಿಸಿದಂತಾಗುತ್ತದೆ ಎಂದು ಅಮರಜ್ಯೋತಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್.ನಾಗರಾಜ್ ತಿಳಿಸಿದರು.


ಮುಳಬಾಗಿಲು ನಗತದ ಅಮರಜ್ಯೋತಿ ವಿದ್ಯಾಸಂಸ್ಥೆಗಳಲ್ಲಿ ರೋಟರಿ, ಕೋಲಾರ ಲಯನ್ಸ್ ರಕ್ತನಿಧಿ ಹಾಗೂ ಅಮರಜ್ಯೋತಿ ವಿದ್ಯಾಸಂಸ್ಥೆಯಿಂದ ಉಚಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.


ಯುವಕರು ದೇಶದ ಆಸ್ತಿಯಾಗಿದ್ದು ದೇಶವನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸಲು ಯುವಕರು ಶೈಕ್ಷಣಿಕವಾಗಿ ಮುಂದೆ ಬರುವ ಜೊತೆಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರಗಳಲ್ಲಿ ಮುಂದೆ ಬರಬೇಕು, ಸ್ವಸ್ಥ ಹಾಗೂ ಆರೋಗ್ಯವಂತ ಸಮಾಜಕ್ಕಾಗಿ ಹಾಗೂ ರಕ್ತವಿಲ್ಲದೆ ಬಳಲುವ ಜನತೆಗೆ ತಪ್ಪದೆ ರಕ್ತವನ್ನು ನೀಡಿ ಜನರ ಪ್ರಾಣ ಉಳಿಸುವ ಸಾಹಸಕ್ಕೆ ಮುಂದಾಗಬೇಕು ಎಂದು ಹೇಳಿದರು.


ವಾಹನಗಳ ದಟ್ಟಣೆ ಹಾಗೂ ಟ್ರಾಫಿಕ್ ಕಾನೂನುಗಳನ್ನು ಕೆಲವರು ಸರಿಯಾದ ರೀತಿಯಲ್ಲಿ ಪಾಲಿಸದೆ ಇರುವ ಪರಿಣಾಮ ಅನೇಕ ಅಪಘಾತಗಳು ನಡೆಯುತ್ತಿದ್ದು, ಅಪಘಾತದಲ್ಲಿ ಗಾಯಗೊಂಡವರಿಗೆ ರಕ್ತದ ಅವಶ್ಯಕತೆ ಹಾಗೂ ರೋಗರುಜಿನಗಳಿಂದ ಬಳಲುವವರಿಗೆ ರಕ್ತ ಅತ್ಯಂತ ಅವಶ್ಯಕ ಆರೋಗ್ಯವಂತ ಯುವಕರು ರಕ್ತದಾನ ಮಾಡಲು ಸ್ವಯಂ ಪ್ರೇರಿತರಾಗಿ ಮುಂದಾಗಬೇಕು ಎಂದು ಹೇಳಿದರು.


ಕಾರ್ಯದರ್ಶಿ ಯಲವಹಳ್ಳಿ ಅಶೋಕ್ ಕುಮಾರ್, ಸತ್ಯಮಯ್ಯ, ಜಗದೀಶ್, ರಘು, ಚಂಗಾರೆಡ್ಡಿ, ಮುನಿನಾರಾಯಣಪ್ಪ, ಶ್ರೀನಿವಾಸ ರೆಡ್ಡಿ, ರಮೇಶ್, ರಘುನಾಥ್, ಪ್ರಭಾಕರ್, ಸುದರ್ಶನ ಬಾಬು ಇದ್ದರು.