ಚಿತಾಪುರ; ಅ.20:ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಾಗೂ 23 ವಾರ್ಡ್’ಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಿವಾಸಿಗಳು ಭಯಭೀರಾಗಿದ್ದಾರೆ.
ಪಟ್ಟಣದ ತರಕಾರಿ ಮಾರುಕಟ್ಟೆ ಮತ್ತು ಮಟನ್ ಮಾರುಕಟ್ಟೆ, ನಾಗಾವಿವೃತ್ತ, ಬಸ್ ನಿಲ್ದಾಣ ರಸ್ತೆ, ಲಾಡ್ಜಿಂಗ್ ಕ್ರಾಸ್, ವೆಂಕಟೇಶ್ವರ ಕಾಲೋನಿ, ರೈಲ್ವೆ ನಿಲ್ದಾಣ ರಸ್ತೆ, ಅಂಬೇಡ್ಕರ್ ವೃತ್ತ, ಪಾಲಪ್ ಗಲ್ಲಿ ಸೇರಿದಂತೆ ಅನೇಕ ಸ್ಥಳದಲ್ಲಿ ನಾಯಿಗಳ ಕಾಟ ಹೆಚ್ಚಾಗಿವೆ ಈ ಸ್ಥಳಗಳಲ್ಲಿ ಜನರು ಹೋಗಬೇಕಾದರೆ ಅವರ ಜೀವವನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲಾ- ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ನಾಯಿಗಳ ಕಾಟದಿಂದ ತತ್ತರಿಸಿ ಹೋಗಿದ್ದು, ಶಾಲೆಗೆ ರಜೆ ಹಾಕಿ ಮನೆಯಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಸಣ್ಣ ಮಕ್ಕಳು ಹೊರಗಡೆ ಬಂದರೇ ಸಾಕು ಅವರ ಮೈ ಮೇಲೆಯೆ ಬಂದು ಕಚ್ಚುತ್ತಿರುವುದು ಪಾಲಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಹಿರಿಯರು ಅಂಗಡಿ ಮುಂಗ್ಗಟ್ಟುಗಳಿಗೆ ಹೋಗಿ ಏನಾದರು ಮನೆಯ ಸಾಮಾಗ್ರಿಗಳನ್ನು ತೆಗೆದುಕೊಂಡು ಬರುವ ವೆಳೆ ಎಂಟತ್ತು ನಾಯಿಗಳು ಒಮ್ಮೇಲೆ ಬೊಗಳುವುದರ ಮೂಲಕ ಅವರ ಕೈಯಲ್ಲಿದ್ದ ಚೀಲವನ್ನು ಕಸಿದುಕೊಂಡು ಹೋಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಶ್ರಾವಣ ಮಾಸದ ನಿಮಿತ್ತವಾಗಿ ಹೊರ ರಾಜ್ಯ ಹಾಗೂ ಬೇರೆ ಬೇರೆ ಜಿಲ್ಲೆಗಳಿಂದ ಸುಪ್ರಸಿದ್ಧ ನಾಗಾವಿ ಯಲ್ಲಮ್ಮ ದೇವಸ್ಥಾನಕ್ಕೆ ಬರುವ ಭಕ್ತರಿಗೆ ದೇವಸ್ಥಾನದ ಒಳಗಡೆ ಪ್ರವೇಶ ಮಾಡುವ ವೆಳೆಯಲ್ಲಿ ಶ್ವಾನಗಳು ಅಡೆತಡೆ ಮಾಡುತ್ತಿದ್ದಾವೆ. ಹೀಗಾದರೆ ಮುಂದಿನ ದಿನಗಳಲ್ಲಿ ಜನರು ರಸ್ತೆಗಳ ಮಧ್ಯೆ ಓಡಾಡುವುದು ಕಡಿಮೆಯಾಗುತ್ತದೆ, ಈಗಿನ ಪರಿಸ್ಥಿತಿಯಲ್ಲಿ ಇದೇ ರೀತಿ ಮುಂದುವರೆದರೆ ಜನರು ಯಾವುದೇ ರೀತಿಯಿಂದ ರಸ್ತೆ ಹಾಗೂ ಗಲ್ಲಿ ಗಲ್ಲಿಗಳಲ್ಲಿ ಜನರು ನಡೆದಾಡುವುದು ದುಸ್ಥಿರವಾಗುತ್ತದೆ. ಇದೇ ರೀತಿ ನಾಯಿಗಳ ಹಾವಳಿ ಮುಂದುವರೆದರೆ ಚಿತ್ತಾಪುರ ಪಟ್ಟಣದಲ್ಲಿ ಕಾಮಣಿ ಹಾಗೂ ಕಾಲರಾ, ರಿಬಿಸ್ ರೋಗದಂತಹಾ ಮಹಾಮಾರಿ ರೋಗಗಳು ಉಂಟಾಗುವ ಸಂಭವ ಕಾಣಿಸುತ್ತಿದೆ.
