ಅಭ್ಯರ್ಥಿ ಆಯ್ಕೆಗೆ ಶ್ರಮಿಸಲು ಡಿಕೆ ಮೋಹನ್ ಕರೆ

ಕೆ.ಆರ್.ಪುರ, ಸೆ.೧೪- ಕಾಂಗ್ರೆಸ್ ಪಕ್ಷದ ಜವಾಬ್ದಾರಿ ತೆಗೆದುಕೊಂಡ ಪದಾಧಿಕಾರಿಗಳು ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡುವ ಮೂಲಕ ಮುಂದಿನ ಬಾರಿ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಶ್ರಮಿಸುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮೋಹನ್ ಅವರು ತಿಳಿಸಿದರು.


ಕ್ಷೇತ್ರದ ದೇವಸಂದ್ರದ ಗೃಹ ಕಚೇರಿಯಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರಮಾಣಪತ್ರಗಳನ್ನು ವಿತರಣೆ ಮಾಡಿ ಮಾತನಾಡಿದರು.


ಪಕ್ಷದ ಹೊಣೆಗಾರಿಕೆ ಎಂದರೇ ಪಕ್ಷ ಕಟ್ಟುವ ಕಾಯಕವಾಗಿದ್ದು,ಇದು ಅತೀ ಮಹತ್ವದ ಹುದ್ದೆಯಾದ ಹಿನ್ನೆಲೆಯಲ್ಲಿ ಹುದ್ದೆಗೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.


ಕಾಂಗ್ರೆಸ್ ಪಕ್ಷ ಸರ್ವಜನಾಂಗದ ಹಿತ ಕಾಯುವ ಪಕ್ಷವಾಗಿದ್ದು,ಪ್ರತಿಯೊಬ್ಬರ ಪ್ರಜೆಗೂ ನ್ಯಾಯ ಒದಗಿಸುವ ಕಾರ್ಯವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ನುಡಿದರು.


ಹೊರಮಾವು ಬ್ಲಾಕ್ ಅಧ್ಯಕ್ಷ ಸಿ.ವೆಂಕಟೇಶ್, ಕಲ್ಕೆರೆ ಕುಮಾರಣ್ಣ, ಎಸ್ಸಿ ಎಸ್ ಟಿ ಬ್ಲಾಕ್ ಅದ್ಯಕ್ಷರಾಗಿ ಮುನಿಕೃಷ್ಣ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.


ಬ್ಲಾಕ್ ಪ್ರಧಾನ ಕಾರ್ಯದರ್ಶಿ ಯಾಗಿ ರಾಮಪ್ರಸಾದ್, ಪೂರ್ವ ಜಿಲ್ಲಾ ಪರಿಶಿಷ್ಟ ಜಾತಿ ಪ್ರಧಾನ ಕಾರ್ಯದರ್ಶಿ ಕ್ಯಾಲಸನಹಳ್ಳಿ ಶ್ರೀನಿವಾಸ್ ,ಪರಿಶಿಷ್ಟ ಜಾತಿಯ ಹೊರಮಾವು ವಾರ್ಡ ಅಧ್ಯಕ್ಷರಾಗಿ ಎಂ.ವೆಂಕಟೇಶ್, ಚೇಳಕೆರೆ ವಾರ್ಡನ ಅಧ್ಯಕ್ಷರಾಗಿ ಸೋಮೇಶ್,ಮುನಿಪಾಪಯ್ಯ, ಬ್ಲಾಕ್ ಕಾರ್ಯದರ್ಶಿ ಬಾಬು ಮೋಸಸ್,ಕಲ್ಕೆರೆ ವಾರ್ಡನ ಕಾರ್ಯದರ್ಶಿಯಾಗಿ ದಾಸರ್ ,ಬ್ಲಾಕ್ ಉಪಾಧ್ಯಕ್ಷ ರಾಗಿ ಮುನಿವೆಂಕಟಪ್ಪ,ಚೇಳಕೆರೆ ವಾರ್ಡನ ಪರಿಶಿಷ್ಟ ಅಧ್ಯಕ್ಷೆ ಸರಳ,ಅಲ್ಪಸಂಖ್ಯಾತ ಉಪಾಧ್ಯಕ್ಷರಾಗಿ ಅಗರ ಪ್ರಾನ್ಸಿಸ್,ಗ್ಯಾರಂಟಿ ಸಮಿತಿಯ ಸದಸ್ಯರನ್ನಾಗಿ ಶಂಕರ್ ಅವರನ್ನು ನೇಮಕಮಾಡಿ ಆದೇಶ ಪತ್ರ ನೀಡಿದರು.ಪದಾಧಿಕಾರಿಗಳು ತಕ್ಷಣದಿಂದ ಸಂಘಟನಾ ಕಾರ್ಯ ಪ್ರಾರಂಭಿಸಿ, ಪಕ್ಷವನ್ನು ಬಲಪಡಿಸುವಂತೆ ಕಿವಿಮಾತು ಹೇಳಿದರು.


ಈ ಸಂದರ್ಭದಲ್ಲಿ ಕಲ್ಕೆರೆ ಕುಮಾರಣ್ಣ, ಸುಧನ್ವ,ಯುವ ಕಾಂಗ್ರೆಸ್ ಉಪಾಧ್ಯಕ್ಷ ಭರತ್ ಯಾದವ್ ಇದ್ದರು.