ದೇಶದ ಆರ್ಥಿಕ ಪ್ರಗತಿಗೆ ಸ್ವದೇಶಿ ವಸ್ತು ಅತ್ಯವಶ್ಯ


ರಬಕವಿ ಬನಹಟ್ಟಿ,ಡಿ,೫:
ದೇಶದ ಆರ್ಥಿಕ ಸ್ವಾವಲಂಬನೆಗೆ ಗುರಿಯಿಟ್ಟು ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಹಲವು ಜಾಗೃತಿಯ ಕಾರ್ಯಕ್ರಮಗಳು ನಡೆಯುತ್ತಿರುವ ಸಂದರ್ಭದಲ್ಲಿ ಆತ್ಮ ನಿರ್ಬರ ಸ್ವದೇಶಿ ಪ್ರತಿಜ್ಞೆ ಎಂಬುದು ಜನರಲ್ಲಿ ಸ್ವದೇಶಿ ಉತ್ಪಾದನೆಗೆ ಬೆಂಬಲ ಕೋರಿ ರೂಪಿಸಲಾದ ಮಹತ್ವದ ಬದ್ದತೆಯಾಗಿ ಹೊರ ಹೊಮ್ಮಿದೆ ಎಂದು ಜಿಪಂ ಮಾಜಿ ಸದಸ್ಯ ಬಾಬಾಗೌಡ ಪಾಟೀಲ ಹೇಳಿದರು,ಅವರೂ ತಾಲೂಕಿನ ನಾವಲಗಿ ಗ್ರಾಮದಲ್ಲಿ ಮನೆ ಮನೆಗೆ ಆತ್ಮ ನಿರ್ಬರ ಸ್ವದೇಶಿ ಪ್ರತಿಜ್ಞೆ ಕರ ಪತ್ರಗಳನ್ನು ಹಂಚಿ ಮಾತನಾಡಿದರು,ಸ್ಥಳೀಯ ಉತ್ಪನಗಳ ಬಳಕೆಯನ್ನು ಉತ್ತೇಜಿಸುವುದರ ಮೂಲಕ ದೇಶದ ಕೈಗಾರಿಕಾ ಪ್ರಗತಿ ಹಾಗೂ ಉದ್ಯೋಗಾವಕಾಶಗಳ ವಿಸ್ತರಣೆಯ ಕಡೆಗೆ ಪ್ರಜೆಗಳು ಹೆಜ್ಜೆ ಹಾಕುವಂತೆ ಮಾಡುವುದೆ ಇದರ ಮುಖ್ಯ ಉದ್ದೇಶ,ಭಾರತೀಯ ಉತ್ಪನ್ನಗಳು,ಕೈ ತರಕಾರಿ ವಸ್ತುಗಳು,ಸ್ಥಳೀಯ ಸೇವೆಗಳು ಮತ್ತು ಸ್ವದೇಶಿ ಕೈಗಾರಿಕೆಗಳಿಗೆ ಆದ್ಯತೆ ನೀಡುವ ಮೂಲಕ ಸಂಕಲ್ಪ ಮಾಡಬೇಕು,ವಿದೇಶಿ ಉತ್ಪನ್ನಗಳ ಮೇಲಿನ ಅವಲಂಬನೆ ಕಡಿಮೆಯಾಗುವ ಜೋತೆಯಲ್ಲಿ ಸ್ಥಳೀಯ ವ್ಯಾಪಾರಿಗಳಿಗೆ ಉತ್ಸಾಹ ಸಿಗಲಿದೆ,ಪ್ರಧಾನಿ ನರೇಂದ್ರ ಮೋದಿಜೀಯವರ ಮಹತ್ವದ ಸಂಕಲ್ಪವಾಗಿದ್ದು ದೇಶದ ಹಣ ದೇಶದಲ್ಲೇ ಸುತ್ತಾಡುವಂತೆ ಮಾಡುವುದು ಸಣ್ಣ ಮಧ್ಯಮ ಕೈಗಾರಿಕೆಗಳಿಗೆ ಬಲ ತುಂಬುವುದು ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವುದು ಕೌಶಲ್ಯಾಭಿವೃದ್ದಿ, ತಂತ್ರಜ್ಞಾನ ಆವಿಷ್ಕಾರ ಸೇರಿದಂತೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದಾರೆ ಆದ್ದರಿಂದ ಪ್ರತಿಯೊಬ್ಬರು ಪ್ರಧಾನಿಯವರಿಗೆ ಕೈಜೋಡಿಸೋಣವೆಂದರು, ಈ ಸಂದರ್ಭದಲ್ಲಿ ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ, ಗ್ರಾಪಂ ಅಧ್ಯಕ್ಷ ರೇಖಾ ಕಾಂತಿ, ಆನಂದ ಕಂಪು, ಮುತ್ತಪ್ಪ ಅಂಗಡಿ,ಬಸವರಾಜ ಗಣಿ, ಗಂಗಪ್ಪ ಅಮ್ಮಲ್ಲಜೇರಿ,ರಾಜು ಕದಂ,ರಮೇಶ್ ನಾಯಕ, ಬಸಪ್ಪ ಕಂಚು, ಮುತ್ತು ಆಸಂಗಿ,ಸಿದ್ದು ಕಂಚು ಸೇರಿದಂತೆ ಅನೇಕರು ಹಾಜರಿದ್ದರು,