ಚಿಂಚೋಳಿ:ಸೆ.೮:ಶಿಕ್ಷಕರ ದಿನಾಚರಣೆಯ ನಿಮಿತ್ಯ ಚಿಂಚೋಳಿ ತಾಲ್ಲೂಕಿನ ಗೌಡಪ್ಪ ಗುಡಿ ತಾಂಡಾ ಶಾಲೆಯ ಶಿಕ್ಷಕರಾದ ಉತ್ತಮ ಎ. ದೊಡ್ಮನಿ ರವರಿಗೆ, ಬೆಂಗಳೂರಿನ ಭಾರತ ಜೋಡೊ ಭವನದಲ್ಲಿ ಮಾಜಿ ಪ್ರಧಾನಿ “ಶ್ರೀ ರಾಜೀವ್ ಗಾಂಧಿ ಸ್ಮರಣಾರ್ಥ” ರಾಜ್ಯ ಮಟ್ಟದ “ಶ್ರೇಷ್ಠ ಶಿಕ್ಷಕ” ಪ್ರಶಸ್ತಿಯನ್ನು ಕೆ.ಪಿ.ಸಿ.ಸಿ ಅಧ್ಯಕ್ಷರು ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳಾದ ಆಏ ಶಿವಕುಮಾರ ರವರು ಪ್ರಶಸ್ತಿ ಪ್ರಧಾನ ಮಾಡಿದರು, ಈ ಸಂದರ್ಭದಲ್ಲಿ ರಾಜ್ಯ ವಿಧಾನ ಪರಿಷತ್ ಸದಸ್ಯರು ಹಾಗೂ ಹರಿಯಾಣ ಕಾಂಗ್ರೆಸ್ ಉಸ್ತುವಾರಿಗಳಾದ ಶ್ರೀ ಬಿ.ಕೆ. ಹರಿಪ್ರಸಾದ್, ರಾಜ್ಯಸಭಾ ಸದಸ್ಯರಾದ ಉS ಚಂದ್ರಶೇಖರ, ಶಿಕ್ಷಣ ತಜ್ಞರಾದ ನಿರಂಜನ್ ಆರಾಧ್ಯ, ಶ್ರೀ ಶರಣಪ್ಪ ಮಟ್ಟೂರು ಮಾಜಿ ಪರಿಷತ್ ಸದಸ್ಯರು ಹಾಗೂ ರಾಷ್ಟ್ರ ಶಿಕ್ಷಕ ಫೇಡರೆಷನ್ ಸಂಘದ ಅಧ್ಯಕ್ಷರಾದ ಶ್ರೀ ಬಸವರಾಜ ಗುರಿಕಾರ ಹಾಗೂ ಇತರರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.
























