
ಔರಾದ್ :ಜೂ.21: ನಿರಂತರ ಯೋಗಾಭ್ಯಾಸ ಮಾಡುವುದರಿಂದ ರೋಗದಿಂದ ಸಂಪೂರ್ಣ ದೂರವಾಗಿ, ನಿರೋಗಿಗಳಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ ದತ್ತ ಸಾಯಿ ಶನೀಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಪೂಜ್ಯ ಷ.ಬೃ 108 ಶ್ರೀ ಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಅಮರೇಶ್ವರ ಮಹಾವಿದ್ಯಾಲಯದ ಆವರಣದಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಮನಸ್ಸಿಗೆ ಉಲ್ಲಾಸ ಮತ್ತು ದೇಹಕ್ಕೆ ಚೈತನ್ಯ ಲಭಿಸಲು ದಿನನಿತ್ಯ ಯೋಗ ಮಾಡಬೇಕು. ಇದರಿಂದ ದಿನಪೂರ್ತಿ ಕೂಡ ಉತ್ಸಾಹದಿಂದ ಓಡಾಡಲು ಅನುಕೂಲವಾಗುತ್ತದೆ. ಇದರಲ್ಲಿ ಯುವ ಜನತೆ ತಮ್ಮ ಆರೋಗ್ಯ ಬಲಿಷ್ಠವಾಗಿ ಬೆಳೆಸಿಕೊಳ್ಳಲು ಮೊದಲು ಯೋಗ ಮಾಡಲು ಮುಂದಾಗಬೇಕೆಂದರು.
ಶಾಸಕ ಪ್ರಭು.ಬಿ ಚವ್ಹಾಣ ಅವರು ಮಾತನಾಡಿ ಯೋಗವು ಪ್ರಾಚೀನ ಕಾಲದಿಂದಲೂ ಬಂದಿದೆ. ಇದರಿಂದಾಗಿಯೇ ಇದಕ್ಕೆ ಸಾಕಷ್ಟು ಮನ್ನಣೆ ದೊರೆಯಲು ಸಾಧ್ಯವಾಗಿದೆ. ನಮ್ಮ ಋಷಿ ಮುನಿಗಳ ಯೋಗ ವಿಶ್ವಕ್ಕೆ ಮಾದರಿಯಾಗಿದೆ. ಭಾರತ ದೇಶ ವಿಶ್ವಕ್ಕೆ ಯೋಗದ ಮಹತ್ವ ತಿಳಿಸಿದೆ. ಇಡೀ ವಿಶ್ವಕ್ಕೆ ಯೋಗ ಪರಿಚಯಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಸದೃಢ ಸಮಾಜ ನಿರ್ಮಾಣಕ್ಕೆ ಯೋಗ ಅವಶ್ಯಕವಾಗಿದೆ ಎಂದರು.
ಯೋಗಾಚಾರ್ಯ ರಾಜಕುಮಾರ ನಾಯಕ ಅವರು ವಿವಿಧ ಯೋಗ ಆಸನಗಳ ಮಹತ್ವ ತಿಳಿಸಿ ಯೋಗ ಅಭ್ಯಾಸ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಡಾ.ವೈಜಿನಾಥ ಬುಟ್ಟೆ, ಗಣಪತರಾವ ಖುಬಾ, ಶ್ರೀಕಾಂತ ಪಾಟೀಲ, ಕಲ್ಲಪ್ಪ ದೇಶಮುಖ, ಗುರುನಾಥ ವಟಗೆ, ತಹಸೀಲ್ದಾರ್ ಮಹೇಶ ಪಾಟೀಲ, ಸಿಪಿಐ ರಘವೀರಸಿಂಗ ಠಾಕೂರ್, ಅನಿಲಕುಮಾರ ವಾಲ್ದೋಡ್ಡಿ, ಪ್ರಾಚಾರ್ಯ ಉತ್ತಮ ಗಾಯಕವಾಡ, ಶಾಲಿವಾನ ಉದಗೀರೆ, ಡಾ.ಧನರಾಜ ರಾಗಾ, ಶರಣಪ್ಪ ಚಿಟಮೆ, ಶಿವಾನಂದ ಮುಕ್ತೆದಾರ, ಡಾ.ಮನ್ಮಥ ಡೋಳೆ, ಅಶೋಕ ಶೆಂಬೆಳ್ಳಿ, ಅಂಬಾದಾಸ ನೆಳಗೆ, ಅನಿಲ ಮೇತ್ರೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.