
ಸಂಜೆವಾಣಿ ವಾರ್ತ
ಹುಮನಾಬಾದ್: ಜೂ.೨೨:ಮಾನಸಿಕ ಒತ್ತಡವನ್ನು ನಿವಾರಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರತಿಯೂಬ್ಬರು ದಿನನಿತ್ಯ ಯೋಗಾಸನ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು, ಎಂದು ಮುಖ್ಯಗುರು ಬಸವರಾಜ ಸಲಹೆ ನೀಡಿದರು.
ತಾಲ್ಲೂಕಿನ ಓತಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಅವರಣದಲ್ಲಿ ಭಾನುವಾರ ನಡೆದ ವಿಶ್ವ ಯೋಗ ದಿನಚರಣೆಯಲ್ಲಿ ಅವರು ಮಾತನಾಡಿದರು. ಯೋಗಾಸನ ಮಾಡುವುದರಿಂದ ಮಕ್ಕಳು ಓದುವಾಗ ಏಕಾಗ್ರತೆ ವೃದ್ಧಿಯಾಗುತ್ತದೆ, ಮನುಷ್ಯನ ಆರೋಗ್ಯ ಹಾಗೂ ಸ್ವಸ್ಥ ಸಮಾಜಕ್ಕೆ ಯೋಗ ಬಹಳ ಮುಖ್ಯವಾಗಿದ್ದು, ಎಲ್ಲರು ಯೋಗ ಮಾಡುವ ಮೂಲಕ ಸ್ವಸ್ಥ, ಸುಂದರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ದೈಹಿಕ ಶಿಕ್ಷಕಿ ಸುನೀತಾ ವಾಡೇಕರ್ ಶಾಲಾ ಮಕ್ಕಳಿಗೆ ಪ್ರತಿ ವರ್ಷ ವಿಶೇಷ ಯೋಗ ಶಿಬಿರಗಳನ್ನು ಕೂಡ ನಡಸುತ್ತಾ ಬರುತ್ತಿರುವುದು ವಿಶೇಷವಾಗಿದೆ ಎಂದರು.
ನ್ಯಾಷನಲ್ ಶಾಲೆ ಅಧ್ಯಕ್ಷ ಮಸ್ತಾನ ಪಟೇಲ್ ಅವರು ಮಾತನಾಡಿ, ನಮ್ಮ ಊರಿನ ಸರ್ಕಾರಿ ಮಾದರಿ ಶಾಲೆಯ ದೈಹಿಕ ಶಿಕ್ಷಕಿಯಾದ ಸುನೀತಾ ವಾಡೇಕರ್ ಅವರು ಸುಮಾರು ೧೫ ವರ್ಷ ಗಳಿಂದ ಮಕ್ಕಳಿಗಾಗಿ ವಿಶೇಷ ಯೋಗ ಶಿಬಿರ ನಡಸುತ್ತಾ ಬರುತಿರುವುದು ನಮ್ಮ ಹೆಮ್ಮೆ ಸಂಗತಿಯಾಗಿದೆ ಎಂದು ಸಂಸತ ವ್ಯಕ್ತಪಡಿಸಿದರು.
ದೈಹಿಕ ಶಿಕ್ಷಕಿ ಸುನೀತಾ ವಾಡೇಕರ್ ಮಾತನಾಡಿ, ಯೋಗ ದಿಂದ ಆರೋಗ್ಯ ಹಾಗೂ ಯೋಗದಲ್ಲಿ ಸಂಪತ್ತು ಅಡಗಿದೆ, ಸದೃಢ ದೇಹದಲ್ಲಿ ಸದೃಢ ಮನಸ್ಸು ನಿರ್ಮಾಣ ವಾಗುತ್ತದೆ ಎಂದರು. ಯೋಗ ಇದು ನನ್ನ ಅಸಕ್ತಿ ವಿಷಯವಾಗಿ ಮಕ್ಕಳಿಗೆ ಪ್ರತಿ ವರ್ಷ ೧ ತಿಂಗಳು ತರಬೇತಿ ವಿಶೇಷ ಶಿಬಿರ ನೀಡುತ್ತಾ ಮಕ್ಕಳಿಗೆ ಜಿಲ್ಲಾ ರಾಜ್ಯ ಮಟ್ಟಕ್ಕೆ ಸ್ವರ್ಧೆ ಮಾಡುವಂತೆ ಅವರಲ್ಲಿ ಆಸಕ್ತಿ ಬೆಳಸಿರುವುದು ಇದರಿಂದ ನನಗೆ ಬಹಳ ಸಂತೋಷವಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಗುತ್ತೆದಾರ ಜಾನಿ ಪಟೇಲ್, ಶಿಕ್ಷಣ ಪ್ರೇಮಿ ಚನ್ನಪ್ಪ ಓತಗಿ, ಪರಮೇಶ್ವರ್, ಹಸನ ಪಟೇಲ್, ಶಾಲೆಯ ಸಹ ಶಿಕ್ಷಕಿಯರಾದ ಭಾರತಿ, ಸರಸ್ವತಿ, ರಾಣಿ, ಸಂಗೀತಾ, ಸಹ ಶಿಕ್ಷಕರಾದ ವೈಜಿನಾಥ, ಲಕ್ಷಣ, ಸೇರಿದಂತೆ ಶಾಲಾ ಮಕ್ಕಳು ಇದ್ದರು.


