ಮಳೆಗಾಲದಲ್ಲಿ ನಾಯಿ ಕಡಿದರೆ ಬಹಳ ತೊಂದರೆಯಾಗುತ್ತದೆ ಮಹಾಮಾರಿ ರೋಗಗಳು ಹುಟ್ಟಿಕೊಳ್ಳುತ್ತವೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಸೂಕ್ಷ್ಮವಾಗಿ ಕ್ರಮವನ್ನು ಕೈಗೊಂಡು ಸಾರ್ವಜನಿಕರಿಗೆ ತೊಂದರೆ ಆಗದಂತೆ ಅದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನಸಾಮಾನ್ಯರು ತಮ್ಮ ಅಳಲನ್ನು ತೋಡಿಕೊಂಡರು.
ದಿನನಿತ್ಯ ಬಿಟ್ಟು ಬೀಡದೆ ಸುರಿಯುತ್ತಿರುವ ಮಳೆಯಿಂದ ಎಲ್ಲೇಂದರಲ್ಲಿ ಕೆಸರು ಗದ್ದೆಯಾಗಿದೆ. ಅಂತಹದ್ರಲ್ಲಿ ಹಿರಿಯರು, ಮಕ್ಕಳು, ವೃದ್ಧರು ನಡೆದಾಡಲು ಪರುದಾಡುತ್ತಿದ್ದಾರೆ. ಒಂದು ವೆಳೆ ಕೆಸರಿನಲ್ಲಿ ಕಾಲು ಜಾರಿ ಬಿದ್ದರೇ ಸಾಕು ನಾಯಿಗಳು ಓಡೋಡಿ ಬಂದು ಕಚ್ಚಿ ಗಾಯಗೊಳಿಸುತ್ತಿವೆ.
ಪಟ್ಟಣದಲ್ಲಿ ಬೀದಿ ನಾಯಿಗಳು ಹೆಚ್ಚಾಗಿದ್ದರಿಂದ 60-70 ವಯಸ್ಸಿನ ವೃದ್ದರು ತಿರುಗಾಡುವಂತಿಲ್ಲ. ಎಲ್ಲೆಲ್ಲಿ ಮಾಂಸಾಹಾರಿಯ ಅಂಗಡಿ ಮತ್ತು ಉಪಹಾರ ಗೃಹ ಇದ್ದಲ್ಲಿ ಮಾತ್ರ ಹೆಚ್ಚಿಗೆ ನಾಯಿಗಳ ಕಾಟ ಹೆಚ್ಚಾಗಿರುತ್ತದೆ. ಯಾರಿಗಾದರು ನಾಯಿ ಕಡಿದರೆ ಏಳು ಇಂಜೆಕ್ಷನ್ ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಕಡಿವಾಣ ಹಾಕೋರು ಯಾರು? ಇದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ.
ನರಿಹರಿ ಕುಲಕರ್ಣಿ
ನಾಗಾವಿ ನಾಡಿನ ಸಮಾಜ ಸೇವಕ ಚಿತ್ತಾಪುರ.

























