ಜ.೧೬ ರಂದು ಭೀಮ ಕೋರೆಗಾಂವ್ ವಿಜಯೋತ್ಸವದ ಡಿಜೆ ಮೆರವಣಿಗೆ

ಸಂಜೆ ವಾಣಿ ವಾರ್ತೆ
ಜಮಖಂಡಿ: ಜ.೧೫:೧೮೧೮ ರಲ್ಲಿ ಭಾರತದ ದೇಶದಲ್ಲಿ ಸ್ವಾಭಿಮಾನ ಮತ್ತು ಆತ್ಮಗೌರವದ ಪ್ರತಿಕವಾಗಿರುವ ಭೀಮಾ ಕೋರೆಗಾಂವ್ ವಿಜಯೋತ್ಸವನ್ನು ನಗರದ ದಲಿತಪರ ಸಂಘಟನೆ ಹಾಗೂ ಎಲ್ಲ ಸಮಾಜದ ಬಾಂದವರ ವತಿಯಿಂದ ಪ್ರತಿ ವರ್ಷ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ದಲಿತ ಮುಖಂಡ ರಮೇಶ ಬಳೋಲಗಿಡದ ಹೆಲಿದರು.

ಯಶಸ್ವಿಯಾಗಿ ೫ ನೇ ವರ್ಷಗಳ ಕಾಲ ನಾವು ಈ ವಿಜಯೋತ್ಸವ ಆಚರಣೆ ಮಾಡಲಾಗುತ್ತಿದೆ ಈ ವರ್ಷ ೨೦೮ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಜ.೧೬ ರಂದು ಅಂಬೇಡ್ಕರ್ ವೃತ್ತದಲ್ಲಿ ಸಾಯಂಕಾಲ ೭ ಗಂಟೆಗೆ ಬೃಹತ್ ಡಿಜೆ ಮೆರವಣಿಗೆ ಮೂಲಕ ಆಚರಣೆ ಮಾಡಲಾಗುತ್ತಿದೆ ಅದೆ ದಿನ ಮಧ್ಯಾನ್ಹ ೧ ಗಂಟೆಗೆ ಅನ್ನ ಸಂತ್ತರ್ಪನೆ ಕಾರ್ಯಕ್ರಮ ಮಾಡಲಾಗುತ್ತಿದೆ ಎಲ್ಲ ಬಾಂಧವರು ಭಾಗಿಯಾಗಿ ಅಣ್ಣ ಸಂತರ್ಪಣೆ ಸೇವಿಸುವದರ ಜೋತೆಗೆ ಡಿಜೆ ಮೆರವಣಿಗೆ ಯಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸ ಬೇಕೆಂದು ಮನವಿ ಮಾಡಿದರು

ಜಿಲ್ಲಾ ಮಜ್ದೂರ್ ಯೂನಿಯನ್ ಕಾಂಗ್ರೆಸ್ ಅದ್ಯಕ್ಷ ತೌಫಿಕ್ ಪಾರಥನಳ್ಳಿ ಮಾತನಾಡಿ ದಲಿತರ ಸ್ವಾಭಿಮಾನಕ್ಕಾಗಿ ಹೊರಾಡಿ ಯುದ್ಧ ಗೆದ್ದ ಭೀಮಾ ಕೋರೆಗಾಂವ್ ಯುದ್ಧವೀರರನ್ನು ನೆನೆಯುವುದಕ್ಕಾಗಿ ಜ.೧೬ ರಂದು ಸಾಯಂಕಾಲ ೭ ಗಂಟೆಗೆ
ಭೀಮಾ ಕೋರೆಗಾಂವ್ ವಿಜಯೋತ್ಸವ ಡಿಜೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಲ್ಲ ಸಮಾಜದ ಬಾಂದವರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿ ಗೊಳಿಸ ಬೇಕೆಂದರು

ಇದೆ ಸಂಧರ್ಭದಲ್ಲಿ ಅಥಣಿ ಮತ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಬೃಹತ್ ಉದ್ದಿಮೆದಾರ ಮಾಮೂನರಸಿಧ ಪಾರಥನಳ್ಳಿ,ಜಿಲ್ಲಾ ಮಜ್ದೂರ್ ಯೂನಿಯನ್ ಕಾಂಗ್ರೆಸ್ ಅದ್ಯಕ್ಷ ತೌಫಿಕ್ ಪಾರಥನಳ್ಳಿ,ಪ್ರಕಾಶ ಮೀಶಿ,ಮಹಾದೇವ ಕಡಕೋಳ, ಪುಟ್ಟು ಪಾಣಿ,ಪ್ರೇಮ ಬಳ್ಳೋಲಗಿಡದ,ಚನ್ನಪ್ಪ ಗುಣದಾಳ,ರಮೇಶ ಬಳೋಲಗಿಡದ,ಮಹಾದೇವ ಕಲೂತಿ,ಬಕ್ಕರ ಕುಡಚಿ,ಹಣಮಂತ ತೇಲಿ ಸೇರಿದಂತೆ ದಲಿತ ಮುಖಂಡರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪ ಹಾರ ಹಾಕಿ ನಮನ ಸಲ್ಲಿಸಿದರು