ಕಾಳಗಿ : ಸೆ.20:ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಾಗೂ ಎಲ್ಲಾ 8 ವಾರ್ಡ್ ಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಿವಾಸಿಗಳು ಭಯಭೀರಾಗಿದ್ದಾರೆ.
ಪಟ್ಟಣದ ತರಕಾರಿ ಮಾರುಕಟ್ಟೆ ಮತ್ತು ಮಟನ್ ಮಾರುಕಟ್ಟೆ, ಬಸ್ ನಿಲ್ದಾಣ ರಸ್ತೆ, ಖುರೇಶಿ ಕಾಲೋನಿ ಸೇರಿದಂತೆ ಅನೇಕ ಸ್ಥಳದಲ್ಲಿ ನಾಯಿಗಳ ಕಾಟ ಹೆಚ್ಚಾಗಿವೆ. ಈ ಸ್ಥಳಗಳಲ್ಲಿ ಜನರು ಹೋಗಬೇಕಾದರೆ ಅವರ ಜೀವವನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲಾ- ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ನಾಯಿಗಳ ಕಾಟದಿಂದ ತತ್ತರಿಸಿ ಹೋಗಿದ್ದು, ಶಾಲೆಗೆ ರಜೆ ಹಾಕಿ ಮನೆಯಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಸಣ್ಣ ಮಕ್ಕಳು ಹೊರಗಡೆ ಬಂದರೇ ಸಾಕು ಅವರ ಮೈ ಮೇಲೆಯೆ ಬಂದು ಕಚ್ಚುತ್ತಿರುವುದು ಪಾಲಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಹಿರಿಯರು ಅಂಗಡಿ ಮುಂಗ್ಗಟ್ಟುಗಳಿಗೆ ಹೋಗಿ ಏನಾದರು ಮನೆಯ ಸಾಮಾಗ್ರಿಗಳನ್ನು ತೆಗೆದುಕೊಂಡು ಬರುವ ವೆಳೆ ಎಂಟತ್ತು ನಾಯಿಗಳು ಒಮ್ಮೇಲೆ ಬೊಗಳುವುದರ ಮೂಲಕ ಅವರ ಕೈಯಲ್ಲಿದ್ದ ಚೀಲವನ್ನು ಕಸಿದುಕೊಂಡು ಹೋಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಮುಂದಿನ ದಿನಗಳಲ್ಲಿ ಜನರು ರಸ್ತೆಗಳ ಮಧ್ಯೆ ಓಡಾಡುವುದು ಕಡಿಮೆಯಾಗುತ್ತದೆ, ಈಗಿನ ಪರಿಸ್ಥಿತಿಯಲ್ಲಿ ಇದೇ ರೀತಿ ಮುಂದುವರೆದರೆ ಜನರು ಯಾವುದೇ ರೀತಿಯಿಂದ ರಸ್ತೆ ಹಾಗೂ ಗಲ್ಲಿ ಗಲ್ಲಿಗಳಲ್ಲಿ ಜನರು ನಡೆದಾಡುವುದು ದುಸ್ಥಿರವಾಗುತ್ತದೆ.
ಇದೇ ರೀತಿ ನಾಯಿಗಳ ಹಾವಳಿ ಮುಂದುವರೆದರೆ ಕಾಳಗಿ ಪಟ್ಟಣದಲ್ಲಿ ಕಾಮಣಿ ಹಾಗೂ ಕಾಲರಾ, ರೇಬಿಸ್ ರೋಗದಂತಹ ಮಹಾಮಾರಿ ರೋಗಗಳು ಉಂಟಾಗುವ ಸಂಭವ ಕಾಣಿಸುತ್ತಿದೆ.
ಮಳೆಗಾಲದಲ್ಲಿ ನಾಯಿ ಕಡಿದರೆ ಬಹಳ ತೊಂದರೆಯಾಗುತ್ತದೆ ಮಹಾಮಾರಿ ರೋಗಗಳು ಹುಟ್ಟಿಕೊಳ್ಳುತ್ತವೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಸೂಕ್ಷ್ಮವಾಗಿ ಕ್ರಮವನ್ನು ಕೈಗೊಂಡು ಸಾರ್ವಜನಿಕರಿಗೆ ತೊಂದರೆ ಆಗದಂತೆ ಅದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನಸಾಮಾನ್ಯರಾದ ಬಲರಾಮ ವಲ್ಲ್ಯಾಪುರ ಅವರು ತಮ್ಮ ಅಳಲನ್ನು ತೋಡಿಕೊಂಡರು.
ಪಟ್ಟಣದಲ್ಲಿ ಬೀದಿ ನಾಯಿಗಳು ಹೆಚ್ಚಾಗಿದ್ದರಿಂದ 60-70 ವಯಸ್ಸಿನ ವೃದ್ದರು ತಿರುಗಾಡುವಂತಿಲ್ಲ. ಎಲ್ಲೆಲ್ಲಿ ಮಾಂಸಾಹಾರಿಯ ಅಂಗಡಿ ಮತ್ತು ಉಪಹಾರ ಗೃಹ ಇದ್ದಲ್ಲಿ ಮಾತ್ರ ಹೆಚ್ಚಿಗೆ ನಾಯಿಗಳ ಕಾಟ ಹೆಚ್ಚಾಗಿರುತ್ತದೆ. ಯಾರಿಗಾದರು ನಾಯಿ ಕಡಿದರೆ ಏಳು ಇಂಜೆಕ್ಷನ್ ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಕಡಿವಾಣ ಹಾಕೋರು ಯಾರು? ಇದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ.
ಶಂಕರ ಚೋಕಾ
ಹಿಂದೂ ಜಾಗೃತಿ ಸೇನೆ ತಾಲೂಕು ಅಧ್ಯಕ್ಷ ಕಾಳಗಿ
ಬೀದಿ ನಾಯಿಗಳ ಹಾವಳಿಯಿಂದ ಶಾಲಾ ಮಕ್ಕಳು, ವಯೋವೃದ್ಧರು ಭಯಭೀತರಾಗಿದ್ದಾರೆ. ಬೀದಿ ನಾಯಿಗಳ ಹಾವಳಿ ತಪ್ಪಿಸಲು ತಾಲೂಕು ಆಡಳಿತ ಸೂಕ್ತ ಕ್ರಮ ಕೆ?ಕೊಳ್ಳಬೇಕು.
ನಾಗರಾಜ ಬೇವಿನಕರ್
ದಲಿತ ಸೇನೆ ತಾಲೂಕು ಅಧ್ಯಕ್ಷ ಕಾಳಗಿ























