
ಕಲಬುರಗಿ,ಜ.10: ನೈಸರ್ಗಿಕವಾಗಿ ಬೆಳೆಯುವ ಸವತೆಕಾಯಿ ಜಾತಿಗೆ ಸೇರಿದ ಈ ಕಾಯಿಗೆ ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಸರಿನಿಂದ ಕರೆಯುವರು ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಪುಟ್ಟಿಕಾಯಿ, ಪುಟ್ಟಿ ಹಣ್ಣು ಎಂದು ಕರೆಯುವರು.
ಕಾಯಿ ಇದ್ದಾಗ ಇದಕ್ಕೆ ಕಡಗಾಯಿ ಎಂದೇ ಕರೆಯುವರು. ಇದು ಅತ್ಯಂತ ಕಹಿಯಾಗಿದ್ದರೆ ಹಣ್ಣಾದಾಗ ಅತ್ಯಂತ ಸಿಹಿಯಾಗಿರುವುದು ಸಂಪೂರ್ಣ ಹಣ್ಣಾಗಿ ಸೀಳಿದಾಗ ಅದರಿಂದ ಹೊರಡುವ ವಿಶಿಷ್ಠ ರೀತಿಯ ಸುವಾಸನೆ ದೂರದಿಂದಲೇ ಪುಟ್ಟಿಕಾಯಿ ತನ್ನ ಇರುವಿಕೆಯನ್ನು ಸಾಬೀತುಪಡಿಸುತ್ತದೆ.ಅತ್ಯಂತ ಸಿಹಿಯಾಗಿರುವ ಈ ಪುಟ್ಟಿಕಾಯಿ ಹೇರಳವಾದ ವಿಟ್ಯಾಮಿನ್ ಅಂಶ ಹೊಂದಿರುವದು ಹಾಗೂ ಯಾವುದೇ ರಸಗೊಬ್ಬರ ಕ್ರಿಮಿನಾಶಕ ಬಳಸದೇ ನೈಸರ್ಗಿಕ ರೀತಿಯಲ್ಲಿ ಬೆಳೆಯುವದು.
ಮುಂಚೆ ಈ ದಿನದಲ್ಲಿ ಹೇರಳವಾಗಿ ಬೆಳೆಯುತಿತ್ತು. ಇತ್ತೀಚಿಗೆ ಹೆಚ್ಚಾಗಿ ಕಸಕ್ಕೆ ಕ್ರಿಮಿನಾಶಕ ಸಿಂಪಡಿಸುತ್ತಲಿರುವಾಗ ಈ ಬಳ್ಳಿ ಅಳಿವಿನಂಚಿನಲ್ಲಿದೆ.ಕೆಲವು ಆಸಕ್ತ ರೈತರು ಜೋಳ ,ಕಡಲೆ ಬೀಜದೊಂದಿಗೆ ಪುಟ್ಟಿಕಾಯಿ ಬೀಜ ಮಿಶ್ರಣ ಮಾಡಿ ಬಿತ್ತನೆ ಮಾಡುವರು. ಇದು ಕಾಯಿ ಹಂತದಲ್ಲಿದ್ದಾಗ ಅತ್ಯಂತ ಕಹಿಯಾಗಿರುದು ಅದನ್ನು ಉಪ್ಪಿನಕಾಯಿ ತಯಾರಿಸಲು ಬಳಸುವರು ಇದನ್ನ ಕಸಬಂಡಿ ಎಂದು ಕರೆಯುವರು.ಮೊದಲೆಲ್ಲ ನಮ್ಮ ಗ್ರಾಮೀಣ ಪ್ರದೇಶದ ರೈತರು ಸಂಬಂಧಿಕರ ಮನೆಗೆ ಹೋಗುವಾಗ ತಾವು ಬೆಳೆದ ಪುಟ್ಟಿಕಾಯಿ, ಕುಂಬಳಕಾಯಿ, ಸವತೆಕಾಯಿ,ಮೆಕ್ಕಿಕಾಯಿ ಜೊತೆಗೆ ಬುತ್ತಿ ತಗೊಂಡು ಹೋಗುವ ಪರಿಪಾಠವಿತ್ತು.ಈ ಪುಟ್ಟಿಕಾಯಿ ಮಾರುಕಟ್ಟೆಯಲ್ಲಿ ಸಿಗುವದು ಅಪರೂಪವಾಗಿದೆ.
-ಗುರುರಾಜ. ಪಟ್ಟಣಶೆಟ್ಟಿ























