ಮುಂದೆ ಬರುವ ಪಾರ್ಮ ಕಂಪನಿಗಳ ಸ್ಥಾಪನೆಗೆ ಅವಕಾಶ ನೀಡಬೇಡಿ

ಸೈದಾಪುರ:ಜೂ.27:ಇರುವ ಪಾರ್ಮ ಕಂಪನಿಗಳು ಸಾಕು ಮುಂದೆ ಬರುವ 36 ರಾಸಾಯನಿಕ ಕಂಪನಿಗಳಿಗೆ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಅವಕಾಶ ನೀಡಬೇಡಿ ಎಂದು ಕೈಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ಟಿ ನಾರಾಯಣಸ್ವಾಮಿ ತಾಕೀತು ಮಾಡಿದರು.
ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳ ಭೇಟಿ ಮಾಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು. ಈ ಪ್ರದೇಶದಲ್ಲಿ ದಿನನಿತ್ಯ ಜನರು ಅನುಭವಿಸುತ್ತಿರುವ ತೊಂದರೆಗಳನ್ನು ಪತ್ರಿಕಾ ಮಾಧ್ಯಮಗಳಲ್ಲಿ ಮತ್ತು ಗ್ರಾಮಸ್ಥರಿಂದ ಕೇಳಿದ್ದೇನೆ. ಕೆಲವೊಂದು ಭಾಗಗಳ ಅಭಿವೃದ್ಧಿಯಾಗಬೇಕಾದರೆ ಕೈಗಾರಿಕೆಗಳು ಅವಶ್ಯಕ, ಆದರೆ ಪರಿಸರಕ್ಕೆ ಮತ್ತು ಜನರಿಗೆ ತೊಂದರೆಯಾಗುವ ಕಂಪನಿಗಳ ಸ್ಥಾಪನೆ ಮಾರಕವಾಗಿದೆ. ಈ ಭೂಮಿ ಅವರ ಪೂರ್ವಿಕರಿಂದ ಬಂದ ಬಳವಳಿಯಾಗಿದ್ದು, ಕೈಗಾರಿಕೆಗಳಿಗೆ ನೀಡಿದ ಕೈಗಳಿಗೆ ಉದ್ಯೋಗ ದೊರಕುವಂತೆ ಮಾಡುವುದು ಅಧಿಕಾರಿಗಳ ಮತ್ತು ಜನಪ್ರತಿನೀಧಿಗಳ ಕರ್ತವ್ಯವಾಗಿದೆ. ಪ್ರಸ್ಥುತ ಇರುವ ಕಂಪನಿಗಳು ಪರಿಸರದ ನಿಯಮಗಳನ್ನು ಮೀರದಂತೆ ಕ್ರಮವಹಿಸಬೇಕು. ಜನರಿಗೆ ತೊಂದರೆಯಾಗದಂತೆ ಕಂಪನಿಗಳು ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂದು ಕೈಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಾಕ್ಸ್1: ಕೈಗಾರಿಕೆಗಳಿಗೆ ಯಾವ ರೀತಿಯಾಗಿ ಪ್ರೇಂಡ್ಲಿ ಇರಬೇಕು.?: ಸ್ಥಳಿಯ ಶಾಸಕರು ಕೈಗಾರಿಕಾ ಸಚಿವರಿಗೆ ಇಲ್ಲಿರುವ ಪರಿಸ್ಥಿಯ ಬಗ್ಗೆ ತಿಳಿಸಿದರೆ, ಅಭಿವೃದ್ಧಿಯಾಗಬೇಕಾದರೆ ಕೈಗಾರಿಕಾ ಪ್ರಂಡ್ಲಿಯಾಗಿರಬೇಕು ಎಂದು ಹೇಳಿದ್ದಾರಂತೆ, ಅವರು ಯಾವ ಅರ್ಥದಲ್ಲಿ ಹೇಳಿದಾರೊ ಗೊತ್ತಿಲ್ಲ. ಕೈಗಾರಿಕೆಗಳು ಬರಬೇಕು ಆದರೆ ಪ್ರಾಣ ಕಳೆಯೋದಕಲ್ಲ. ಪ್ರೇಂಡ್ಲಿ ಇರಬೇಕು ಅಂದರೆ ಯಾವ ರೀತಿ ಇರಬೇಕು ಎಂದು ಸಚಿವರೆ ಇಲ್ಲಿನ ಜನರಿಗೆ ಬಂದು ತಿಳಿಸಲಿ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ಟಿ ನಾರಾಯಣಸ್ವಾಮಿ ವರದಿಗಾರರ ಕೇಳಿದ ಪ್ರಶ್ನೆಗೆ ಉತ್ತರಿಸದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ್, ನಾಗರತ್ನ ಕುಪ್ಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರುಕುಂದಿ, ಗುರುಮಠಕಲ್ ಮಂಡಲ ಅಧ್ಯಕ್ಷ ನರಸಿಂಹಲು ನೀರೆಟ್ಟಿ, ಹಿರಿಯ ಮುಖಂಡ ಭೀಮಣ್ಣಗೌಡ ಕ್ಯಾತ್ನಾಳ್, ಶರಣುಗೌಡ ಬಾಡಿಯಾಳ, ಮಲ್ಲಿಕಾರ್ಜುನ ಹೋನಗೇರಾ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ನಾಯಕ್, ಯುವ ಘಟಕ ಅಧ್ಯಕ್ಷ ಶ್ರೀಧರ ಸಾಹುಕಾರ, ಮೌನೇಶ ಬೇಳಗೇರಾ, ಶ್ರೀದೇವಿ ಶೆಟ್ಟಿಹಳ್ಳಿ, ಅಮರೇಶ ನಾಯಕ್ ಕೂಡಲೂರು, ಶ್ರೀನಿವಾಸ ಕಡೇಚೂರು, ಮರಲಿಂಗ ಜೀನಿಕೆರಾ ಸೇರಿದಂತೆ ಇತರರಿದ್ದರು.